ದಲಿತ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಿದ್ಧಗೊಂಡ ಯುವ ದಲಿತರು…!!! ಕರ್ನಾಟಕ ಬಹುಜನ ಚಳುವಳಿಯ ಮುದ್ದೇಬಿಹಾಳ ತಾಲೂಕಾ ನೂತನ ಪದಾಧಿಕಾರಿಗಳ ಆಯ್ಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಕೆಲ ದಲಿತ ಸಂಘಟನೆಗಳು ದಲಿತ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬರುತ್ತಿವೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಬಹುಜನ ಚಳುವಳಿ ತೆಲೆ ಎತ್ತಿದ್ದು ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಅಕ್ರಮಗಳ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸುವುದೇ ಸಂಘಟನೆಯ ಮುಖ್ಯ ಗುರಿಯಾಗಿದೆ ಎಂದು ಕರ್ನಾಟಕ ಬಹುಜನ ಚಳುವಳಿ ಜಿಲ್ಲಾಧ್ಯಕ್ಷ ಕುಮಾರಶಂಕ್ರಪ್ಪ ಗುಂಡಕನಾಳ ಹೇಳಿದರು.

ರವಿವಾರ ಮುದ್ದೇಬಿಹಾಳ ತಾಲೂಕಿಗೆ ಬೇಟಿ ನೀಡಿ ವಿವಿಧ ದಲಿತ ಯುವ ಮುಖಂಡರನ್ನು ಬೇಟಿ ಮಾಡಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಅವರು, ಮುದ್ದೇಬಿಹಾಳ ತಾಲೂಕಿನಲ್ಲಿಯೂ ದಲಿತ ಮುಖಂಡರಿದ್ದು ದಲಿತ ತಾಲೂಕಿನ ಕೆಲ ಗ್ರಾಮಗಳಲ್ಲಿ  ದಲಿತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಾ ಬರುತ್ತಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಮುದ್ದೇಬಿಹಾಳ ತಾಲೂಕಿನಲ್ಲಿಯೂ ನಮ್ಮ ಸಂಘಟನೆಯನ್ನು ಉದ್ಘಾಟಿಸಿದ್ದು ತಾಲೂಕಿನ ಎಲ್ಲ ದಲಿತರು ಸಂಘಟನೆಯ ಪದಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.



ಕರ್ನಾಟಕ ಬಹುಜನ ಚಳುವಳಿ ಯುವ ಘಟಕ ಅಧ್ಯಕ್ಷ ನಿಕೇತ ದೇವೇಂದ್ರಪ್ಪ ಹುನಕುಂಟಿ

ನೂತನ ಪದಾಧಿಕಾರಿಗಳ ನೇಮಕ:

ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರಾಗಿ ಸಂತೋಷ ಲಕ್ಷ್ಮಣ ಚಲವಾದಿ ಹಾಗೂ ಉಪಾಧ್ಯಕ್ಷರಾಗಿ ಜಗದೇವರಾವ ಬೈಲಪ್ಪ ಚಲವಾದಿ, ಕಾರ್ಯದರ್ಶಿಯಾಗಿ ಶರಣಪ್ಪ ಯಲ್ಲಪ್ಪ ಚಲವಾದಿ, ಖಜಾಂಚಿಯಾಗಿ ಶರಣಪ್ಪ ಪವಾಡೆಪ್ಪ ಮೇಲಿನಮನಿ ಮತ್ತು ಸಂಘಟನೆಯ ಯುವ ಘಟಕದ ಅಧ್ಯಕ್ಷರನ್ನಾಗಿ ನಿಕೇತ ದೇವೆಂದ್ರಪ್ಪ ಹುನಕುಂಟಿ ಅವರನ್ನು ಆಯ್ಕೆ ಮಾಡಲಾಯಿತು.

 

Be the first to comment

Leave a Reply

Your email address will not be published.


*