ಬಹುಜನ ಸಮಾಜ ಪಕ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಮನವಿ

ಲಿಂಗಸುಗೂರ  ಜೂನ್ 10 ::-
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಶೇ.300ಕ್ಕೂ ಹೆಚ್ಚು ಪ್ರತಿಶತ ತೆರಿಗೆ ವಿಧಿಸಿವೆ. ಇದರಿಂದ ದೇಶದ್ಯಾಂತ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಲೀಟರಗೆ ರೂ 100ಕ್ಕಿಂತಲೂ ಹೆಚ್ಚಾಗಿದೆ. ಜಗತ್ತಿನ ಯಾವ ದೇಶದಲ್ಲೂ ಪೆಟ್ರೋಲ್ ಮತ್ತು ಡಿಸೆಲ್ ಮೇಲೆ ಇಷ್ಟೊಂದು ತೆರಿಗೆ ವಿಧಿಸಿ ತನ್ನ ದೇಶದ ಪ್ರಜೆಗಳನ್ನು ಶೋಷಣೆ ಮಾಡುವ ಇನ್ನೊಂದು ಸರ್ಕಾರ ಇಲ್ಲ. ಕೋವಿಡ-19 ನ್ನು ಸರಿಯಾಗಿ ನಿರ್ವವಸಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.


ರೋಗಿಗಳಿಗೆ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್‌, ಜಾಷದೋಪಾಚಾರಗಳನ್ನು ಸಕಾಲಕ್ಕೆ ಒದಗಿಸದ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಲಾಕ್ ಡೌನನಿಂದಾಗಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡು ಬಡತನ ಮತ್ತು ಹಸಿವಿನಿಂದ ತತ್ತರಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಪೆಟ್ರೋಲ್ ಮತ್ತು ಡೀಸಲ್ಸ್ ಮೇಲಿನ ಬೆಲೆ ಏರಿಕೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಆಗಿದೆ. ಅಡುಗೆ ಎಣ್ಣೆ ಲೀಟರಗೆ ರೂ200 ದಾಟಿದೆ. ಅ ಸಿಲಿಂಡರ್ ಬೆಲೆ ರೂ1000 ಸಮೀಪಿಸುತ್ತಿದೆ. ಇವುಗಳ ಜೊತೆಗೆ ಆಹಾರ ಧ್ಯಾನಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಇಂತಹ ಸಂಧರ್ಭದಲ್ಲಿ ಜನ ಸಾಮನ್ಯರ ನೆರವಿಗೆ ನಿಲ್ಲಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್ ಮತ್ತು ಡೀಸಲ್ ಮೇಲೆ ತೆರಿಗೆ ವಿಧಿಸಿ ಜನರನ್ನು ಮತ್ತಷ್ಟು ಶೋಷಣೆ ಮಾಡುತ್ತೀವೆ. ಆದ್ದರಿಂದ ಘನವೆತ್ತ ರಾಷ್ಟ್ರಪತಿಗಳಾಧ ತಾವು ತಕ್ಷಣ ಮಧ್ಯ ಪ್ರವೇಶ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅವೈಜ್ಞಾನಿಕ ತೆರಿಗೆ ಏರಿಕೆಯನ್ನು ಕೈ ಬೀಡುವಂತೆ ಸಹಾಯಕ ಆಯುಕ್ತ ರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ
ಅನಿಲಕುಮಾರ ಅಮರೇಶ ಆನೆಹೊಸೂರ ಜಾವಿದ ಪಾಷಾ ಇನ್ನಿತರರು ಇದ್ದರು

Be the first to comment

Leave a Reply

Your email address will not be published.


*