ವರ್ಗಾವಣೆಯಾದ ಸರಕಾರಿ ಶಾಲಾ ಶಿಕ್ಷಕರಿಗೆ ಮಕ್ಕಳಿಂದ ಕಣ್ಣಿರಿನ ವಿದಾಯ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ 

ದೇವನಹಳ್ಳಿ ತಾಲೂಕಿನ ಜಾಲಿಗೆ ಸರಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೂರು ಜನ ಶಿಕ್ಷಕಿಯರ ದಿಡೀರ್ ವರ್ಗಾವಣೆಯಿಂದಾಗಿ ಶಾಲಾ ಮಕ್ಕಳು ಕಣ್ಣಿರಿಟ್ಟು ವಿದಾಯ ಹೇಳಿದ ಘಟನೆ ನಡೆದಿದೆ. ಜಾಲಿಗೆ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು ೧೦-೧೨ವರ್ಷಗಳಿಂದ ಸೇವೆ ಸಲ್ಲಿಸಿದ ಕನ್ನಡ ಶಿಕ್ಷಕಿ ಮೋಹಿನಿ, ಆಂಗ್ಲ ಭಾಷಾ ಶಿಕ್ಷಕಿ ಖುತೇಜಾ ಸುಲ್ತಾನ, ವಿಜ್ಞಾನ ಶಿಕ್ಷಕಿ ಶ್ರೀದೇವಿ ಅವರ ವರ್ಗಾವಣೆಯಿಂದಾಗಿ ದಿಭ್ರಮೆಯಾದ ಶಿಕ್ಷಕರು ಮತ್ತು ಶಾಲಾ ಮಕ್ಕಳಿಗೆ ನೋವಿನ ಸಂಗತಿಯಾಗಿತ್ತು. ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ನೋವಿನಿಂದ ಕಣ್ಣಿರಿಟ್ಟು ತಮ್ಮ ಅಚ್ಚುಮೆಚ್ಚಿನ ಶಿಕ್ಷಕರನ್ನು ಕಳುಹಿಸಿಕೊಡಲು ಮನಸ್ಸು ಮಾಡದೆ, ಬೇರೆ ವಿದಿ ಇಲ್ಲದೆ ಕಣ್ಣೀರಿನ ಧಾರೆಯನ್ನೇ ಸುರಿದರು. ಇದನ್ನು ಗಮನಿಸಿದ ವರ್ಗಾವಣೆಯಾಗುತ್ತಿರುವ ಶಿಕ್ಷಕರೂ ಸಹ ಕಣ್ಣೀರಿಟ್ಟು, ಸರಕಾರಿ ಕೆಲಸಗಳಲ್ಲಿ ವರ್ಗಾವಣೆ ಸರ್ವೆ ಸಾಮಾನ್ಯ ನಮ್ಮಂತೆಯೇ ಹೊಸ ಶಿಕ್ಷಕರು ತಮಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿ ನಿಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆಂಬ ಭರವಸೆ ಇದೆ. ತಾವುಗಳು ಹೆಚ್ಚಿನ ಶ್ರದ್ಧೆಯನ್ನಿಟ್ಟು ಓದಿನಲ್ಲಿ ತಮ್ಮ ಅಮೂಲ್ಯವಾದ ಶೈಕ್ಷಣಿಕ ಘಟ್ಟವನ್ನು ಪೂರೈಸಬೇಕೆಂದು ಇಚ್ಚಿಸುತ್ತೇವೆ. ಆಗಾಗ್ಗ ಶಾಲೆಗೆ ಬಂದು ಹೋಗುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿದರು. 

CHETAN KENDULI

ಕನ್ನಡ ಭಾಷಾ ಶಿಕ್ಷಕಿ ಮೋಹಿನಿ ಬೆಂಗಳೂರು ನಗರ ಜಿಲ್ಲೆಯ ಅಮೃತಹಳ್ಳಿಗೆ, ಆಂಗ್ಲ ಭಾಷಾ ಶಿಕ್ಷಕಿ ಖುತ್ತೇಜಾ ಸುಲ್ತಾನ ಥಣಿಸಂದ್ರಗೆ, ವಿಜ್ಞಾನ ಭಾಷಾ ಶಿಕ್ಷಕಿ ಶ್ರೀದೇವಿ ರಾಜಾನುಕುಂಟೆ ಶಾಲೆಗಳಿಗೆ ವರ್ಗಾವಣೆಯಾಗಿದ್ದು, ಶಾಲಾಡಳಿತ ಮಂಡಳಿಯ ಶಿಕ್ಷಕವೃಂದ ನೋವಿನಿಂದ ವರ್ಗಾವಣೆಯಾದ ಶಿಕ್ಷಕಿಯರನ್ನು ಬೀಳ್ಕೊಡುಗೆ ನೀಡಿದರು.

Be the first to comment

Leave a Reply

Your email address will not be published.


*