ಸಂಭ್ರಮದಿಂದಾದ ಘನಮಠ ಶಿವಯೋಗಿಗಳ 143ನೇ ಪುಣ್ಯಸ್ಮರಣೆ…!!! ಭಕ್ತಿ ಜ್ಞಾನ ವೈರಾಗ್ಯದ ಪ್ರತೀಕ ಶ್ರೀ ಘನಮಠ ಶಿವಯೋಗಿಗಳು: ಚನ್ನವೀರದೇವರು ಅಭಿಪ್ರಾಯ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಆಸೆ, ಆಮೀಷ, ಕುಟೀಲವನ್ನು ತೊರೆದು ಭಕ್ತಿ ಜ್ಞಾನ ವೈರಾಗ್ಯವನ್ನು ಮೈಗೂಡಿಸಿಕೋಂಡು ಲೋಕ ಕಲ್ಯಾಣಕ್ಕಾಗಿ ಅವತರಿಸಿದವರೇ ಶಿವಶರಣರು. ಶರಣರನ್ನು ನೆನೆದರೆ ಉದಯ, ಸ್ಮರಿಸಿದರೆ ಅಸ್ತಮಾನ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು ಹೇಳಿದರು.


ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಘನಮಠ ಶಿವಯೋಗಿಗಳ 143ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಆನಿಧ್ಯವಹಿಸಿ ಚನ್ನವೀರದೇವರು ಮಾತನಾಡಿದರು.

ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಘನಮಠ ಶಿವಯೋಗಿಗಳ 143ನೇ ಪುನ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶಿವಶರಣ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಮಾನವ ಜೀವನ ಶ್ರೇಷ್ಠವಾಗುತ್ತದೆ ಎಂದು ಅವರು ಹೇಳಿದರು.


ಚಂದ್ರಶೇಖರ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸುಂದರ ವ್ಯಕ್ತಿತ್ವ ಸಂಸ್ಕಾರವನ್ನು ಆಧ್ಯಾತ್ಮ ಮಾರ್ಗದಿಂದಲೇ ಪಡೆಯಬೇಕು. ಅಂದಾಗಲೇ ಮಾತ್ರ ಮುಕ್ತಿ ದೊರೆಯಲು ಸಾದ್ಯವಾಗುತ್ತದೆ ಎಂದು ಹೇಳಿದರು.


ಘನಮಠ ಶಿವಯೋಗಿಗಳಿಂದ ತಪೋವನವಾದ ಕುಂಟೋಜಿ:
ಮೂಲತ ಆಂದ್ರ ಪ್ರದೇಶದ ದಾರೂರಿನ ಪುಟ್ಟ ಗ್ರಾಮದಲ್ಲಿ ಜನಿಸಿ ಶ್ರೀಗಳು ಕನ್ನಡ ಕಲಿತು ಕನ್ನಡದಲ್ಲಿಯೇ ಗದ್ಯ ಪದ್ಯಗಳನ್ನು ರಚಿಸಿದರು. ವೈರಾಗ್ಯವನ್ನು ಅರಿಸಿದ ಅವರು ಕುಂಟೀಜಿ ಗ್ರಾಮಕ್ಕೆ ಆಗಮಿಸಿ ಭಕ್ತಿ ದಈಪವಾದರು. ಅಲ್ಲದೇ ಕಲ್ಯಾಣಕ್ಕಾಗಿ ಕುಂಟೋಜಿ ಗ್ರಾಮವನ್ನೇ ತಮ್ಮ ತಪೋವನವನ್ನಾಗಿ ಆಯ್ಕೆ ಮಾಡಿದ ಅವರು ಹಲವಾರು ವರ್ಷ ಕಠಿಣ ತಪಸ್ಸನ್ನು ಮಾಡಿ ಜನರಿಗೆ ಭಕ್ತಿಜ್ಞಾನವನ್ನು ಬಿತ್ತರಿಸಿದ ಸಾಕಷ್ಟು ಸಾಕ್ಷಿಗಳು ಕುಂಟೋಜಿ ಗ್ರಾಮದಲ್ಲಿವೆ. ಇಂತಹ ಶಿವಶರಣರನ್ನು ಇರಿಸಿಕೊಂಡ ಕುಂಟೋಜಿ ಗ್ರಾಮವೇ ಶ್ರೇಷ್ಠ ಗ್ರಾಮವಾಗಿದೆ ಎಂದು ಚನ್ನವೀರದೇವರು ಹೇಳಿದರು.

ವೀರಯ್ಯ ಶಾಸ್ತ್ರಿಗಳುಹಾಗೂ ಬಳ್ಳಾರಿ ಗುರುಗಳು ಆಶೀರ್ವಚನ ನೀಡಿದರು. ಪಾರ್ವತೆಮ್ಮ ಲಿಂಗದಳ್ಳಿ ಕವನ ವಾಚಿಸಿದರು. ಶಿವಬಸು ಸಜ್ಜನ, ಶ್ರೀಶೈಲ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕುಂಟೋಜಿ ಗ್ರಾಮ ಪಂಚಾಯತಿ ನೂತನ ಚುನಾಯಿತ ಸದಸ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಚನ್ನಪ್ಪ ಸಜ್ಜನ, ಸುರೇಶ ಸಜ್ಜನ, ಬಿ.ಎಸ್.ಹೂಗಾರ, ಮಲ್ಲಿಕಾರ್ಜುನ ಬಾಗೇವಾಡಿ, ಶಿವಲಿಂಗಪ್ಪ ಗಸ್ತಿಗಾರ, ಶಿವನಗೌಡ ಪಾಟೀಲ ಇದ್ದರು. ಬಿ.ಕೆ.ಬಿರಾದಾರ ಸ್ವಾಗತಿಸಿದರು. ಬಸವರಾಜ ಬಡಿಗೇರ ನೀರೂಪಿಸಿ ವಂದಿಸಿದರು.

 

 

Be the first to comment

Leave a Reply

Your email address will not be published.


*