ಜಿಲ್ಲಾ ಸುದ್ದಿಗಳು
ಬಟ್ಕಳ:
ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅತಿಥಿ ಗೃಹದ ಬಿ ಬ್ಲಾಕ್ ಹಾಗೂ ಗಡಿವೀರ ಮಹಾಸತಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಧರ್ಮಾರ್ಥ ಕಲ್ಯಾಣಮಂಟಪದ ಉದ್ಗಾಟನೆ ಸಮಾರಂಭಕ್ಕೆ ಶ್ರೀ ಪರ್ತಗಾಳಿ ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಗಳು ಸಂಜೆ 4-30 ಕ್ಕೆ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು.80 ಲಕ್ಷರೂಗಳ ವೆಚ್ಚದಲ್ಲಿ ನಿರ್ಮಾಣವಾದ ಶ್ರೀ ದುರ್ಗಾಪರಮೇಶ್ವರಿಅಥಿತಿ ಗೃಹದ ಬಿ ಬ್ಲಾಕ್ 5-00 ಗಂಟೆಯ ಸುಮೂರ್ತದಲ್ಲಿ ಶ್ರೀಗಳು ಉದ್ಘಾಟಿಸಿದರು.
ನಂತರ ಗಡಿವೀರ ಮಹಾಸತಿ ದೇವಸ್ಥಾನಕ್ಕೆ 5-30 ಕ್ಕೆ ಆಗಮಿಸಿದ ಶ್ರೀಗಳು 1.25 ಕೋಟಿ ರೂಗಳಲ್ಲಿ ನಿರ್ಮಾಣವಾದ 8500 ಚದರ ಅಡಿಯಲ್ಲಿ ನಿರ್ಮಾಣವಾದ ಶ್ರೀ ದುರ್ಗಾಪರಮೇಶ್ವರಿ ಧರ್ಮಾರ್ಥಕಲ್ಯಾಣ ಮಂಟಪದ ಉಧ್ಘಾಟನೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ದೇವರ ಸ್ತುತಿಯೊಂದಿಗೆ ಪ್ರಾರಂಭಿಸಲಾಯಿತು.
ನಂತರ ಶ್ರೀಗಳ ಪಾದ್ಯಪೂಜೆಯನ್ನು ಆಡಳಿತ ಸಮೀತಿಯ ಸದಸ್ಯರು ನೆರವೇರಿಸಿದರು. ನಂತರ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ನಾರಾಯಣ ದೈಮನೆ ಸ್ವಾಗತ & ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಟ್ರಸ್ಟಿಗಳಾದ ಅರವಿಂದ ಪೈ ವರದಿ ವಾಚಿಸಿದರು. ಮಾರಿಜಾತ್ರಾ ಸಮಿತಿಯ ಅದ್ಯಕ್ಷರಾದ ರಾಮಾ ಮೋಗೇರ ಮಾತನಾಡಿ ದೇವಸ್ಥಾನದ ಅಭಿವೃಧ್ಧಿ ವಿಷಯದಲ್ಲಿ ನಾವೇಲ್ಲ ಜೋತೆಯಾಗಿ ಕಮಿಟಿಯವರಿಗೆ ಸಹಕರಿಸೋಣ ಹಾಗೂ ಮುಂದಿನ ದಿನಗಳಲ್ಲಿ ಶ್ರೀ ದೇವಸ್ಥಾನದ ವತಿಯಿಂದ ಆರೋಗ್ಯ ಕೇಂದ್ರವು ಆಳ್ವೇಕೊಡಿ ಗ್ರಾಮದಲ್ಲಿ
ಆರಂಭಗೋಳ್ಳುವ ಬಗ್ಗೆಯೂ ಹರ್ಷವ್ಯಕ್ತಪಡಿಸಿದರು. ಸಭಾಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಶ್ರೀಗಳು ದೇವರ ಅನುಗ್ರಹ ದಿಂದ ಮಾತ್ರ ದಾನಮಾಡುವಂತಹ ಬಾಗ್ಯ ಲಭ್ಯವಾಗುತ್ತದೆ. ನಿಸ್ವಾರ್ಥ ದಾನದಿಂದ ಉತ್ತಮ ಗೌರವ ಪ್ರಾಪ್ತಿಯಾಗುತ್ತದೆ. ವೃಂದಾವನಸ್ಥ ಹಿರಿಯ ಶ್ರೀಗಳ ಸಂಕಲ್ಪವನ್ನು ಪೂರ್ಣಗೋಳಿಸುವುದು ಶಿಷ್ಯರಾದ ನಮ್ಮ ಕರ್ತವ್ಯ ಹಾಗಾಗಿ ಬಂದಿರುವುದಾಗಿ ತಿಳಿಸಿದರು. ದಾನಿಗಳಿಗೆ ಹಾಗೂ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆಯನ್ನು ಶ್ರೀಗಳು ನೀಡಿದರು. ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
Be the first to comment