ಮುದ್ದೇಬಿಹಾಳ: ಪಟ್ಟಣದ ಹುಡ್ಕೊದಲ್ಲಿರುವ ಪ್ರಾಥನಾ ವಿದ್ಯಾಮಂದರದಲ್ಲಿ ಜ.17 ರವಿವಾರ ಬೆಳಿಗ್ಗೆ 10 ಗಂಟೆಗೆ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ ನಿಮಿತ್ಯವಾಗಿ ಕಾವ್ಯ ರಚನಾ ಕಾರ್ಯಾಗಾರ, ಸಂಕ್ರಾಂತಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಡಿ.ಆರ್.ದೇಸಾಯಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತ್ಯ ಪರಿಷತ್ತ ವಿಜಯಪುರ ಜಿಲ್ಲಾಧ್ಯಕ್ಷ ಜಂಬುನಥ ಕಂಚ್ಯಾಣಿ ವಹಿಸಲಿದ್ದು ಮುದ್ದೇಬಿಹಾಳ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಉದ್ಘಾಟಿಸಲಿದ್ದಾರೆ. ತಾಲೂಕಾ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಬಸವ ವಿದ್ಯಾ ಪ್ರಸಾರಕ ಸಂಸ್ಥೆ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ವಚನ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಅಬ್ದುಲ ರೆಹಮಾನ ಬಿದರಕುಂದಿ, ಸಾಹಿತಿ ರುದ್ರೇಶ ಕಿತ್ತೂರ, ತಾಲೂಕಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಬಸವರಾಜ ನಾಲತವಾಡ, ನ್ಯಾಯವಾದಿ ವಿಜಯಮಹಾಂತೇಶ ಸಾಲಿಮಠ, ಕನ್ನಡಪರ ಚಿಂತಕ ಕಿರಣ ಪಾಟೀಲ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿನ ಕಾವ್ಯ ರಚನಾ ಕಾರ್ಯಾಗಾರವನ್ನು ಮುಳವಾಡಿನ ಖ್ಯಾತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ, ಖ್ಯಾತ ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ, ಸಿದ್ದನಗೌಡ ಬಿಜ್ಜೂರ, ಬಸವರಾಜ ನವಲಿ ನಿರ್ವಹಿಸಲಿದ್ದಾರೆ. ಸಂಜೆ 4 ಗಂಟೆಗೆಯ ಆರಂಭವಾಗುವ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪ.ಗು.ಸಿದ್ದಾಪೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗೋಷ್ಠಿಯನ್ನು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ(ಮಡಿಕೇಶ್ವರ) ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: CHETAN KENDULI ತಾಲೂಕಿನ ಮದರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಮ್.ಸಿ ಪಧಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ಗ್ಯಾನಪ್ಪ […]
ರಾಜ್ಯ ಸುದ್ದಿ CHETAN KENDULI ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಅಣೆಕಟ್ಟುಗಳ ನೀರಿನ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ಕಾರವಾರದ ಕದ್ರಾ ಅಣೆಕಟ್ಟಿನ […]
ರಾಜ್ಯ ಸುದ್ದಿಗಳು ಭಟ್ಕಳ ನಮ್ಮ ಭಾರತೀಯ ಸೇನೆಯ ಹೆಮ್ಮೆಯ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹಾಗೂ ಸೇನಾಅಧಿಕಾರಿಗಳು ವೀರಯೋದರು ಹೆಲಿಕಾಪ್ಟರ್ ದುರಂತದಲ್ಲಿ ವಿಧಿವಶರಾಗಿರುವುದು ನಿಜಕ್ಕೂ ದುಃಖಕರ […]
Be the first to comment