ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವುದೇ ಮುಖ್ಯ ಗುರಿ….!!! ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸ್ಥಾನಕ್ಕೆ ನಾನು ಸೇವಾಕಾಂಕ್ಷಿ ಅಭ್ಯರ್ಥಿ: ನಾಡೋಜ ಡಾ.ಮಹೇಶ ಜೋಶಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಾಳಾಗದೇ ಸೇವಾಕಾಂಕ್ಷಿಯಾಗಿ ಸ್ಪರ್ಧಿಸಿದ್ದು ಸಮಸ್ತ ಕನ್ನಡ ನಾಡಿನ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಸಂತ ಶಿಶುನಾಳ ಶರೀಫರ ಗುರುಗಳಾದ ಕಳಸದ ಗುರುಗೋವಿಂದ ಭಟ್ಟರ ವಂಶಜ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಸದಸ್ಯರ ಕುರಿತು ಮಾತನಾಡಿದ ಅವರು, ಕನ್ನಡಾಭಿಮಾನ ಎನ್ನುವುದು ನಮ್ಮ ವಂಶದಿಂದಲೇ ಬಂದಿದೆ. ಆದರೆ ಕನ್ನಡ ಭಾಷೆಯನ್ನು ಹೆಚ್ಚಿನ ರಂಗದಲ್ಲಿ ಪ್ರಚಳಿಸುವ ಸಂಕಲ್ಪ ಮಾಡಿದ್ದೇನೆ ಎಂದು ಅವರು ಹೇಳಿದರು.



ನಿವೃತ್ತ ನಯ್ಯಾಧೀಶ ನಾಗರಾಜ ಹರಳಿ ಮಾತನಾಡಿ, ಮಹೇಶ ಜೋಶಿಯವರು ಈಗಾಗಲೇ ಕನ್ನಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ದೂರದರ್ಶನ ಚಂದನ ದೆಹಲಿ ಮತ್ತು ದಕ್ಷಿಣ ಭಾರತ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದಾರೆ. ಇಂತಹ ವ್ಯಕ್ತಿಗೆ ಕನ್ನಡ ಪರಿಷತ್ತಿನ ಅಧ್ಯಕ್ಷಗಿರಿ ಒದಗಿಸುವುದು ಶ್ರೇಷ್ಠವಾಗುತ್ತದೆ ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿದರು.


ಪರಿಷತ್ತ ಚುನಾವಣೆಯ ಪ್ರಣಾಲಿಕೆಗಳು:
ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸುವಲ್ಲಿ ಎಲ್ಲ ರೀತಿಯ ಭಗೀರಥ ಪ್ರಯತ್ನ ಮಾಡುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಸಂಫೂರ್ಣ ಪಾದರ್ಶಕವನ್ನಾಗಿಸುವುದು, ಪರಿಷತ್ತಿನ ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕೃತಗೊಳಿಸುವುದು, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತಾಯಿಸುವುದು, ಪರಿಷತ್ತಿನ ನಿಬಂಧನೆಗಳ ಪರಿಷ್ಕರಣೆ ಮಾಡುವುದು, ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸರ್ವಾಧ್ಯಕ್ಷ ಸ್ಥಾನಮಾನ ಒದಗಿಸುವುದು, ರಾಜ್ಯದ ಎಲ್ಲ ತಾಲೂಕಿಗೂ ಕನ್ನಡ ಭವನಗಳ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಹಾಗೂ ಜನೋಪಯೋಗಿಯನ್ನಾಗಿಸಿ ಜನಸಾಮಾನ್ಯರ ಪರಿಷತ್ತನ್ನಾಗಿಸಿ ಅಜೀವ ಸದಸ್ಯತ್ವದ ಶುಲ್ಕ ಕಡಿಮೆಗೊಳಿಸುವುದು ಸೆರಿದಂತೆ 16 ಪ್ರಣಾಳಿಕೆಯನ್ನು ಡಾ.ಮಹೇಶ ಜೋಶಿಯವರು ಮಂಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಚುನಾವಣಾ ಪ್ರಚಾರ ಸಮೀತಿ ಕಾರ್ಯಾಧ್ಯಕ್ಷ ನಬೀಸಾಬ ಕುಷ್ಠಗಿ, ಸದಸ್ಯರಾದ ಮಹೇಶ ಕಿತ್ತೂರ, ವೆಂಕನಗೌಡ ಪಾಟೀಲ, ಶ್ರೀಶೈಲ ಹೂಗಾರ ಸೇರಿದಂತೆ ಇತರರಿದ್ದರು. ಉದಯಸಿಂಗ್ ರಾಯಚೂರು ಸ್ವಾಗತಿಸಿ ವಂದಿಸಿದರು.

ಹಾಸ್ಯ ಕಲಾವಿ ಹೂಗಾರ ಅವರಿಂದ ಸನ್ಮಾನ:

ಮುದ್ದೇಬಿಹಾಳ ತಾಲೂಕಿನ ಹಿರಿಮೆಯನ್ನು ರಾಜ್ಯಾಧ್ಯಂತ ಪ್ರಚಳಿಸುತ್ತಿರುವ ಹಾಸ್ಯ ಕಲಾವಿ ಹಾಗೂ ಮಾಜಿ ಗ್ರಾಪಂ ಸದಸ್ಯ ಶ್ರೀಶೈಲ ಹೂಗಾರ ಅವರು ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ ಗುರು ಗೋವಿಂದ ಭಟ್ಟರ ವಂಶಸ್ಥ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ಸನ್ಮಾನಿಸಿದರು.

 

Be the first to comment

Leave a Reply

Your email address will not be published.


*