ದಿವ್ಯಾಂಗರಿಗೆ ಆಹಾರ ಕಿಟ್ ನೀಡದೆ ಸರ್ಕಾರದ ಧೋರಣೆ; ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ

ತಾಲೂಕಿನಲ್ಲಿರುವ ದಿವ್ಯಾಂಗರು ಹಾಗೂ ಪಾಲಕ ಕಾರ್ಮಿಕರಿಗೆ ಕೋವಿಡ್ ಅಲೆಯ ಸಂದರ್ಭದಲ್ಲಿ ಆಹಾರ ಕಿಟ್ ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ, ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನಲ್ಲಿ ಒಟ್ಟೂ 1781 ಅಂಗವಿಕಲರು ಹಾಗೂ ಪಾಲಕ ಕಾರ್ಮಿಕರು ವಾಸವಾಗುತ್ತಿದ್ದು, ಅವರಿಗೆ ಕೋವಿಡ್ 1 ಮತ್ತು 2 ನೆಯ ಅಲೆಯ ಸಂದಂರ್ಭದಲ್ಲಿ ಯಾವುದೇ ಕಿಟ್ ಅಥವಾ ಜೀವನ ನಿರ್ವಹಣೆಗಾಗಿ ಆರ್ಥಿಕ ಸಹಾಯವನ್ನು ಒದಗಿಸದೇ, ಕಡೆಗಣಿಸಲಾಗಿದೆ. ಇದರಿಂದ ಅಂಗವಿಕಲರ ಕುಟುಂಬಕ್ಕೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಕೂಡಲೇ ಸರ್ಕಾರ, ಸ್ಥಳೀಯ ಶಾಸಕರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಹೆಚ್ಚಿನ ಮುತುವರ್ಜಿವಹಿಸಿ, ಅಂಗವಿಕಲರ ಕುಟುಂಬಕ್ಕೆ ಹಾಗೂ ಪಾಲಕ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ನೀಡಿ, ಬಡ ಕುಟುಂಬವನ್ನು ರಕ್ಷಿಸಬೇಕೆಂದು ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದಲ್ಲಿ ಕುಮಟಾ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

CHETAN KENDULI

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಾಗರಾಜ ಶೆಟ್, ಕಿರಣ ನಾಯ್ಕ, ರಾಜು ಅಂಬಿಗ, ಲಕ್ಷ್ಮಣ ಪಟಗಾರ, ಜಟ್ಟು ಗೌಡ, ಎನ್.ಎಸ್ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು

Be the first to comment

Leave a Reply

Your email address will not be published.


*