ಅಭ್ಯರ್ಥಿಗಳ ನಿದ್ದೆಗೆಡಿಸಿದ ಪುರಸಭೆ ಚುನಾವಣೆ 

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

ಪಟ್ಟಣದ ಇಪ್ಪತ್ತು, ಇಪ್ಪತ್ತು ಒಂದನೇ ವಾರ್ಡ್ ನಲ್ಲಿ ಪುರಸಭೆ ಚುನಾವಣೆಯು ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಹಗಲು ರಾತ್ರಿಯೆನ್ನದೆ ಬೀದಿ ಬೀದಿಗಳಲ್ಲಿ ಚುನಾವಣೆ ಪ್ರಚಾರದ್ದೆ ಮಾತುಕತೆ.20,21 ನೇ ವಾರ್ಡ ನ ಅಭ್ಯರ್ಥಿಗಳಾದ ನೂರ್ ಮಹಮ್ಮದ್, ಕೆ. ಕರಿಯಪ್ಪ ಇವರುಗಳ ಪರವಾಗಿ ಪ್ರಚಾರ ಮಾಡುವ ಕಾರ್ಯ ನಡೆಸಲಾಯಿತು ಮನೆ ಮನೆಗೆ ತೆರಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳ ನೇತೃತ್ವದಲ್ಲಿ ಶಾಸಕರು ತೆರಳಿ ವಾರ್ಡ್ ಗಳ ಸಾರ್ವಜನಿಕರು ಚರಂಡಿ, ಬೀದಿ ಬೀದಿಗಳ ಸೇರಿ ವಿವಿಧ ಬಗೆಯ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಇವೆಲ್ಲವನ್ನೂ ನಮ್ಮ ಪಕ್ಷವು ಸರಿಪಡಿಸುವ ಕಾರ್ಯ ಮಾಡುತ್ತಾರೆ ನಿಮ್ಮ ಬೆಂಬಲ ನಮ್ಮ ಅಭ್ಯರ್ಥಿಗೆ ಅವಶ್ಯಕ ಎಂದು ಶಾಸಕರು ಆಶ್ವಾಸನೆ ನೀಡಿದರು.ನಂತರ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮೊದಲಿಗೆ ಹೆಚ್.ಬಿ ಮುರಾರಿ, ಮಹಾದೇವಿ, ಇನ್ನೂಅನೇಕ ಪ್ರಮುಖ ಗಣ್ಯರು ಮಾತನಾಡಿದರು ತದನಂತರ ಮಾತನಾಡುತ್ತಾ

CHETAN KENDULI

 

 ಜಾತಿ ಜಾತಿ ಗಳ ಮದ್ಯೆ ಬಿರುಕಿನ ರಾಜಕೀಯ ಮಾಡುತ್ತಿರುವ ಬಿಜೆಪಿ ಸರಕಾರ, ರಾಜ್ಯದ ಮೂಲೆ ಮೂಲೆಗಳಲ್ಲಿನ ಜನತೆಗೆ ಮೂಲ ಸೌಕರ್ಯಗಳು ಮುಟ್ಟುವಂತಹ ಅಧಿಕಾರ ನಮ್ಮ ಕಾಂಗ್ರೆಸ್ ಸರಕಾರ ಮಾಡಿದೆ ಮತ್ತು ಮಾಡುತ್ತಲಿದೆ. ಈ ಹಿಂದೆ ನಡೆದ ಎಂಎಲ್ಎ ಚುನಾವಣೆಯಲ್ಲಿ ಯಾವ ರೀತಿಯ ಚುನಾವಣೆ ನಡೆಯಿತು ಎಂದು ತಮ್ಮೆಲ್ಲರಿಗೂ ಗೊತ್ತಿರುವ ಸಂಗತಿ ಹಾಗಾಗಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಶಾಸಕ ಬಸನಗೌಡ ತುರುವಿಹಾಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚಿಸಿದರು. ನಂತರ ಕ್ಷೇತ್ರದ ಶಾಸಕರಿಗೆ ಹಾಗೂ ಪಕ್ಷದ ಗಣ್ಯಾತಿ ಗಣ್ಯರಿಗೆ ಸನ್ಮಾನ ಮಾಡಲಾಯಿತು. 

ಇದೇ ಸಂಧರ್ಭದಲ್ಲಿಹೆಚ್. ಬಿ ಮುರಾರಿ ಮಾಜಿ ಕೆಪಿಸಿಸಿ ಕಾರ್ಯದರ್ಶಿ, ಮಲ್ಲಿಕಾರ್ಜುನ ಯದ್ದಲದಿನ್ನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಮಸ್ಕಿ, ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನ ಭಾವಿ, ಹನುಮಂತಪ್ಪ ಮುದ್ದಾಪೂರ,ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಮಹಾದೇವಿ ಕಾಂಗ್ರೆಸ್ ಮುಖಂಡ,ದುರ್ಗಾ ರಾಜ್ ವಟಗಲ್, ವಸಂತ ಕುಮಾರ್ ವೆಂಕಟಾಪುರ ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*