ಜಿಲ್ಲಾ ಸುದ್ದಿಗಳು
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯನ್ನು ಜಾರಿಗೊಳಿಸಿ ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಉಳಿದುಕೊಂಡಿದ್ದು, ಅಂತಹವರನ್ನು ಗುರುತಿಸಿ ಕೂಲಿ ಕೆಲಸವನ್ನು ಕಲ್ಪಿಸಿಕೊಡುವುದು,ಕೆಲಸದ ವೇಳೆ ಅವರಿಗೆ ಮಾಸ್ಕ ಗಳು, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು.
ಬಾಗಲಕೋಟೆ:(ಕೆಲೂರ) ಇಳಕಲ್ಲ ತಾಲೂಕಿನ ಕೆಲೂರ ಗ್ರಾಮಕ್ಕೆ ನರೇಗಾ ಕಾಮಗಾರಿ ವೀಕ್ಷಣೆ ಹಿನ್ನೆಲೆಯಲ್ಲಿ ಕೆಲೂರ ಗ್ರಾಪಂ ವ್ಯಾಪ್ತಿಯ ಆಸಂಗಿ ಅವರ ಜಮೀನಿನಲ್ಲಿ ನಡೆದಿರುವ ಬದು ನಿರ್ಮಾಣ ನರೇಗಾ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಕಳಸದ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೂಲಿ
ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶದಿಂದ ನರೇಗಾದಡಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.ಒಡ್ಡು ಹಾಗೂ ಬದುಗಳ ನಿರ್ಮಾಣದ ಜೊತೆಗೆ ಕೆರೆ, ಕಾಲುವೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
ಕಾರ್ಮಿಕರ ಜೊತೆ ಚರ್ಚಿಸುತ್ತ ಕಾರ್ಮಿಕರಿಗೆ ನೀಡುವ ಸಂಬಳ,ಸಮಯ,ಪ್ರತಿ ತಂಡದ ನಾಯಕನ ಕರ್ತವ್ಯಗಳು ಕಟ್ಟೆ ಕಡೆಯಲು ತೆಗೆದುಕೊಳ್ಳುವ ಸಮಯ,ಒಂದು ಕಟ್ಟೆಯ ಆಳ-ಉದ್ದ ,ಹಾಗೆ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರು ಪಾಲಿಸಬೇಕಾದ ನಿಯಮಗಳು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದರು.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಉಳಿದುಕೊಂಡಿದ್ದು, ಅಂತಹವರನ್ನು ಗುರುತಿಸಿ ಕೂಲಿ ಕೆಲಸವನ್ನು ಕಲ್ಪಿಸಿಕೊಡಬೇಕು. ಕೆಲಸದ ವೇಳೆ ಅವರಿಗೆ ಮಾಸ್ಕ ಗಳು,ವಿಶೇಷ ವರ್ಗದವರಿಗೂ ಕೆಲಸಕ್ಕೆ ಅವಕಾಶ ಮಾಡಿಕೊಡುವುದು, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೆಲೂರ ಗ್ರಾಮದಲ್ಲಿ ಒಟ್ಟು 1602 ಹೆಕ್ಟೇರ್ ಭೂಮಿಗೆ ಒಡ್ಡು ನಿರ್ಮಾಣ ಕಾಮಗಾರಿಗೆ ಕ್ರೀಯಾ ಯೋಜನೆ ರೂಪಿಸಿದ್ದು ಈಗಾಗಲೆ 160 ಹೆಕ್ಟೇರ್ ಭೂಮಿಯ ಕಾಮಗಾರಿ ಪೂರ್ಣಗೊಂಡಿದೆ. ಉಸ್ತುವಾರಿ ಕಾರ್ಯದರ್ಶಿ ಭೇಟಿ ನೀಡಿದ ಸಂದರ್ಭದಲ್ಲಿ 57 ಹೆಕ್ಟೇರ್ ಭೂಮಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿತ್ತು.ಪ್ರತಿ ದಿನವೊಂದಕ್ಕೆ 180 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಪ್ಪ ಪಟ್ಟಿಹಾಳ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಮರೇಶ ನಾಯಕ,ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಎಸ್.ಬಿ.ಕೊಂಗವಾಡ,ಹುನಗುಂದ ತಾಲೂಕಾ ದಂಡಾಧಿಕಾರಿ ಶ್ರೀಮತಿ ಶ್ವೇತಾ ಬಿಡಿಕರ್,ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಬಿ.ಮ್ಯಾಗೇರಿ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಪ್ಪ ಪಟ್ಟಿಹಾಳ,ಸಿಪಿಐ ಹೊಸಕೇರೆಪ್ಪ.ಕೆ,ಪಿಎಸ್ಐ ಎಮ್.ಜಿ.ಕುಲಕರ್ಣಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ,ಸಹಾಯಕ ಕೃಷಿ ಅಧಿಕಾರಿ ಆರ್.ವಾಯ್.ಪಾಟೀಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ, ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಪಿಕೆಪಿಎಸ್ ಸದಸ್ಯರಾದ ವಜಿರಪ್ಪ ಪೂಜಾರ ಆರೋಗ್ಯ ಸಹಾಯಕಿ ಶ್ರೀಮತಿ ಕುಸುಮಾ ಮಡಿವಾಳರ,ಆಶಾ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.
Be the first to comment