ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳ ಕಾರ್ಮಿಕ ನಿರೀಕ್ಷಕರ ಕಚೇರಿಯು ಕಳೆದ 2015 ರಿಂದ ಖಾಸಗಿ ಕಟ್ಟಡವಾದ ಸಂಕಪ್ಪ ನಾಯಕ ಬಿಲ್ಡಿಂಗ್ ಮೂರನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಯಾವುದೇ ತರಹದ ನೀರಿನ ವ್ಯವಸ್ಥೆ ಆಗಲಿ ಶೌಚಾಲಯ ವ್ಯವಸ್ಥೆ ಆಗಲಿ ಇರುವುದಿಲ್ಲ. ವಿಶೇಷವಾಗಿ ಈ ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಇರುವುದಿಲ್ಲ.
ಇದರಿಂದ ತಾಲೂಕಿನ ಕಟ್ಟಡ ಕಾರ್ಮಿಕರು ಮಹಿಳೆಯರು ಪಿಂಚಣಿ ಅರ್ಜಿ ಸಲ್ಲಿಸುವ 60 ವರ್ಷ ಮೇಲ್ಪಟ್ಟ ವೃದ್ಧರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯವಾಗಿ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ವಿಚಾರಮಾಡಿದರೆ ನಮ್ಮ ಇಲಾಖೆಯ ಸ್ವಂತ ಕಟ್ಟಡ ಆಗುತ್ತದೆ ಆಗ ಅಲ್ಲಿ ಸ್ಥಳಾಂತರವಾಗುತ್ತದೆ ಎಂದು ಕಳೆದ ಮೂರು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಇಲಾಖೆಯ ಸ್ವಂತ ಕಟ್ಟಡ ಆಗಲಿಲ್ಲ. ಮತ್ತು ಎಲ್ಲಿಯೂ ಸ್ಥಳಾಂತರ ಆಗಲಿಲ್ಲ.
ವಿಶೇಷವಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ ಮಿನಿವಿಧಾನಸೌಧದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸ್ಥಳಾಂತರ ಆಗಲಿದೆ ಎಂಬ ಮಾಹಿತಿ ಇತ್ತು. ಆದರೂ ಇದುವರೆಗೂ ಸ್ಥಳಾಂತರ ಆಗಲಿಲ್ಲ. ನಿರೀಕ್ಷಕರ ಕಚೇರಿ ಸ್ಥಳಾಂತರ ಆಗುವ ಬಗ್ಗೆ ದಿನಾಂಕ 31.08. 2021 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ವಾಟ್ಸಪ್ ಸಂಖ್ಯೆಗೆ ದೂರು ನೀಡಲಾಗಿತ್ತು. ಆನಂತರ ಜಿಲ್ಲಾಧಿಕಾರಿ ಕಚೇರಿ ಅವರು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗುವುದು. ಎಂಬ ಮಾಹಿತಿ ನೀಡಿದರು. ಅದರ ನಂತರ ದಿನಾಂಕ 30 11 2021 ರಂದು ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಇವರಿಗೆ ಭಟ್ಕಳ ನಿರೀಕ್ಷಕರ ಕಚೇರಿಯನ್ನು ಖುದ್ದಾಗಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಲಾಖೆಯ ಸ್ವಂತ ಕಟ್ಟಡ ಆಗುವರೆಗೂ ತುರ್ತಾಗಿ ಸ್ಥಳಾಂತರ ಆಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ದಿನಾಂಕ 05.01. 2022 ರಂದು ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು (A.I.T.U.C) ಮತ್ತು (C.I.T.U) ಜಂಟಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಯಿಂದ ತಾಲೂಕಿನ ಕಾರ್ಮಿಕರನ್ನು ಒಳಗೊಂಡಂತೆ ಧರಣಿಕುರ ಲಾಗುವುದು ಎಂದು ಮಾನ್ಯ ತಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸುವಾಗ ಜಿ.ಎನ್. ರೇವಣಕರ್. ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಎ.ಐ.ಟಿ.ಯು.ಸಿ) ಸುನಿಲ್ ರಾಯ್ಕರ್. ಜಿಲ್ಲಾ ಸಂಚಾಲಕರು (ಎ.ಐ.ಟಿ.ಯು.ಸಿ) ಪುಂಡಲಿಕ್ ನಾಯ್ಕ್. ತಾಲೂಕ ಅಧ್ಯಕ್ಷರು. (ಸಿ.ಐ.ಟಿ.ಯು) ಉಪಸ್ಥಿತರಿದ್ದರು.
Be the first to comment