ರಾಜ್ಯ ಸುದ್ದಿಗಳು
ದೇವನಹಳ್ಳಿ
ಜನತಾ ಬಜಾರ್‌ನ ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರನ್ನು ಸೆಳೆಯಿರಿ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಗುರುಭವನದಲ್ಲಿ 2020-21ನೇ ಸಾಲಿನ ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಖಾಸಗಿ ಉತ್ಪನ್ನಗಳ ಮಾರಾಟ ಅಂಗಡಿಗಳು, ಮಾರ್ಟ್‌ಗಳಿಗೆ ಗ್ರಾಹಕರು ಮೊರೆ ಹೋಗದಂತೆ ನಮ್ಮಲ್ಲಿಯೇ ಗುಣಮಟ್ಟದ ಸರಕು ಸಿಗುವಂತೆ ಮತ್ತು ಎಲ್ಲಾ ಸೌಲಭ್ಯ ಸ್ಥಳೀಯವಾಗಿ ಜನತಾ ಬಜಾರ್‌ನಲ್ಲಿಯೇ ಸಿಗುವುದನ್ನು ಗ್ರಾಹಕರಿಗೆ ಅರಿವು ಮೂಡಿಸಬೇಕು. ಗ್ರಾಹಕರು ಇಲ್ಲಿಯೇ ಖರೀದಿಸಲು ಅವರಿಗೆ ಜಾಗೃತಗೊಳಿಸಬೇಕು. ದೇವನಹಳ್ಳಿ ತಾಲೂಕಿನಲ್ಲಿ 2.40ಲಕ್ಷ ಜನಸಂಖ್ಯೆ ಹೊಂದಿದೆ. ಸಹಕಾರಿ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ವ ಸದಸ್ಯರು, ಆಡಳಿತ ಮಂಡಳಿಯವರು ಒಮ್ಮತದಿಂದ ಸಂಘದ ಏಳಿಗೆಗೆ ಶ್ರಮಿಸಬೇಕು. ಹಲವಾರು ಅಧ್ಯಕ್ಷರು ಈ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗಾಗಲೇ ಹೊಸಕೋಟೆಯಲ್ಲಿನ ಸಹಕಾರ ಸಂಘ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಹ ಸಂಘವು ಹೆಚ್ಚು ಅಭಿವೃದ್ಧಿಗೊಳ್ಳಬೇಕು. ನೂತನ ಸಂಘದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಾಗಕ್ಕಾಗಿ ಅರ್ಜಿಯನ್ನೂ ಸಹ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ. ಜಾಗ ಮಂಜೂರು ಮಾಡಿಕೊಡಲು ಮನವಿ ಮಾಡಿದ್ದೇನೆ. ನನ್ನ ಅನುದಾನದಲ್ಲಿ ಟಿಎಪಿಸಿಎಂಎಸ್ ಸಂಘದ ಆವರಣದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಅನುದಾನವನ್ನು ಮಂಜೂರು ಮಾಡಲು ಪ್ರಯತ್ನಮಾಡಲಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಂಘವು 2020-21ನೇ ಸಾಲಿಗೆ 26ಲಕ್ಷದ 70ಸಾವಿರ ರೂ.ಗಳ ನಿವ್ವಳ ಲಾಭದಲ್ಲಿದೆ. ಸಹಕಾರ ಸಂಘದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ. ಚುನಾವಣೆಗೆ ಮಾತ್ರ ಸದಸ್ಯತ್ವ ಹೊಂದದೆ ಎಲ್ಲಾ ಸಭೆಗಳಿಗೆ ಹಾಜರಾಗುವಂತಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಪಿಕಾರ್ಡ್‌ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಹಾಲಿ ಅಧ್ಯಕ್ಷ ವಕೀಲ ಮುನಿರಾಜು, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಹಾಪ್‌ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ನಾಗೇಶ್, ಜಿಲ್ಲಾ ಸಹಕಾರಿ ಒಕ್ಕೂಟ ನಿರ್ದೇಶಕ ಸಿ.ಮುನಿರಾಜು, ಉಪಾಧ್ಯಕ್ಷೆ ಆಶಾರಾಣಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಜೆಡಿಎಸ್ ಯುವ ಅಧ್ಯಕ್ಷ ಆರ್.ಭರತ್, ತಾಪಂ ಮಾಜಿ ಸದಸ್ಯ ಎಸ್.ಮಹೇಶ್, ಕುಂದಾಣ ಎಂಪಿಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಜೆಡಿಎಸ್ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ನಿರ್ದೇಶಕರಾದ ಶ್ರೀರಾಮಯ್ಯ, ಶ್ರೀನಿವಾಸ್ ಮೂರ್ತಿ, ರಮೇಶ್, ಮುಖಂಡರು ಇದರು
Be the first to comment