ಜಿಲ್ಲಾ ಸುದ್ದಿಗಳು
ಮಸ್ಕಿ:
ತಾಲೂಕಿನ ಮಾರಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಸ್ಕಿಹಾಳ ಗ್ರಾಮದಲ್ಲಿ ಶನಿವಾರ ಜರುಗಿದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಬರಮಾಡಿಕೊಂಡು ಮೊದಲಿಗೆ ಪ್ರೌಡ ಶಾಲೆ ಮಸ್ಕಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಗೂ ರೈತ ಗೀತೆಯನ್ನು ಹಾಡಿದರು.
ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರಲದಿನ್ನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಠಾಕಪ್ಪ ವಹಿಸಿದ್ದರು.
ಪ್ರಾಸ್ತಾವಿಕ ನುಡಿಯನ್ನು ಕವಿತಾ.ಆರ್ ತಹಶೀಲ್ದಾರರು ಮಸ್ಕಿ ಇವರು ನೆರವೇರಿಸಿದರು.
ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳ ಪರಿಚಯ ಮಾಡಿಕೊಳ್ಳಲಾಯಿತು. ನಂತರ ತಾಲೂಕಿನ ವಿವಿಧ ಇಲಾಖೆಗೆ ಸಂಭಂದಿಸಿದ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ತಾಂಡಾ ಅಭಿವೃದ್ದಿ ಇಲಾಖೆ ವತಿಯಿಂದ ಸಿಗುವ ಸೌಕರ್ಯ ಗಳು ಮಾರಲದಿನ್ನಿ ತಾಂಡಾ ೧೯ ನೇ ವಾರ್ಡ್ ಪುರಸಭೆ ವ್ಯಾಪ್ತಿಗೆ ಬರುವ ತಾಂಡಾದಲ್ಲಿ ನಿವೇಶನ ಹಕ್ಕು ಪತ್ರ ವಿತರಿಸಿಲ್ಲ. ಸೇತುವೆ ನಿರ್ಮಾಣ ಹಾಗೂ ರುದ್ರ ಭೂಮಿಗೆ ಭೂಮಿ ಮಂಜೂರು ಆಗಿರುವುದಿಲ್ಲ. ಎಂದು ಜಿಲ್ಲಾಧಿಕಾರಿಗಳ ಬಳಿ ಹೇಳಿದಾಗ ಪ್ರತ್ಯುತ್ತರವಾಗಿ “ಕಂದಾಯ ಗ್ರಾಮ” ಎಂದು ಯಾವಾಗ ಘೋಷಣೆ ಆಗುವುದೋ ಹಾಗ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸುಲಭ ಎಂದು ಜಿಲ್ಲಾಧಿಕಾರಿ ಹೇಳಿದರು.
ಮರಿಸ್ವಾಮಿ ಹೂವಿನಭಾವಿ ಸುಮಾರು 40 ಹಳ್ಳಿಯ ಜನತೆಯು ಮುದಬಾಳ ಕ್ರಾಸ್ ಬಳಿ ಬಸ್ ನಿಲುಗಡೆಯ ಬಗ್ಗೆ ಸಾರ್ವಜನಿಕರ ಒಮ್ಮತದಲ್ಲಿ ಒತ್ತಾಯ ಮಾಡಿದಾಗ ಪ್ರತ್ಯುತ್ತರವಾಗಿ ಜಿಲ್ಲಾಧಿಕಾರಿ ನಿಮ್ಮ ಬೇಡಿಕೆಯನ್ನು ಪತ್ರದ ಮೂಲಕ ಕೊಡಿ ಪರಿಹರಿಸಲಾಗುವುದು ಎಂದು ಶಿವಶಂಕರ ಗೌಡ ಕೆಕೆ ಆರ್ ಟಿ ಸಿ ಡಿಪೋ ಮ್ಯಾನೇಜರ್ ರನ್ನು ತರಾಟೆಗೆ ತೆಗೆದುಕೊಂದು ನೀವೇ ಖುದ್ದಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆಯನ್ನು ಸರಿಪಡಿಸಿ ಎಂದರು.
ಮಾರಲದಿನ್ನಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 4 ಜನ ಕಾಯಂ ಶಿಕ್ಷಕರೇ ಇಲ್ಲಾ ಹಾಗೂ ಮಾರಲದಿನ್ನಿ ತಾಂಡಾದಿಂದ ನಾಲ್ಕೂ ಕಿ. ಮೀ ನಡೆದು ಕೊಂಡು ಹೋಗುವ ಕಾರಣ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಿಸಿ ಕೊಡಿ ಎಂಬ ಬೇಡಿಕೆ ಇಡಲಾಯಿತು. ಬೆನಕನಾಳ ಗ್ರಾಮದ ಒಂದು ಕಿಲೋ ಮೀಟರ್ ಅಂತರದಲ್ಲಿ ವಿದ್ಯುತ್ ಕಲ್ಪಿಸಿ ಸಾರ್ವಜನಿಕರ ಸರಿಪಡಿಸಿ ಎಂಬ ಒತ್ತಾಯಕ್ಕೆ ಜಿಲ್ಲಾಧಿಕಾರಿಗಳು ಜೆಸ್ಕಾಂ ಇಲಾಖೆಯ ಅಧಿಕಾರಿ ಕೆಂಚಪ್ಪ ಭಾವಿಮನಿ ಗಮನಕ್ಕೆ ತಂದು ಸರಿಪಡಿಸಿ ಎಂದರು. ಯಾವುದೇ ಪಿತ್ರಾರ್ಜಿತ ಆಸ್ತಿ, ಅಕ್ರಮ ಸಕ್ರಮ ಆಸ್ತಿಯ ಪಹಣಿಯ ಕುರಿತು ಚರ್ಚೆ ಇಂತಹ ಸಮಸ್ಯೆ ಪ್ರತ್ಯುತ್ತರ ನೀಡಿದ ಜಿಲ್ಲಾಧಿಕಾರಿ ಪಹಣಿ ಹೆಸರಿಗೆ ಬಂದಿರುವುದಿಲ್ಲ ಎಂದರೆ ನೀವು 57 ಫಾರ್ಮ್ ತುಂಬಿ ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಬಳಿ ಕೊಡಿ ಸರಿಪಡಿಸಲಾಗುವುದು ಎಂದರು.ರತ್ನಮ್ಮ ಮಸ್ಕಿ ನಿವಾಸಿ ಇವರು ದೇವದಾಸಿ ಮಹಿಳೆಯರು ಮಾಸಿಕ ಪಿಂಚಣಿ, ದೇವದಾಸಿ ಮಹಿಳಾ ಯೋಜನಾ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಯಿತು ಎಲ್ಲಾ ಆಲಿಸಿ ಪರಿಹಾರ ಸಿಗಬೇಕೆಂದರೆ ಸಮಯ ಹಿಡಿಯುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಸ್ಕಿಹಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಬೋರ್ವೆಲ್, ಎಸ್ಸಿ ವಾರ್ಡ್ ಗೆ ಅಂಬೇಡ್ಕರ್ ಭವನ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯನ್ನು ತೆರವು ಗೊಳಿಸಿ ಶಾಲಾ ಕಟ್ಟಡ ಸ್ಥಳಾಂತರ ಹಾಗೂ ಉನ್ನತೀಕರಿಸಿ, ರಸ್ತೆ ಅಭಿವೃದ್ದಿ, ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ಜನತಾ ಮನೆಗಳನ್ನು ಮರು ಚಾಲನೆ ಮಾಡಬೇಕು, ಸಿಸಿ ರಸ್ತೆ, ವಿದ್ಯುತ್ ಸಂಪರ್ಕ, ಜಮೀನುಗಳಿಗೆ ತೆರಳುವ ರೈತರಿಗೆ ರಸ್ತೆ ನಿರ್ಮಿಸಿ, ಚರಂಡಿ ನಿರ್ಮಾಣ, ಬಸ್ ನಿಲ್ದಾಣ ನಿರ್ಮಾಣ, ಪಶು ಹಾಸ್ಪಿಟಲ್, ವಿತರಣಾ ಕಾಲುವೆ ಸಂಖ್ಯೆ 5 ಅಭಿವೃಧ್ದಿ, ನಾಡ ಕಛೇರಿಗಳಲ್ಲಿ ಸಿಗುವ ಸೌಲಭ್ಯಳು ನಮ್ಮ ಗ್ರಾಮ ಪಂಚಾಯಿತಿಗಳಲ್ಲಿಯೇ ಸಿಗುವಂತೆ ಸೇರಿದಂತೆ ಜಿಲ್ಲಾಧಿಕಾರಿಗಳ ಬಳಿ ಬೇಡಿಕೆ ಇಡಲಾಯಿತು.ಈಎಲ್ಲಾಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು.ಬೆಳೆ ಪರಿಹಾರದ ಯಾವುದೇ ಅರ್ಜಿಗಳಿರಲಿ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ಕವಿತಾ. ಆರ್ ತಹಶೀಲ್ದಾರ ಗೆ ಎಪ್ರಿಲ್ 30 ಒಳಗಾಗಿ ಸರಿಪಡಿಸಲು ಹೇಳಿದರು.
ನೇರವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾರಂಭಿಸಿ ದರು. 11 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಜಿಲ್ಲಾಧಿಕಾರಿಗಳು ಬರುವವರೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳು ಬಂದಾಗ ಸಾಂಕೇತಿಕವಾಗಿ ಎರಡು – ಮೂರು ನೃತ್ಯಗಳನ್ನು ಮಾಡಲಾಯಿತು.ಕಾಟಗಲ್ ಗ್ರಾಮದ ವಿದ್ಯಾರ್ಥಿಗಳಿಂದ ಹೊಯ್ಸಳ ಸಾಮ್ರಾಜ್ಯದ ಕುರಿತು ತುಂಬಾ ಅದ್ಬುತವಾಗಿ ನೃತ್ಯದ ರೂಪದಲ್ಲಿ ತೋರ್ಪಡಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಲು ಬಹಳ ಶ್ರಮಿಸಿ ನೃತ್ಯವನ್ನು ಬಹಳ ಅಧ್ಬುತವಾಗಿ ಮಾಡಿದ ಸರ್ವ ವಿಧ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ಜಿಲ್ಲಾಧಿಕಾರಿಗಳು ನೀಡಿದರು. ಹಾಗೆಯೇ ಸಾವಿತ್ರಿ ಬಾ ಫುಲೆ ಪ್ರಶಸ್ತಿ ಪುರಸ್ಕೃತರು ಸೇರಿ ಇನ್ನಿತರೇ ಮಹಿಳೆಯರಿಗೂ ಗಣ್ಯರಿಂದ ಸನ್ಮಾನಿಸಲಾಯಿತು. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಕೋವಿಡ್ -19 ಸಂಧರ್ಭದಲ್ಲಿ ಇವರ ಶ್ರಮ ಬಹಳ ಪ್ರಮುಖವಾದದ್ದು ಎಂದು ಇವರ ಸೇವೆ ಮೆಚ್ಚಿ ತಲಾ 1000 ರೂಪಾಯಿಯ ಚೆಕ್ ಅನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.
ಭೋಜನದ ನಂತರ ಇನ್ನುಳಿದ ಸಮಸ್ಯೆಗಳನ್ನು ಕೇಳೋಣ ಎಂದು ತೆರಳಿದ ಜಿಲ್ಲಾಧಿಕಾರಿಗಳು ನೇರವಾಗಿ ವೇದಿಕೆಗೆ ಆಗಮಿಸದೆ ನೇರವಾಗಿ ವಿವಿಧ ಇಲಾಖೆಯ ಯೋಜನಾ ವಿವರವುಳ್ಳ ಮಳಿಗೆಗಳನ್ನು ವೀಕ್ಷಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
ಇದೇ ಸಂದರ್ಭದಲ್ಲಿ ಠಾಕಪ್ಪ ಅಧ್ಯಕ್ಷರು ಗ್ರಾ.ಪಂ ಮಾರಲದಿನ್ನಿ, ಆರ್.ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ, ಹನುಮಂತಪ್ಪ ವೆಂಕಟಾಪುರ ನೂರ್ ಜಹಾನ್ ಖಾನಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ. ಪಂ ರಾಯಚೂರು, ಶರಣಮ್ಮ ಕಾರನೂರು ಸಿಡಿಪಿಒ ಲಿಂಗಸ್ಗೂರು- ಮಸ್ಕಿ, ಅಮರೇಶ್ ಕಾರ್ಯನಿರ್ವಾಹಕ ಅಧಿಕಾರಿ ತಾ. ಪಂ ಮಸ್ಕಿ, ರಾಹುಲ್ ಸಂಕನೂರ ಸಹಾಯಕ ಆಯುಕ್ತರು ಲಿಂಗಸ್ಗೂರು, ಭೂದಾಖಲೆಗಳ ಉಪನಿರ್ದಶಕಿ ರೇಷ್ಮಾ,ಹುಂಬಣ್ಣ ರಾಠೋಡ್ ಲಿಂಗಸ್ಗೂರು- ಮಸ್ಕಿ, ಕವಿತಾ. ಆರ್ ತಹಶೀಲ್ದಾರರು ಮಸ್ಕಿ, ಅಕ್ತರ್ ಅಲಿ ಶಿರಸ್ತೇದಾರ
ರರು,ಪ್ರಭಾಕರ ಭಟ್ ಗ್ರೇಡ್ 2 ತಹಶೀಲ್ದಾರರು, ವಿವಿಧ ಬಗೆಯ ಸಂಘಟಕರು, ವಿಧ್ಯಾರ್ಥಿಗಳು, ಪೋಲೀಸ್ ಇಲಾಖೆ ಸರ್ವ ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment