ರಾಷ್ಟ್ರೀಯ ಸುದ್ದಿಗಳು
ಕರ್ನಾಟಕ ಅಂಬಿಗ್ ನ್ಯೂಸ್:
ರಾಜ್ಯದ ಕೀರ್ತಿಯನ್ನು ಹೊರ ರಾಜ್ಯದಲ್ಲಿ ಪ್ರದರ್ಶಿಸುವಲ್ಲಿ ಇಂಚರ್ ಮೆಲೋಡಿಸ್ ತಂಡ ಸಂಪೂರ್ಣ ಯಶಸ್ವಿಯಾಗಿದೆ. ಇದರಿಂದಲೇ ಇಂಚರ್ ಮೆಲೋಡಿಸ್ ತಂಡಕ್ಕೆ ಕರ್ನಾಟಕವಲ್ಲದೇ ಹೊರರಾಜ್ಯದಲ್ಲಿಯೂ ಹೆಚ್ಚಿನ ಬೇಡಿಕೆಯಾಗಿದೆ.
ಹೌದು, ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಇಂಚರ್ ಮೆಲೋಡಿಸ್ ತಂಡ ಸಂಗೀತ ಹಾಗೂ ಹಾಸ್ಯ ಮನುರಂಜನೆಯಲ್ಲಿ ಸಾಕಷ್ಟು ಜನಪ್ರೀಯತೆ ಹೊಂದಿದೆ. ಇದರಿಂದಲೇ ಇಂಚರ್ ಮೆಲೋಡಿಸ್ ತಂಡಕ್ಕೆ ರಾಜ್ಯವಲ್ಲದೇ ಹೊರರಾಜ್ಯದಲ್ಲಿಯೂ ಕಾರ್ಯಕ್ರಮಗಳನ್ನು ನಡೆಸುವ ಬೇಡಿಕೆಯಗಳು ಬರುತ್ತಿವೆ.
ಆಂದ್ರ ರಾಜ್ಯದ ಕಡಪಾ ಜಿಲ್ಲೆಯ ರಾಯಚೊಟಿ ಪಟ್ಟಣದಲ್ಲಿ ಮಾ.15 ರಂದು ನಡೆಯುವ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಕರ್ನಾಟಕದ ಇಂಚರ್ ಮೆಲೋಡಿಸ್ ತಂಡದಿAದ ಹಾಸ್ಯ ಮತ್ತು ಸಂಗೀತ ಮನೊರಂಜನೆ ಕರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ರಾಜ್ಯದ ಕೀರ್ತಿ ಹೊರರಾಜ್ಯದಲ್ಲಿಯೂ ಹರಡಿಸಿದಂತಾಗಿದೆ. ಇದಕ್ಕೆ ತಂಡಕ್ಕೆ ಗಾಯಕರಾದ ಈಶ್ವರ ಉಮರಾಣಿ, ಕಲಾವಿದೆಯಾದ ಪೂಜಾ ವಿಭೂತಿಮಠ, ಗಾಯಕಿ ಆಶಾ ಗದಗ, ಮಜಾ ಟಾಕೀಜ್‌ನ ಮಹಾಂತೇಶ ಹಡಪದ ಹಾಗೂ ಮಿಮಿಕ್ರೀ ಹಾಸ್ಯ ಕಲಾವಿದ ವಿರೇಶ ಹುನಗುಂದ ಅವರೊಂದಿಗೆ ಕಲಾವಿದರ ಅಭಿಮಾನಿ ಮಂಜುನಾಥ ಹಬ್ಬಿಹಾಳಮಠ ಕೈಜೋಡಿಸಿದ್ದಾರೆ. ತಂಡಕ್ಕೆ ಕೈಜೋಡಿಸಿದ ಎಲ್ಲ ಕಲಾವಿದರಿಗೂ ಹಾಸ್ಯ ಚಲನಚಿತ್ರ ಕಲಾವಿದ ಶ್ರೀಶೈಲ ಹೂಗಾರ ಅಭಿನಂದನೆ ತಿಳಿಸಿದ್ದಾರೆ.
“ಮುದ್ದೇಬಿಹಾಳ ತಾಲೂಕಿನಿಂದ ಆಂದ್ರದ ಕಡಪಾ ಜಿಲ್ಲೆಯ ರಾಯಚೊಟಿ ಪಟ್ಟಣದಲ್ಲಿ ಕಲಾವಿದರ ತಂಡ ಮನೊರಂಜನೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ರಾಯಚೊಟಿಯ ನಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದೆ. ಆದರೆ ಇಲ್ಲ ನಮ್ಮವರನ್ನು ಕಂಡು ಬಹಳ ಖುಷಿಯಾಯಿತು.”
-ರಮೇಶ ಕೆಂದೂಳಿ, ಮುದ್ದೇಬಿಹಾಳ ಪಟ್ಟಣದ ಉದ್ಯಮಿ.
Be the first to comment