ಜಿಲ್ಲಾ ಸುದ್ದಿಗಳು
ಮಸ್ಕಿ:
ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿದ ಭಾರತದ ಮೊದಲ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಮಸ್ಕಿ ಜನತೆಯ ಪರವಾಗಿ ಅಭಿನಂದನ್ ಸಂಸ್ಥೆಯ ವತಿಯಿಂದ ಮೇಣದ ಬತ್ತಿಯನ್ನು ಹಚ್ಚಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಭಾರತದ ಸೈನ್ಯದ ಬಲಿಷ್ಠತೆಗೆ ಕಾರಣರಾದ ಬಿಪಿನ್ ರಾವತ್ ಅವರು ಸೇನಾ ಕುಟುಂಬದಲ್ಲಿ ಹುಟ್ಟಿ ಸೇನೆಗಾಗಿ ತಮ್ಮ ಜೀವನವನ್ನು ಕಳೆದು ಕೊನೆಗೆ ತಮಿಳುನಾಡಿನಲ್ಲಿ ಸೈನ್ಯದ ಸೆಮಿನಾರ್ ನಲ್ಲಿ ಭಾಗವಹಿಸಲು ತೆರಳಿದ ಸಂದರ್ಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿದರು. ಇವರೊಂದಿಗೆ ಅವರ ಪತ್ನಿ ಹಾಗೂ 12 ಜನ ವೀರ ಯೋಧರು ಮರಣ ಹೊಂದಿರುವುದು ಬಹಳ ವಿಷಾದಕರ ಸಂಗತಿ. ರಾವತ್ ಅವರ ಮರಣ ದೇಶದ ಸೈನ್ಯಕ್ಕೆ ಬಹಳಷ್ಟು ನಷ್ಟವನ್ನು ತಂದಿರುವುದು ಅಕ್ಷರಶಃ ಸತ್ಯವಾಗಿದೆ. ಇವರ ಅಮೋಘ ಸೇವೆಯನ್ನು ಸ್ಮರಿಸುತ್ತಾ ಅವರಿಗೆ ಚಿರ ಶಾಂತಿಯನ್ನು ಕೋರೊಣ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತನಟ್ಟಿ, ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ, ಕಿಶೋರ್, ವಿರೇಶ ಬಣಗಾರ,ಮಲ್ಲಿಕಾರ್ಜುನ ಸಾಸಲ್, ಅಮರೇಶ ಹಳ್ಳಿ, ಸ್ಥಳೀಯ ಯುವಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Be the first to comment