ತಾಲೂಕಾಸ್ಪತ್ರೆಗೆ ಅಗತ್ಯ ಉಪಕರಣ ನೀಡಿ; ಬಿಇಎಲ್ ಕಂಪೆನಿಗೆ ಶಾಸಕ ದಿನಕರ ಶೆಟ್ಟಿ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ

ಜಿಲ್ಲೆಯ ವಿವಿಧ ಭಾಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಿಇಎಲ್ ಕಂಪೆನಿಯ ಪ್ರಮುಖರಿಗೆ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕೆಲ ಅಗತ್ಯ ಉಪಕರಣಗಳನ್ನು ಒದಗಿಸುವಂತೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಮನವಿ ಸಲ್ಲಿಸಿ, ವಿನಂತಿಸಿಕೊಂಡರು.ಕಾರವಾರದ ಕುಂಠಿ ಮಹಾಮಾಯಾ ದೇವಸ್ಥಾನದ ಬಳಿ ಬಿಇಎಲ್ ಕಂಪೆನಿಯು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬಜಾರ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಕಂಪೆನಿಯ ಪ್ರಮುಖರು, ಶಾಸಕ ದಿನಕರ ಶೆಟ್ಟಿಯವರ ವಿನಂತಿಯ ಮೇರೆಗೆ ಮಾರ್ಗಮಧ್ಯೆ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆಯ ಕುಂದುಕೊರತೆಗಳ ಕುರಿತು ವಿವರಿಸಿದ ಶಾಸಕರು, ಆಸ್ಪತ್ರೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಟಿ ಸ್ಕ್ಯಾನ್ ಮಷಿನ್ ಹಾಗೂ ಎಕ್ಸರೇ ಮಷಿನ್ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿಸ ಕಂಪೆನಿಯ ಪ್ರಮುಖರು, ಸದ್ಯ ಅನುದಾನದ ಕೊರತೆಯಿರುವ ಕಾರಣ ಮುಂದಿನ ದಿನಗಳಲ್ಲಿ ವಿವಿಧ ಸ್ತರದ ಅನುದಾನದಲ್ಲಿ ಹಂತ ಹಂತವಾಗಿ ತಾಲೂಕಾಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

CHETAN KENDULI

ಶಾಸಕ ದಿನಕರ ಶೆಟ್ಟಿ ಈ ಮೊದಲೂ ಸಹ ಬೆಂಗಳೂರಿನ ಬಿಇಎಲ್ ಕಂಪೆನಿಯ ಪ್ರಧಾನ ಕಚೇರಿಗೆ ತೆರಳಿ, ಆಸ್ಪತ್ರೆಯ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಬಿಇಎಲ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಕೆ.ಎಮ್.ಶಿವಕುಮಾರನ್, ಬಿಇಎಲ್ ಬೆಂಗಳೂರು ಕಾಂಪ್ಲೆಕ್ಸ್ ನಿರ್ದೇಶಕ ವಿನಯಕುಮಾರ ಕಟ್ಯಾಲ, ಇಆರ್ ಹಾಗೂ ವೆಲ್ಫರ್‍ನ ಉಪ ಪ್ರಧಾನ ವ್ಯವಸ್ಥಾಪಕ ಎಮ್. ಗುರುರಾಜ, ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ ನಾಯಕ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*