ರಾಜ್ಯ ಸುದ್ದಿಗಳು
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ವಿವಿದೆಡೆ ಜೋರು ಮಳೆಯಾಗುವುದರ ಮೂಲಕ ಧರೆ ತಂಪೆರೆಯಿತು.ಬೆಳಿಗ್ಗೆ ೧೧ ರಿಂದ ಪ್ರಾರಂಭವಾದ ಮಳೆ ಮದ್ಯಾಹ್ನ ೨ಗಂಟೆಯವರೆಗೂ ಮಳೆಯಾಯಿತು. ಗ್ರಾಮೀಣ ಭಾಗದಲ್ಲಿ ಕೆರೆ, ಕುಂಟೆ ಮತ್ತು ಕಲ್ಯಾಣಿಗಳು ನೀರಿನ ಆವೃತ್ತಗೊಂಡವು. ಜನರು ಮನೆಗಳಿಂದಾಚೆ ಬರದೆ ಮನೆಯಲ್ಲಿಯೇ ಇದ್ದರು. ಮಳೆ ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆಯತ್ತ ಜನರು ಧಾವಿಸಿ ಹಬ್ಬದ ಸಾಮಾಗ್ರಿಗಳ ಖರೀದಿಗೆ ಮುಂದಾದ ದೃಶ್ಯ ಸಾಮಾನ್ಯವಾಗಿತ್ತು.
ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಸ್ಥಳೀಯ ಪೆಟ್ರೋಲ್ಬಂಕ್, ಹೋಟೆಲ್, ಇತರೆ ಅಂಗಡಿ ಮುಗ್ಗಟ್ಟುಗಳ ಮೊರೆಹೋದರು. ರಸ್ತೆಯಲ್ಲಿ ಮಳೆಯ ನೀರು ಹರಿಯತೊಡಗಿತು. ಕೆಲ ಮಣ್ಣಿನ ರಸ್ತೆಗಳು ಮಳೆಯಿಂದ ಕೆಸರಿನಿಂದ ಆವೃತ್ತವಾಗಿದ್ದವು.
Be the first to comment