ಹೆಣ್ಣುಮಕ್ಕಳ ಅಪಹರಣ ಪ್ರಕರಣವನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ ; ಸುಮನ್ ಪನ್ನೇಕರ್..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಹೆಣ್ಣುಮಕ್ಕಳ ಅಪಹರಣ ಪ್ರಕರಣವನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಹೇಳಿದರು.ಅವರು ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿನಡೆಯುತ್ತಿರುವ ಪೊಲೀಸ್ ಸಿಬಂದಿಗಳ ಹುದ್ದೆಗಳ ನೇಮಕಾತಿ ಸಂಬಂಧಿಸಿದ ದೇಹದಾಡ್ಯ ಪರೀಕ್ಷೆಯನ್ನುಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.ಅಪ್ರಾಪ್ತ ವಯಸ್ಕ ಮಕ್ಕಳು ನಾಪತ್ತೆ ಆದರೆ, ಅದನ್ನು ಅಪಹರಣ ಎಂದೇ ದಾಖಲಿಸಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಪೂರ್ವ ಯೋಜಿತ ಕೃತ್ಯಗಳೂ ನಡೆಯುತ್ತಿವೆ. ಆದರೆ, ಅಪ್ರಾಪ್ತ ಯುವತಿ ಇನ್ನೊಬ್ಬರ ಜೊತೆ ಹೋದಲ್ಲಿ ಅದನ್ನು ಅಪಹರಣ ಎಂದೇ ಪರಿಗಣಿಸಲಾಗುತ್ತದೆ. ನ್ಯಾಯಾಲಯದಆದೇಶ ಕೂಡ ಹಾಗೇ ಇದೆ. ಅಪರಹಣಕ್ಕೆ ಆದ ಮಕ್ಕಳುಒಂದೆರಡು ದಿನದಲ್ಲಿ ಪತ್ತೆ ಆಗುತ್ತಿದ್ದಾರೆ. ಪಾಲಕರ ಬಳಿಅವರನ್ನೂ ಪೊಲೀಸ್ ಒಪ್ಪಿಸುತ್ತಿದೆ. ಇಂತಹ ಘಟನೆಗಳು ಮೊದಲಿನಿಂದಲೂ ನಡೆಯುತ್ತಿದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಸುಲಭದಲ್ಲಿ ಸಂಪರ್ಕ

CHETAN KENDULI

ಸಾಧ್ಯವಾಗುವ ಮಾಧ್ಯಮಗಳ ಬಳಕೆ ಇಂತಹ ಘಟನೆಗಳಿಗೆ ಕಾರಣ. ಈ ಕುರಿತೂ ಶಾಲಾ ಹಂತದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡಲಾಗುತ್ತಿದೆ ಎಂದರು.ಇದೇ ರೀತಿ ಗಾಂಜಾ ಪ್ರಕರಣವನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇವ. ಸಾಗಾಟಮಾಡುವವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಗೋಕರ್ಣ,ಹೊನ್ನಾವರದಲ್ಲೂ ಇಂಥಪ್ರಕರಣ ಬಯಲಿಗೆ ತಂದಿದ್ದೇವೆ. ಅಪಹರಣ ಹಾಗೂ ಗಾಂಜಾ ಸೇರಿದಂತೆ ಯಾವುದೇ ಮಾದಕ ದ್ರವ್ಯ ಸಾಗಾಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಸಿದೆ. ಶಾಲಾ ಕಾಲೇಜು ಹಂತದಲ್ಲೂ ಅಪರಾಧ,ಮಾದಕ ವಸ್ತುಗಳ ವಿರುದ್ಧಜಾಗೃತಿ ಮೂಡಿಸುತ್ತಿದ್ದೇವೆ. ಸೈಬರ್ ಕ್ರೈಮ್ ತಿಳುವಳಿಕೆಕೂಡ ನೀಡಲಾಗುತ್ತದೆ ಎಂದರು.

 

ಬಂದೂಕುಗಳ ಪುನರ್ ನವೀಕರಣಕ್ಕೆ ಪೊಲೀಸ್ ಇಲಾಖೆಯಿಂದ ವಿಳಂಬ ಆಗುತ್ತಿಲ್ಲ. ಹೊಸ ಬಂದೂಕಿಗೆ ಮಾತ್ರ ಪರವಾನಗಿ ಬೇಕಿದೆ. ಬೆಳೆ ರಕ್ಷಣೆಯ ಉದ್ದೇಶದ ಬಂದೂಕು ಪರವಾನಗಿ ನವೀಕರಣಕ್ಕೆ ಎಂದಿಗೂ ವಿಳಂಬ ಮಾಡುವುದಿಲ್ಲ.  ಕರಾವಳಿ ಜಿಲ್ಲೆಯಲ್ಲಿ ಪೊಲೀಸ್ ಸಿಬಂಧಿಯಾಗಿ ಬರಲು ಯಾರೂ ಮುಂದಾಗುತ್ತಿಲ್ಲ. ಇಲಾಖೆಯಲ್ಲಿ ಸ್ಥಳೀಯರಿದ್ದರೆ ಜನರ ಸ್ಪಂದನೆಗೂ ಅನುಕೂಲ ಆಗಲಿದೆ. ಇಲಾಖೆ ಕೂಡ ಈ ಜಿಲ್ಲೆಯ ಜನರು ಹೆಚ್ಚು ಪೊಲೀಸ್ ಇಲಾಖೆ ಸೇರ್ಪಡೆ ಆಗುವಂತೆ ಮನವಿ ಮಾಡುತ್ತದೆ. ಎಂದರು. ಖಾಲಿ ಇರುವ ಸಿಬ್ಬಂದಿ ಹುದ್ದೆ ತುಂಬುವ ಪ್ರಕ್ರಿಯೆ ನಡೆಯುತ್ತಿದೆ.‌ ಸದ್ಯ ೧೨೦ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ೫೬೦ ಅಭ್ಯರ್ಥಿಗಳು ಬಂದಿದ್ದಾರೆ ಎಂದರು.

Be the first to comment

Leave a Reply

Your email address will not be published.


*