ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಅಭಕಾರಿ ಇಲಾಖೆ ನಿಯಮಾನುಸಾರವಾಗಿ ಮದ್ಯ ಮಾರಾಟ ಮಾಡದೇ ಅನಧಿಕೃತವಾಗಿ ಪಾನ್ ಶಾಪ್ ಹಾಗೂ ಹೋಟೆಲಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಸ್ಪಂಧನೆ ನೀಡದೇ ತಾಲೂಕಾ ಅಭಕಾರಿ ಕಛೇರಿ ಎದುರಿಗೆ ಸಾಮಾಜಿಕ ಹೋರಾಟಗಾರ ಶಿವಾನಂದ ವಾಲಿಕಾರ ಏಕೈಕವಾಗಿ ಸೋಮವಾರ ಧರಣಿ ಸತ್ಯಾಗ್ರಹಕ್ಕೆ ಮುಂದಾದ ಘಟನೆ ನಡೆದಿದೆ.
ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಪರವಾಣಿಗೆ ಇಲ್ಲದಿದ್ದರೂ ಮುದ್ದೇಬಿಹಾಳ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಮದ್ಯದಂಗಡಿ ಮಾಲಿಕಾರ ಕುಮ್ಮಕ್ಕಿಂದ ಗ್ರಾಮೀಣ ಭಾಗದಲ್ಲಿ ಬೇಕಾಬಿಟ್ಟಿಯಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಿನಗೂಳಿಯಾಗಿ ಕೆಲಸ ಮಾಡಿದ ಗ್ರಾಮೀಣ ಜನರು ತಮ್ಮ ದುಡಿಮೆಯನ್ನು ಮದ್ಯ ಸೇವನೆಗೇ ಮುಡಿಪಾಗಿಡುತ್ತಿದ್ದು ಅವರ ಕುಟುಂಬಸ್ಥರು ಉಪವಾಸ ಇರಬೇಕಾಗಿದೆ. ಇದರ ಬಗ್ಗೆ ಸಾಕಷ್ಟು ಬಾರಿಗೆ ತಾಲೂಕಾ ಅಭಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಮಾಡಿ ಅಕ್ರಮ ಮದ್ಯ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅಭಕಾರಿ ಇಲಾಖೆಯವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟಗಾರರಿಂದ ಅಭಕಾರಿಗಳು ಶಾಮಿಲಾಗಿದ್ದಾರೆ ಎನ್ನುವುದು ಸಾಭಿತಾಗುತ್ತಿದೆ. ಆದ್ದರಿಂದ ಕಛೇರಿ ಎದುರಿಗೆ 5 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸತ್ಯಾಗ್ರಹಕ್ಕೆ ಮುಂದಾಗಿದ್ದೇನೆ ಎಂದು ಶಿವಾನಂದ ವಾಲಿಕಾರ ತಿಳಿಸಿದ್ದಾರೆ.
ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೇ ಮುದ್ದೇಬಿಹಾಳ ಪಟ್ಟಣದಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದರ ಬಗ್ಗೆ ಇಲಾಖೆ ಅಧಿಕಾರಿಗಳು ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ…? ಇನ್ನೂ ಮದ್ಯ ಅಂಗಡಿಗಳಿಗೆ ವಿವಿಧ ರೀತಿಯ ಷರತ್ತಿನ ಅಡಿಯಲ್ಲಿ ಮದ್ಯ ಮಾರಾಟದ ಪರವಾಣಿಗೆ ನೀಡಲಾಗಿದೆ. ಆದರೆ ಸರಕಾರದ ಆದೇಶವನ್ನೇ ಗಾಳಿಗೆ ತೂರಿರುವ ಮದ್ಯ ಮಾರಾಟದ ಪರವಾಣಿಗೆ ಹೊಂದಿದ ಅಂಗಡಿ ಮಾಲಿಕರು ರಾಜಾರೋಷವಾಗಿ ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೇಡಿಕೆಗಳು:
ಮುದ್ದೇಬಿಹಾಳ ತಾಲೂಕಿನಲ್ಲಿ ಸಿ.ಎಲ್-2 ಪರವಾಣಿಗೆ ಹೊಂದಿದ ಮದ್ಯದಂಗಡಿಯವರು ಮದ್ಯವನ್ನು ಪಾರ್ಸಲ್ ಮಾತ್ರ ನೀಡಬೇಕು. ಆದರೆ ಅಂಗಡಿಯಲ್ಲಿಯೇ ಕುಡಿಯಲು ಅನುಮತಿ ನೀಡಲಾಗುತ್ತಿದೆ. ಅಲ್ಲದೇ ಮದ್ಯದ ಸರಕಾರ ನಿಗದಿತ ದರಕ್ಕಿಂಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಕೂಡಲೇ ಇದನ್ನು ತಡೆಹಿಡಿಯಬೇಕು. ಇನ್ನೂ ತಾಲೂಕಿನ ಗ್ರಾಮೀಣ ಪ್ರದೇಶದ ಬಿಡಾ ಅಂಗಡಿ, ಚಹಾ ಅಂಗಡಿ ಸೇರಿದಂತೆ ರಸ್ತೆ ಪಕ್ಕದಲ್ಲಿ ತಲೆ ಎತ್ತಿರುವ ಡಾಬಾಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಇವರ ವಿರುದ್ಧ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರದ ಅಭಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘಟನೆ ಮಾಡುವ ಮದ್ಯ ಅಂಗಡಿಕಾರರು ಬೆಳಿಗ್ಗೆ 5 ರಿಂದಲೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ತಾಲೂಕಾ ಅಭಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲಗೊಂಡಿದ್ದು ಅಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಧೀಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಹೋರಾಟಗಾರ ಶಿವಾನಂದ ವಾಲಿಕಾರ ತಿಳಿಸಿದ್ದಾರೆ.
ದ್ವಗುಣ ಧರಕ್ಕೆ ಮದ್ಯ ಮಾರಾಟ: ಸರಕಾರಕ್ಕೆ ಮೋಸ
ರಾಜ್ಯ ಸರಕಾರ ಅಭಕಾರಿ ಇಲಾಖೆಗೆ ತಿಂಗಳಿಗೆ ಇಂತಿಷ್ಟು ಮದ್ಯವನ್ನು ಮಾರಾಟ ಮಾಡಬೇಕು ಎನ್ನುವುದು ಶೀಫಾರಸ್ಸು ಮಾಡುತ್ತದೆ. ಅದರಂತೆ ಅಭಕಾರಿ ಅಧಿಕಾರಿಗಳೂ ಪರವಾಣಿಗೆ ಹೊಂದಿದ ಮದ್ಯ ಅಂಗಡಿಕಾರರಿಗೂ ಹೆಚ್ಚಿನ ಮದ್ಯ ಮಾರಾಟಕ್ಕೆ ಒತ್ತಡ ಹೇರಲಾಗುತ್ತಿದೆ. ಸರಕಾರದ ಈ ಶೀಫಾರಸ್ಸುನ್ನು ದುರುಪಯೋಗಿಸಿಕೊಂಡ ಮದ್ಯ ಅಂಗಡಿ ಮಾರಾಟಗಾರರು ತಮ್ಮ ಮದ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಕಳುಹಿಸಿಕೊಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶ ಹಾಗೂ ಡಾಬಾಗಳಲ್ಲಿ ಮದ್ಯಕ್ಕೆ ಹೆಚ್ಚಿನ ಬೆಲೆಯನ್ನು ಗ್ರಾಹಕರಿಂದ ಕೀಳುತ್ತಿದ್ದಾರೆ. ಅಲ್ಲದೇ ಇಂತಹ ಕಾರ್ಯದಿಂದ ಸರಕಾರದ ಬಿಕ್ಕಸಕ್ಕೂ ಕತ್ತರಿ ಬಿಳುವಂತಾಗಿದೆ ಎಂದು ವಾಲಿಕಾಸ ದೂರಿದ್ದಾರೆ.
Be the first to comment