ರಾಜ್ಯ ಸುದ್ದಿಗಳು
ಬೆಂಗಳೂರು
ಐಪಿಎಲ್ 15ನೇ ಸೀಸನ್ ಕಾದಾಟ ಇಂದಿನಿಂದ ಶುರುವಾಗಲಿದೆ. ಮಾಯಾನಗರಿ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸಂಜೆ 7.30ಕ್ಕೆ ಕಾದಾಡಲಿವೆ. ಧೋನಿ ನಾಯಕತ್ವ ಇಲ್ಲದೇ ಚೆನ್ನೈ ಕಣಕ್ಕಿಳಿಯುತ್ತಿದ್ದರೆ ಕೋಲ್ಕತ್ತಾಗೂ ಶ್ರೇಯಸ್ ಅಯ್ಯರ್ ಹೊಸ ನಾಯಕತ್ವ ಸಿಕ್ಕಿದೆ.
ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಟೂರ್ನಿ ಎರಡು ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿದೆ. ಕೊರೋನಾ ಕಾರಣಕ್ಕೆ ಎರಡು ವರ್ಷ ದುಬೈನಲ್ಲಿ ನಡೆದಿತ್ತು. ಮುಂಬೈನ ಮೂರು ಮತ್ತು ಪುಣೆಯ ಒಂದು ಕ್ರೀಡಾಂಗಣದಲ್ಲಿ ಲೀಗ್ ಹಂತದ ಎಲ್ಲ ಪಂದ್ಯ ನಡೆಯಲಿವೆ. ಸ್ಟೇಡಿಯಂನಲ್ಲಿ ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಕೆ.ಎಲ್. ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಮಾಯಾಂಕ್ ಅಗರವಾಲ್, ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ಗೆ ಇದು ಸತ್ವ ಪರೀಕ್ಷೆ. ಒಟ್ಟಾರೆ 70 ಲೀಗ್ ಪಂದ್ಯಗಳಲ್ಲಿ 10 ಪ್ರಾಂಚೈಸಿಗಳು ಸೆಣೆಸಲಿವೆ. ಹೊಸದಾಗಿ ಗುಜರಾತ್ ಟೈಟಾನ್ಸ್, ಲಖನೌ ಸೂಪರ್ ಗೈನ್ಸ್ ಪ್ರಾಂಚೈಸಿಗಳು ಸೇರಿಕೊಂಡಿವೆ.
Be the first to comment