ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ಐತಿಹಾಸಿಕ ಪಾರಂಪರೆ ಸಾರುವ ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿ ಕಲ್ಲಿನ ಕೋಟೆಯಾಗಿ ಪರಿವರ್ತನೆಗೊಂಡ ಕೋಟೆಯ ಒಳಭಾಗದ ಕಲ್ಲಿನ ಗೋಡೆ ಮಳೆಯಿಂದಾಗಿ ಕುಸಿದಿದೆ.
ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ್ದ ಕಲ್ಲಿನ ಗೋಡೆ ಇದೀಗ ಮಳೆಯಿಂದಾಗಿ ಕೋಟೆಯ ಕಲ್ಲಿನ ಗೋಡೆ ಕುಸಿದಿದ್ದು, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಕ್ಕೆ ತೆಗೆದುಕೊಂಡು ಕಲ್ಲಿನ ಗೋಡೆ ಮರುನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಈ ಕೋಟೆಗೆ ಹಲವಾರು ಕಡೆಗಳಿಂದ ಪ್ರವಾಸಿಗರು ಬರುವುದರಿಂದ ಶೀಘ್ರವಾಗಿ ದುರಸ್ಥಿ ಕಾರ್ಯ ನಡೆಯಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಈ ವೇಳೆಯಲ್ಲಿ ಪುರಸಭಾಧ್ಯಕ್ಷೆ ರೇಖಾ ವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್, ಸದಸ್ಯ ಜಿ.ಎ.ರವೀಂದ್ರ, ಮುಖಂಡ ಅನಿಲ್, ಸಾಯಿಕುಮಾರ್ ಬಾಬು, ಇತರರು ಇದ್ದರು.
Be the first to comment