ಭಟ್ಕಳದಲ್ಲಿ ವಿದ್ಯಾರ್ಥಿಗಳಿಗೆ ಒಂದು ಕಡೆ ಶಾಲಾ ಕಾಲೇಜುಗಳಲ್ಲಿ ಕರೋನಾ ಕಟ್ಟುನಿಟ್ಟಿನ ನಿಯಾಮವಳಿ, ಇನ್ನೊಂದು ಕಡೆ ಅದೇ ವಿದ್ಯಾರ್ಥಿಗಳು ಕರೋನಾ ನಿಯಮಾವಳಿ ಮೀರಿ ಬಸ್ಸುಗಳಲ್ಲಿ ಶಾಲಾಕಾಲೇಜುಗಳಿಗೆ ತೆರಳಲು ಹರಸಾಹಸ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ವಿದ್ಯಾರ್ಥಿಗಳು ಕರೋನಾ ನಿಯಮಾವಳಿ ಮೀರಿ ಬಸ್ಸುಗಳಲ್ಲಿ ಶಾಲಾಕಾಲೇಜುಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ, ಶಾಲಾಕಾಲೇಜುಗಳಿಗೆ ತೆರಳಲು ಹಾಗೂ ಶಾಲಾಕಾಲೇಜುಗಳು ಬಿಡುವ ಸಮಯದಲ್ಲಿ ಸೂಕ್ತ ಪ್ರಮಾಣದಲ್ಲಿ ಬಸ್ಸುಗಳ ವ್ಯವಸ್ಥೆ ಮಾಡಲಿ ಎಂದು ಎಲ್ಲಾ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದರೆ..

CHETAN KENDULI

ಕೊರೊನಾ ಮೂರನೇ ಅಲೆಯ ನಡುವೆಯೂ ಕೂಡಾ ಸರಕಾರ ಶಾಲಾ-ಕಾಲೇಜು ಆರಂಭಿಸುವ ಮೂಲಕ ಉತ್ತಮ ಹೆಜ್ಜೆಯನ್ನಿಟ್ಟಿದ್ದು ವಿದ್ಯಾರ್ಥಿಗಳ ಪಾಲಕರು ಕೂಡಾ ಉತ್ತಮವಾಗಿ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಅಂತರ ಕಾಪಾಡಿಕೊಂಡಿದ್ದರೂ ಸಹ ಪಾಲಕರ ಆತಂಕ ಮಾತ್ರ ದೂರವಾಗಿಲ್ಲ.

ವಿದ್ಯಾರ್ಥಿಗಳಿಗೆ ಶಾಲೆಯನ್ನು ಆರಂಭಿಸಿದ ಸರಕಾರ ಸಾಕಷ್ಟು ಬಸ್ ಸೌಕರ್ಯವನ್ನು ನೀಡಲು ಹಿಂದೆ ಬಿದ್ದಿದೆ. ಭಟ್ಕಳ ತಾಲೂಕಿನಲ್ಲಿ ನೂರಾರು ವಿದ್ಯಾರ್ಥಿಗಳು ಒಂದೇ ಸಮಯಕ್ಕೆ ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಬರುತ್ತಿದ್ದು ಈ ವೇಳೆಯಲ್ಲಿ ಬಸ್ಸಿನ ಕೊರತೆಯಿಂದಾಗಿ ಅಂತರವಿಲ್ಲದೇ ಬಸ್ ಪ್ರಯಾಣ ಮಾಡುವಂತಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಮಕ್ಕಳು ಶಾಲಾ ಕಾಲೇಜಿನಲ್ಲಿ ಕೊರೊನಾ ಜಾಗೃತಿಯನ್ನು ಅನುಸರಿಸಿದ್ದರೂ ಸಹ ಬಸ್‌ಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಕೊರೊನಾ ಕಡಿಮೆಯಾಗಿರುವ ಈ ಸಮಯದಲ್ಲಿಯೇ ಬಸ್ ಪ್ರಯಾಣದಿಂದಲೇ ಕೊರೊನಾ ಹೆಚ್ಚಾದರೆ ಆಶ್ಚರ್ಯವಿಲ್ಲ ಎನ್ನುವಂತಾಗಿದೆ ಪರಿಸ್ಥಿತಿ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಪೂರ್ವ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಬಿಡಬೇಕಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕಾಗಿದ್ದರೂ ಸಹ ಜಿಲ್ಲೆಯಲ್ಲಿ ಬಸ್‌ಗಳನ್ನು ಸರಿಯಾದ ಸಮಯಕ್ಕೆ ಬಿಡದೇ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಅಂತರವಿಲ್ಲದೇ ಪ್ರಯಾಣ ಮಾಡುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ ಪ್ರಯಾಣ ಅನಿವಾರ್ಯವಾಗಿದ್ದು ಕೊರೊನಾ ಹರಡುವಿಕೆಯ ಭಯದಲ್ಲಿಯೇ ಬಸ್ ಪ್ರಯಾಣ ಮಾಡುತ್ತಿರುವುದು ಪಾಲಕರನ್ನು ಆತಂಕಕ್ಕೀಡು ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಪರಿಸ್ಥಿತಿ ಇದಾಗಿದ್ದು ತಕ್ಷಣ ಸಂಬAಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳು ಗಮನ ಹರಿಸಿ ವಿದ್ಯಾರ್ಥಿಗಳು ಪ್ರಯಾಣಿಸುವ ಸಮಯದಲ್ಲಿ ಬಸ್‌ಗಳನ್ನು ಹೆಚ್ಚಿಸಿ ಕೊರೊನಾ ತಡೆಯುವಲ್ಲಿ ಮುಂದಾಗಬೇಕಾಗದೆ..


ಈ ಬಗ್ಗೆ ಸಮಾಜ ಸೇವಕ, ನಿವೃತ್ತ ಸೈನಿಕರಾದ ಶ್ರೀಕಾಂತ ನಾಯ್ಕ ಆಸರಕೇರಿ, ಮಾತನಾಡಿ ದಿನನಿತ್ಯ ವಿದ್ಯಾರ್ಥಿಗಳು ಬಸ್‌ಗಳಲ್ಲಿ ನೇತಾಡಿಕೊಂಡು ಬರುತ್ತಿದ್ದಾರೆ. ಕೊರೊನಾ ಮೂರನೇ ಅಲೆಯ ಭಯದಲ್ಲಿ ಪಾಲಕರು ಶಾಲೆಗೆ ಕಳುಹಿಸುತ್ತಿದ್ದು ಶಾಲೆಯಲ್ಲಿ ಬೌತಿಕ ಅಂತರ ಕಾಪಾಡಿಕೊಂಡರೂ ಸಹ ಬಸ್‌ಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಬಗ್ಗೆ ಗಮನ ಹರಿಸಿ ಶಾಲಾ ಸಮಯದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*