ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಮೀಸಗಾನಹಳ್ಳಿ ಗ್ರಾಮದ ಸರ್ವೆ ನಂ.100/1 ರಿಂದ 100/12ರವೆಗೆ ಇರುವ ಖರಾಬು ಜಮೀನನ್ನು ಕೆಲ ಬಲಾಢ್ಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಿಕೊಡಬೇಕು ಎಂದು ಒತ್ತಾಯಿಸಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರಿಗೆ ಗ್ರಾಮಸ್ಥರು ಮನವಿ ಪತ್ರಸಲ್ಲಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರಿಗೆ ಕಾರಹಳ್ಳಿ ಗ್ರಾಪಂ ಸದಸ್ಯ ಎನ್.ಚಂದ್ರಶೇಖರ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ತಲತಲಾಂತರದಿಂದ ಈ ಸರ್ವೆ ನಂಬರ್ ಖರಾಬು ಬಂಡೆ ಜಮೀನಿನಲ್ಲಿ ದನಕರುಗಳನ್ನು ಮೇಯಿಸಿಕೊಂಡು ಬರಲಾಗಿದೆ. ಈ ಜಮೀನು ಸಾಕಷ್ಟು ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಿತ್ತು. ಅಕ್ಕಪಕ್ಕದಲ್ಲಿ ಯಾವುದೇ ಸರಕಾರಿ ಜಾಗಗಳು ಇರುವುದಿಲ್ಲ. ಇರುವ ಸರಕಾರಿ ಬಂಡೆ ಖರಾಬ್ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುತ್ತಾರೆ. ಈಗಾಗಲೇ ಸಂಬಂಧಪಟ್ಟ ಕಂದಾಯ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ವೆ ಕಾರ್ಯವೂ ಸಹ ಮುಗಿದಿದೆ. ಆದರೆ ಜಮೀನಿನ ಮಾಲಿಕತ್ವವನ್ನು ನಕಲಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಗ್ರಾಮಸ್ಥರಿಗೆ ತೊಂದರೆಯನ್ನು ನೀಡುತ್ತಿದ್ದಾರೆ. ಅದ್ದರಿಂದ ಶಾಸಕರ ಗಮನಕ್ಕೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲಾಗಿದ್ದು, ಮುಂದಿನ ಕ್ರಮವನ್ನು ಅಧಿಕಾರಿಗಳು ಕೈಗೊಂಡು ಗ್ರಾಮಸ್ಥರಿಗೆ ಸರಕಾರಿ ಜಮೀನನ್ನು ಮೀಸಲು ಇಡಲು ಮನವಿ ಮಾಡಲಾಗಿದೆ ಎಂದರು.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ತಾವುಗಳು ನೀಡಿರುವ ಮನವಿಯನ್ನು ಪರಿಶೀಲಿಸಲಾಗುತ್ತದೆ. ಕಂದಾಯ ಇಲಾಖಾಧಿಕಾರಿಗಳಿಗೆ ಕೂಡಲೇ ಸ್ಥಳಪರಿಶೀಲನೆ ನಡೆಸಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಈ ವೇಳೆಯಲ್ಲಿ ತಾಲೂಕು ಜೆಡಿಎಸ್ ಅಡಾಖ್ ಕಮಿಟಿ ಅಧ್ಯಕ್ಷ ಆರ್.ಮುನೇಗೌಡ, ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಮುಖಂಡ ರಬ್ಬನಹಳ್ಳಿ ಪ್ರಭಾಕರ್,ಮೀಸಗಾನಹಳ್ಳಿ ಗ್ರಾಮದ ಎಂ.ಸಿ.ಮುನಿರಾಜ, ಎಂ.ಕೆ.ಮುನಿರಾಜ, ವೆಂಕಟೇಶ, ಕೃಷ್ಣಪ್ಪ, ಹನುಮಂತರಾಯಪ್ಪ, ಮುನಿರಾಜ, ಕೆ.ನಾಗರಾಜ, ಎಂ.ಪಾಪರಾಜ, ಮಂಜುನಾಥ್, ದೊಡ್ಡಪ್ಪಯ್ಯ, ಅಕ್ಕಿಲಪ್ಪ, ಎಂ.ಎನ್.ವೆಂಕಟೇಶ್, ನಾರಾಯಣಸ್ವಾಮಿ, ಇತರರು ಇದ್ದರು.
Be the first to comment