ರೈಲಿಗೆ ತಲೆ ಕೊಟ್ಟು ಪಿ.ಯುಸಿ ವಿದ್ಯಾರ್ಥಿ ಆತ್ಮಹತ್ಯೆ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು

ಹೊನ್ನಾವರ

ಕೃಷಿಕರಾಗಿರುವ ತಂದೆ-ತಾಯಿಯ ಕಿರಿಯ ಮಗನಾಗಿದ್ದ ವಿಶಾಲ್ ನನ್ನು ಚೆನ್ನಾಗಿ ಓದಿಸಬೇಕೆಂಬ ಹಂಬಲದಲ್ಲಿದ್ದರು. ಹತ್ತನೇ ತರಗತಿಯನ್ನು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಯಲ್ಲಿ ಓದಿದ್ದ ಈತ ಪ್ರಥಮ ಪಿಯುಸಿ ಗೆ ಸೇರಿದ ನಂತರ ಕೋಟಾದಿಂದ ಶಾಲೆಗೆ ಬರುತ್ತಿದ್ದ. 

CHETAN KENDULI

ಮುಗ್ವಾ ಹಳಗೇರಿ ಮೂಲದ ಅನಂತವಾಡಿ ಕೋಟಾದಲ್ಲಿ ವಾಸವಿದ್ದ ವಿಶಾಲ್ ಮಂಜು ಗೌಡ (17) ಯಾರಿಗೂ ಹೇಳದೇ ಕೇಳದೆ ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಮಂಗಳವಾರ ನಡೆದಿದೆ.

ಸ್ಥಳಕ್ಕೆ ಮಂಕಿ ಪೋಲೀಸರು ಭೇಟಿ ನೀಡಿದ್ದು ಸಾರ್ವಜನಿಕರ ಸಹಕಾರದಿಂದ ಶವವನ್ಶು ಸ್ಥಳಾಂತರಿಸಿದ್ದಾರೆ. ರೈಲಿನ ಗಾಲಿಗೆ ಸಿಕ್ಕಿ ದೇಹ ಚಿದ್ರವಾಗಿದ್ದು, ರುಂಡ ಮುಂಡ ಒಂದೊಂದು ಕಡೆ ಬಿದ್ದಿದೆ. ಬಾಳಿ ಬದುಕಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Be the first to comment

Leave a Reply

Your email address will not be published.


*