ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಕುಂಚಗನೂರ ಗ್ರಾಮದ ರೈತನ ಜಮೀನಿನಲ್ಲಿ ಕಟಾವ ಮಾಡಿದ ಕಬ್ಬಿಗೆ ರವಿವಾರ ಆಕಸ್ಮಿಕ ಬೆಂಕಿ ತಗುಲಿ ಅಂದಾಜು 40 ಸಾವಿರ ಹಾಣಿಯಾಗಿದ್ದು ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಮುದ್ದೇಬಿಹಾಳ ತಾಲೂಕಿನ ನಿಂಗಪ್ಪ ಯಲ್ಲಪ್ಪ ಮಲ್ಲನಗೌಡ್ರ ಎಂಬುವರಿಗೆ ಸೇರಿದ ಜಮೀನಿಗೆ ಬೆಂಕಿ ತಗುಲಿದ್ದು ಅನಾಹುತಗೊಂಡ ಜಮೀನಿನಲ್ಲಿ ಕಟಾವಿಗೆ ಬಂದು ನಿಂತಿದ್ದ ಕಬ್ಬಿಗೆ ಆಗುವ ಬಾರಿ ಅನಾಹುತ ತಪ್ಪಿದ್ದಂತಾಗಿದೆ.
ರವಿವಾರ ಮಧ್ಯಾಹ ನಡೆದ ಘಟನೆ:
ಜಮೀನಿನಲ್ಲಿ ಬೆಳೆದ ಕಬ್ಬಣ್ಣು ಕಟಾವ ಮಾಡಿದ್ದ ಮಲ್ಲನಗೌಡ್ರ ಕುಟುಂಬದವರು ಮಾಡಿದ್ದರು. ರವಿವಾರ ಮಧ್ಯಾಹ್ನ ವೇಳೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ. ಇದನ್ನು ಗಮನಿಸಿದ ಗ್ರಾಮದ ಯುವಕ ಮಾಲಪ್ಪ ಕಂಬಳಿ ಹಾಗೂ ಇತರರು ಮುದ್ದೇಬಿಹಾಳ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ತಕ್ಷಣದಲ್ಲಿಯೇ ಕಾರ್ಯಪ್ರಯುಕ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಡಲೆ ಹೊಟ್ಟಿಗೆ ಹತ್ತಿದ ಬೆಂಕಿಯನ್ನು ನಿಂದಿಸುವಲ್ಲಿ ಹರ ಸಾಹಸ ಪಟ್ಟರು.
ಈ ಸಂದರ್ಭದಲ್ಲಿ ಅಗ್ನಿಶಾಮಕದಳ ಸಿಬ್ಬಂದಿಗಳಾದ ಠಾಣಾಧಿಕಾರಿ ಪ್ರಮೋದ ಸುಂಕದ, ರಾಜೇಂದ್ರ ಪೋದ್ದಾರ, ಎಸ್.ಟಿ.ಹೊಕ್ರಾಣಿ, ಸುನೀಲ ಇದ್ದರು.
Be the first to comment