ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೇತೃತ್ವದ ತಂಡ ಮುಧೋಳ ನಗರದಲ್ಲಿ ಲೋಕಾಪೂರ ನಗರದಲ್ಲಿ ಕೊಟ್ಪಾ ದಾಳಿ ನಡೆಸಿ 24 ಪ್ರಕರಣಗಳನ್ನು ದಾಖಿಸಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಸೆಕ್ಸನ್ 4, 6ಎ ಅಡಿಯಲ್ಲಿ 24 ಪ್ರಕರಣ ದಾಖಲಿಸಿ ಒಟ್ಟು 2300 ರೂ.ಗಳ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಟಳ್ಳಿ, ಸಮಾಜ ಕಾರ್ಯಕರ್ತ ಶಿವಲಿಂಗ ಕರಗಣ್ಣಿ ಹಾಗೂ ಸಿಬ್ಬಂದಿಗಳು ಇದ್ದರು.
Be the first to comment