45 ವರ್ಷ ಮೆಲ್ಪಟ್ಟವರಿಗೆ ಕೋವಿಡ್ ಲಸಿಕೆ ಅಭಿಯಾನ: ಅಧ್ಯಕ್ಷ ಅಮರೇಶ ಮೇಟಿ ಚಾಲನೆ

 

ಲಿಂಗಸ್ಗೂರ:: ಲಿಂಗಸ್ಗೂರ ತಾಲ್ಲೂಕಿನ ರೋಡಲಬಂಡಾ ಗ್ರಾಮ ಪಂಚಾಯತಿಯಲ್ಲಿ ಕರೋನ ಲಸಿಕೆ ಅಭಿಯಾನ ಆರಂಭ

ಪ್ರತಿಯೊಬ್ಬರೂ ಸ್ವಯಿಚ್ಚೆ ಇಂದ ಮುಂದೆ ಬಂದು ಲಸಿಕೆ ಪಡೆಯುವ ಮೂಲಕ ಕರೋನವನ್ನು ಪೂರ್ತಿಯಾಗಿ ತಡೆಗಟ್ಟಲು ನಮ್ಮೊಂದಿಗೆ ಸ್ಪಂದಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮರೇಶ ಮೇಟಿ ತಿಳಿಸಿದರು . ರೋಡಲಬಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಲಬೆಂಚಿ,ಸುಣಕಲ್ಲ್,ಚಿಕ್ಕ ಉಪ್ಪೇರಿ,ಜಂಗಿರಾಂಪುರ ತಾಂಡ,ರೋಡಲಬಂಡಾ ಯು ಕೆ ಪಿ ರೋಡಲಬಂಡಾ ಹಳ್ಳಿಗಳಿ ಗ್ರಾಮದಲ್ಲಿ ದಿನಾಂಕ ಮಂಗಳವಾರ ಆಯೋಜಿಸಲಾಗಿದ್ದ ಕೋವಿಡ್ ಲಸಿಕಾ ಕ್ಯಾಂಪ್ ನಲ್ಲಿ ಅವರು ಮಾತನಾಡಿದರು .

ಈ ಸಂದರ್ಭದಲ್ಲಿ 45 ವರ್ಷ ಮೆಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು . ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಯಶ್ರೀ ಮೇಡಂ , ಬಿಲ್ ಕಲೆಕ್ಟರ್ ಬಾಸ್ಕರ, ರೋಡಲಬಂಡಾ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ರಬ್ಬಲರ ಆರೋಗ್ಯ ಸಿಬ್ಬಂದಿ , ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು , ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*