ನರೇಗಾ ಕಾಮಗಾರಿಗಳಿಗೆ ತಾಲೂಕಿನಲ್ಲಿ ಉತ್ತಮ ಬೇಡಿಕೆ ೨೪ ಗ್ರಾಪಂಗಳಲ್ಲಿ ನರೇಗಾದಡಿ ಕಾರ್ಯ, ಶೇ.೯೮ರಷ್ಟು ಪ್ರಗತಿ

ವರದಿ: ಹೈದರ್‌ಸಾಬ್ ಕುಂದಾಣ

ರಾಜ್ಯ ಸುದ್ದಿಗಳು

ದೇವನಹಳ್ಳಿ   ತಾಲೂಕು ವ್ಯಾಪ್ತಿಯ ೨೪ ಗ್ರಾಪಂಗಳಲ್ಲಿ ಗ್ರಾಪಂ ಹಾಗೂ ಅನುಷ್ಠಾನ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳ ಸಹಕಾರದಿಂದ ಸರಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ನಿರ್ಮಿಸಿರುವ ಸಾಕಷ್ಟು ಕೃಷಿ ಹೊಂಡಗಳಲ್ಲಿ ಮಳೆ ನೀರಿನಿಂದ ಭರ್ತಿಯಾಗಿವೆ. ಪ್ರಸ್ತುತ ರೈತರು ಕೃಷಿ ಹೊಂಡಗಳ ನಿರ್ಮಾಣದತ್ತ ಒಲವು ತೋರಿಸುತ್ತಿದ್ದಾರೆ.

ಅಂತರ್ಜಲ ವೃದ್ಧಿಗಾಗಿ ಜಲಶಕ್ತಿ ಅಭಿಯಾನವನ್ನು ಸರಕಾರ ಅನುಷ್ಠಾನಗೊಳಿಸಿದೆ. ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಜಲ ಸಂರಕ್ಷಣೆ ನಡೆಸುವ ಉದ್ದೇಶದಿಂದ ಏ.೧ ರಿಂದ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ. ಈ ಯೋಜನೆಯಡಿಯಲ್ಲಿ ಸಾಮೂಹಿಕ ಮತ್ತು ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು ನಿರ್ಮಾಣ, ಗೋಕಟ್ಟೆ-ಕಲ್ಯಾಣಿ, ಕೆರೆಗಳ ಹೂಳು ಕಾಮಗಾರಿ, ರಾಜಕಾಲುವೆ, ನೀರು ಕಾಲುವೆ, ಕೊಳವೆ ಬಾವಿಗಳ ಮರುಪೂರಣ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜಲ ಸಂಪನ್ಮೂಲ ವೃದ್ಧಿಯಾಗಲು ಕೃಷಿ ಹೊಂಡದ ಪಾತ್ರ ಹೆಚ್ಚು ಇದೆ.ರೈತರ ಜಮೀನಿನಲ್ಲಿ ನರೇಗಾದಡಿಯಲ್ಲಿ ಕೃಷಿಹೊಂಡಗಳೇನೋ ಮಾಡಿಕೊಂಡು ಫಲವತ್ತಾತದ ಬೆಳೆ ಇಡಲು ಈ ಯೋಜನೆ ಬಹಳಷ್ಟು ಸಹಕಾರಿಯಾಗಿದೆ. ತಾಲೂಕಿನ ೨೪ ಗ್ರಾಮ ಪಂಚಾಯಿತಿಗಳಲ್ಲಿ ೨೦೨೧-೨೨ನೇ ಸಾಲಿನಲ್ಲಿ ೯೮ ಕೃಷಿ ಹೊಂಡ, ೧೭೧ ಬದು ನಿರ್ಮಾಣ, ೧ ಕೆರೆ ಹೂಳು ಕಾರ್ಯ ಪ್ರಗತಿಯಲ್ಲಿದ್ದು, ಪ್ರಸ್ತುತ ೩ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಮಳೆ ನೀರು ಕೊಯ್ಲು ಒಟ್ಟು ೧೩ ಘಟಕ ಮಾಡಲಾಗಿದೆ. ೩ ಕಲ್ಯಾಣಿಗಳ ಜೀರ್ಣೋದ್ಧಾರ ಮಾಡಲಾಗಿದೆ. ಎರೆಹುಳು ಗೊಬ್ಬರತೊಟ್ಟಿ (ವರ್ಮಿ ಕಾಂಪೋಸ್ಟ್) ೬ ಆಗಿರುತ್ತದೆ. ಇಂಗುಗುಂಡಿಯ ವೈಯಕ್ತಿಕ ಕಾಮಗಾರಿಗಳು ನಡೆದಿವೆ.

CHETAN KENDULI

 

ತಾಲೂಕಿನ ವಿವಿದೆಡೆ ನಿರ್ಮಿಸಿರುವ ಗೋಕಟ್ಟೆಗಳು ಅಂತರ್ಜಲ ವೃದ್ಧಿಯ ಜತೆಗೆ ಪ್ರಾಣಿ, ಪಕ್ಷಿ ಸಂಕುಲಕ್ಕೆ ಬಾಯಾರಿಕೆ ತಣಿಸುತ್ತವೆ. ಪರಿಣಾಮ ಗೋಕಟ್ಟೆಗಳ ಬಳಿಯಲ್ಲಿ ಪ್ರಾಣಿ, ಪಕ್ಷಿ ಸಂಕುಲದ ಕಲರವ ಸೃಷ್ಠಿಯಾಗತೊಡಗಿದೆ. ಕೆರೆಗಳ ಹೂಳು ಸ್ವಚ್ಛ ಮಾಡಿರುವುದು ಕೆರೆಯಲ್ಲಿನ ನೀರು ಸ್ವಚ್ಛವಾಗಿದೆ. ಇದರಿಂದ ಕೆರೆಯ ನೀರನ್ನು ಬಳಕೆ ಮಾಡಲು ಯೋಗ್ಯವಾಗುತ್ತಿದೆ.


ರೈತರಿಗೆ ವರದಾನವಾದ ಕೃಷಿಹೊಂಡ: ಮುಂಗಾರು ಪ್ರಾರಂಭವಾಗುತ್ತಿದ್ದಂತೆ, ಸಾಕಷ್ಟು ಕೃಷಿ ಹೊಂಡಗಳಲ್ಲಿ ಮಳೆ ನೀರು ನಿಲ್ಲುವುದರ ಜೊತೆಗೆ ಉತ್ತಮ ಬೆಳೆ ಇಡಲು ಸಹಕಾರಿಯಾಗಿದ್ದು, ಸಾಕಷ್ಟು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಹಳೆ ಕೃಷಿ ಹೊಂಡ, ಕಳೆದ ಸಾಲಿನಲ್ಲಿ ಕೃಷಿ ಹೊಂಡಗಳ ಪೈಕಿ ಶೇ.೭೦ರಷ್ಟು ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ. ಇದು ಕೃಷಿ ಬಳಕೆ ಮತ್ತು ಅಂತರ್ಜಲ ವೃದ್ಧಿಗೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಬದು ನಿರ್ಮಾಣ ಮಾಡಿರುವ ರೈತರಿಗೆ ಮಳೆನೀರು ವರದಾನವಾಗಿ ಪರಿಣಮಿಸಿದೆ.


ನರೇಗಾ ಕಾಮಗಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಸರಕಾರದಿಂದ ರೈತರಿಗೆ ದೊರೆಯುವ ಹಲವು ಸೌಲಭ್ಯಗಳನ್ನು ಗ್ರಾಪಂ ಮಟ್ಟದಲ್ಲಿ ಕಾಮಗಾರಿಗಳನ್ನು ಕೈಗೊಂಡು, ಸಮಗ್ರ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿವೆ. ಅದರ ಸದುಪಯೋಗವನ್ನು ಆಯಾ ಗ್ರಾಪಂಗಳ ರೈತರು ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿ ಹೊಂದಬೇಕು. ಈವರೆಗೆ ಶೇ.೯೮ರಷ್ಟು ಜಲಶಕ್ತಿ ಅಭಿಯಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದಂತೆ ಸಾಕಷ್ಟು ಕಾಮಗಾರಿಗಳು ಯಶಸ್ವಿಯಾಗಿವೆ.  ಎಚ್.ಡಿ.ವಸಂತಕುಮಾರ್ | ತಾಪಂಇಒ,ದೇವನಹಳ್ಳಿಪ್ರಮುಖಾಂಶಗಳುಶಾಲೆಗಳಲ್ಲಿ ಮಳೆ ನೀರು ಕೊಯ್ಲು ೯೮ ಕೃಷಿ ಹೊಂಡ, ೧೭೧ ಬದು ನಿರ್ಮಾಣ೧೩ ಮಳೆ ನೀರು ಕೊಯ್ಲು ಘಟಕ ಏ.೧ರಿಂದ ಜಲಶಕ್ತಿ ಅಭಿಯಾನ ಪ್ರಗತಿಕಲ್ಯಾಣಿ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ

Be the first to comment

Leave a Reply

Your email address will not be published.


*