ಜಿಲ್ಲಾ ಸುದ್ದಿಗಳ
ಮಸ್ಕಿ:
ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಮರಿದೇವಿ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರ ರಾತ್ರಿಯಿಂದಲೇ ವಿವಿಧ ಬಗೆಯ ಪೂಜಾ ಕಾರ್ಯಕ್ರಮಗಳು ಗುರುವಾರ ಬೆಳಗಿನ ಜಾವದ ವರೆಗೂ ಶಾಂತಿಯುತವಾಗಿ ಜರುಗಿತು.
ಮರಿದೇವಿಯ ದೇವಾಸ್ಥಾನದ ವಿಶೇಷವೆಂದರೆ ಗ್ರಾಮದ ಚೌಡೇಶ್ವರಿ ದೇವಾಲಯದಿಂದ ಮಾರಿದೇವಿಯ ಜಾತ್ರಾ ಮೋತ್ಸವದ ಹುಚ್ಚಯ್ಯವನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಊರಿನ ಸಕಲ ಸದ್ಭಕ್ತರು ಭಕ್ತಿ
ಪೂರ್ವಕವಾಗಿ ಬರಮಾಡಿಕೊಂಡು ಸಾಯಂಕಾಲ 6 ಗಂಟೆ 30 ನಿಮಿಷಕ್ಕೆ ಮರಿದೇವಿ ದೇವಸ್ಥಾನದಿಂದ ಬಾಳಪ್ಪನ ಗದ್ದುಗೆಯವರೆಗೆ ಹುಚ್ಚಯ್ಯನ ಮೆರವಣಿಗೆಯು ಸುತ್ತಮುತ್ತಲಿನ ಭಕ್ತರು ಹಾಗೂ ಗ್ರಾಮದ ಗುರು ಹಿರಿಯರ,ತಾತನವರ ಸಹ ಭಾಗಿತ್ವದಲ್ಲಿ ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಶಾಂತಿಯುತವಾಗಿ ಜರುಗಿತು.
ಇದೇ ಸಂದರ್ಭದಲ್ಲಿ ಅಂತರಗಂಗಿ, ನಾಗರಬೆಂಚಿ, ಬೈಲಗುಡ್ಡ, ಮ್ಯಾದರಾಳ, ನಂಜಲದಿನ್ನಿ, ತಲೇಖಾನ, ಹಿರೇ ಕಡಬೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮದ ಸರ್ವ ಸಧಕ್ತರು ಭಾಗಿಯಾಗಿದ್ದರು.
Be the first to comment