ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು, ರೀಚ್ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತಿ, ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು 5 ದಿನದ ವಸತಿಯುತ ತರಬೇತಿಯನ್ನು ದಿನಾಂಕ 06.12.2021 ರಿಂದ 10.12.2021 ರವರೆಗೆ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ, ನವನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಪ್ರಾಸ್ತಾವಿಕವಾಗಿ ಕಾರ್ಯಗಾರದ ಕುರಿತು ಕುಮಾರ್.ಜಿ.ಎನ್. ಸಂಯೋಜಕರು, ಇವರು ಮಾತನಾಡುತ್ತಾ ರೀಚ್ ಸಂಸ್ಥೆಯ ಕಿರು ಪರಿಚಯದ ಜೊತೆಗೆ ಮಹಿಳೆಯರಿಗೆ ಘನ ತ್ಯಾಜ್ಯದ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ತಿಳಿಸುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅದನ್ನು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ತರಬೇತಿ ನಿಮ್ಮ ಗ್ರಾಮಮಟ್ಟದಲ್ಲಿ ಅನುಷ್ಟಾನ ಮಾಡಬೇಕೆಂದು ತಿಳಿಸಿದರು.
ಘನ ತ್ಯಾಜ ನಿರ್ವಹಣೆ 5 ದಿನದ ವಸತಿಯುತ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಮರೇಶ್ ನಾಯಕ್, ಉಪಕಾರ್ಯದರ್ಶಿಗಳು, ಜಿ.ಪಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 5 ದಿನದ ವಸತಿಯುತ ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು. ತರಬೇತಿಯನ್ನು ಸಂಘದ ಮಹಿಳೆಯರು ಸ್ಥಳೀಯವಾಗಿ ಇರುವುದರಿಂದ ನಮ್ಮ ಪಂಚಾಯಿತಿಗೆ ಸಹಾಯವಾಗುತ್ತದೆ ಅದಕ್ಕೆ ಮಹಿಳೆಯರಿಗೆ ನೀಡುತ್ತೇವೆಂದು ತಿಳಿಸಿದರು.
ನಮ್ಮ ಮನೆಯ ಕಸವನ್ನು ಗಟಾರಕ್ಕೆ ಹಾಕುತ್ತೇವೆ. ಗಟಾರು ತುಂಬಿಕೊಳ್ಳುತ್ತದ್ದೆ. ಇದರಿಂದ ನೀರು ಕಲುಶಿತ ಆಗುತ್ತದೆ.ಈಗ ಕಸವನ್ನು ಎಲ್ಲಿ ಹಾಕಬೇಕೆಂದು ನೀವು ತರಬೇತಿಯನ್ನು ತಗೆದುಕೊಂಡಿದ್ದೀರಿ. ಇದನ್ನ ನಿಮ್ಮ ಗ್ರಾಮಗಳಲ್ಲಿ ಹೋಗಿ ಕೆಲಸ ಮಾಡಿ, ನಂತರ ಪಂಚಾಯತಿ ವತಿಯಿಂದ ನಿಮಗೆ 6 ತಿಂಗಳ ಪ್ರೋತ್ಸಾಹ ನೀಡುತ್ತೇವೆ. ನಂತರ ಎಲ್ಲಾ ಜವಾಬ್ದಾರಿಯನ್ನು ಸಂಘದ ಮಹಿಳೆಯರಿಗೆ ನೀಡುತ್ತೇವೆ.
ಇದರಿಂದ ಬಂದಿರುವ ಲಾಭವನ್ನು ನೀವೇ ತಗೆದುಕೊಳ್ಳಬೇಕು. ನೀವು ನಿಮ್ಮ ಗ್ರಾಮಗಳನ್ನ ತ್ಯಾಜ್ಯ ಮುಕ್ತ ಗ್ರಾಮ ಎಂದು ಘೋಷಣೆ ಆಗಬೇಕೆಂದು ತಿಳಿಸಿದರು.ಎಂ.ವಿ.ಚಳಗೇರಿ, ಯೋಜನಾ ನಿರ್ದೇಶಕರು, ಎನ್.ಆರ್.ಎಲ್.ಎಂ, ನಮ್ಮ ಸಂಘದ ಮಹಿಳೆಯರನ್ನು ಮತ್ತು 5 ದಿನದ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ಮಹಿಳೆಯರಿಗೆ ಇಲ್ಲಿ ಊಟ ವಸತಿಯೊಂದಿಗೆ ತರಬೇತಿಯನ್ನು ಕೊಡುತ್ತಿರುವುದು. ನೀವು ಘನತ್ಯಾಜ್ಯ ವಿಲೇವಾರಿಯ ಕುರಿತು ತಿಳಿದುಕೊಂಡು ಹೋಗಿ ನಿಮ್ಮ ಗ್ರಾಮಗಳಲ್ಲಿ ಸ್ವಚತೆಯನ್ನು ಕಾಪಾಡಲಿ ಮತ್ತು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿದೆ. ನಿಮ್ಮ ಗ್ರಾಮಗಳಲ್ಲಿ ಈ ಕೆಲಸ ಆಗಬೇಕಾಗಿದೆ ನಿಮ್ಮ ಗ್ರಾಮಗಳಿಗೆ ಹೋಗಿ ಈ ಕೆಲಸ ಪ್ರಾರಂಭಿಸಿ 5 ದಿನದ ತರಬೇತಿ ಉಪಯೋಗವಾಗುತ್ತದೆ ಉಳಿದ ಮಹಿಳೆಯರಿಗೆ ಅರಿವನ್ನು ನೀವು ನೀಡಬೇಕೆಂದು ತಿಳಿಸಿದರು.ನಂತರ ಸುಧಾ ಎಲೆಂಟಿ ಸಾ||ಉತ್ತೂರ ಇವರು 5 ದಿನದ ವಸತಿಯುತ ತರಬೇತಿಯಲ್ಲಿ ಭಾಗವಹಿಸಿದ ಅನುಭವ ಹಂಚಿಕೊಳ್ಳುತ್ತಾ ತ್ಯಾಜ್ಯವೆಂದರೆ ನಮಗೆ ಗೊತ್ತಿರಲಿಲ್ಲ.
ತ್ಯಾಜ್ಯವೆಂದರೆ ಕಸ ಎನ್ನುವದು ತಿಳಿದುಬಂತು ಹಸಿಕಸ ಒಣಕಸ ಬೇರೆ ಮಾಡಬೇಕು ಅಂತ ತಿಳಿದುಕೊಂಡೆವು ನಂತರ ಎರೆಹುಳು ಗೊಬ್ಬರ ಕಸ ಬೇರ್ಪಡಿಸುವಿಕೆ ಕುರಿತು ಮುರನಾಳ್, ನಗರಸಭೆಯ ಘಟಕಗಳಿಗೆ ಪ್ರಾತ್ಯಕ್ಷೀಕ ಮೂಲಕ ತಿಳಿದುಕೊಳ್ಳಲಾಯಿತು, ಮುಸರಿ ನೀರಿನಿಂದ ಗ್ಯಾಸ್ ಅನ್ನು ತಯಾರಿ ಮಾಡುವದನ್ನು ತಿಳಿದುಕೊಂಡೆವೆಂದು ವ್ಯಕ್ತಪಡಿಸಿದರು.
ಬಸವರಾಜ ಶಿರೂರು, ವ್ಯವಸ್ಥಾಪಕರು, ಜಿ.ಪಂ. ಸಂಪನ್ಮೂಲ ಕೇಂದ್ರ, ವಿಕ್ರಮ್ ಕುಲಕರ್ಣಿ, ಶ್ರೀಶೈಲ.ಬಿ.ಕಂಕನವಾಡಿ, ಉಪನಿರ್ದೇಶಕರು, ಆಹಾರ ಇಲಾಖೆ, ಶಾರದಾ ಭಜಂತ್ರಿ, ಮಹಾನಂದ ಟಕ್ಕಳಕಿ, ಸಂಪನ್ಮೂಲ ವ್ಯಕ್ತಿಗಳು, 11 ಪಂಚಾಯಿತಿಯಿಂದ 31 ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Be the first to comment