ಧೂಮಪಾನ ಮತ್ತು ತಂಬಾಕು ಮುಕ್ತವಾಗಲು ಸಹಕರಿಸಿ: ಪೋಲೀಸ್ & ಅರೋಗ್ಯ ಇಲಾಖೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ರಾಯಚೂರು ಜಿಲ್ಲೆಯಾದ್ಯಂತ 2003 cocta act ಕಾರ್ಯಕ್ರಮದ ಅಂಗವಾಗಿ ಅಂಗಡಿ,ಮುಗ್ಗಟ್ಟು , ಪಾನಶಾಪ್ ಗಳಿಗೆ ತಂಬಾಕು ಮತ್ತು ಧೂಮಪಾನ ನಿಷೇಧದ ಬಗ್ಗೆ ಪೋಲೀಸ್ ಇಲಾಖೆ ಮತ್ತು ಸಾನುಡೆ (Jinude) ರವರು ಜಾಗೃತಿ ಮೂಡಿಸಿದರು.ಜಿಲ್ಲೆಯಾದ್ಯಂತ 2003 ಕೊಕ್ಟ ಆಕ್ಟ್ ನಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಮಸ್ಕಿ ಪಟ್ಟಣ ಸೇರಿ ಸುತ್ತ ಮುತ್ತಲಿನ ಹಳ್ಳಿಗಳ ಕಿರಾಣಿ ಅಂಗಡಿ ಮುಗಟ್ಟುಗಳಿಗೆ ತೆರಳಿ ತಂಬಾಕು ಸೇವನೆ ಹಾಗೂ ದೂಮಪಾನ ನಿಷೇಧ ಕಾನೂನು ಕಾಯ್ದೆಯ ನಿಯಮದಂತೆ ಎಲ್ಲಾ ಕಿರಾಣಿ ಅಂಗಡಿಗಳಿಗೆ ಮತ್ತು ಸಣ್ಣಪುಟ್ಟ ಅಂಗಡಿ ಮುಗಟ್ಟು ಗಳಿಗೆ ಬ್ಯಾನರ್ ಅನ್ನು ತಮ್ಮ ತಮ್ಮ ಅಂಗಡಿಗಳಿಗೆ ಅಂಟಿಸುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪೋಲೀಸ್ ಇಲಾಖೆ,ಸಾನುಡೆ ಮತ್ತು ಆರೋಗ್ಯ ಇಲಾಖೆಯಿಂದ ಪಟ್ಟಣದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳದಿಂದ 100 ಮೀಟರ್ ಅಂತರದಲ್ಲಿ ತಂಬಾಕು ಮತ್ತು ಧೂಮಪಾನ ಮಾಡುವವರಿಗೆ 200 ರುಪಾಯಿಯನ್ನು ದಂಡವನ್ನು ವಿಧಿಸಲಾಗುವುದೆಂದು ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸಿದರು.

CHETAN KENDULI

Be the first to comment

Leave a Reply

Your email address will not be published.


*