ಬಾಗಲಕೋಟೆ:2021 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ,ಕಾರ್ಯಕಾರಿ ಸಭೆ ಹಾಗೂ ಅಭಿನಂದನಾ ಸಮಾರಂಭವು ನಿನ್ನೆ ಸಂಜೆ ತಹಶೀಲ್ದಾರರ ಕಾರ್ಯಾಲಯದ ಭವನ ಇಳಕಲ್ ದಲ್ಲಿ ಜರುಗಿತು.
ಮಾನ್ಯ ತಹಶೀಲ್ದಾರ ರವರಾದ ಶ್ರೀ ನಿಂಗಪ್ಪ ಬಿರಾದಾರ ರವರು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತ, ಸರಕಾರಿ ನೌಕರರ ಬೇಕು ಬೇಡಿಕೆಗಳ ಈಡೇರಿಕೆಗೆ ಸಂಘ ಸಂಘಟನೆ ಅತ್ಯವಶ್ಯ ಆಗಿದ್ದು,ಇಳಕಲ್ ತಾಲ್ಲೂಕು ಘಟಕ ಉತ್ತರೋತ್ತರ ಅಭಿವೃದ್ಧಿ ಹೊಂದಿ,ನೌಕರರ ಕಾರ್ಯ ಮಾಡುವಂತಾಗಲಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೌಕರರು ಒದಗಿಸುವಂತಾಗಲಿ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಇಳಕಲ್ ತಾಲ್ಲೂಕು ಅಧ್ಯಕ್ಷರಾದ ಶ್ರೀ ಪರಶುರಾಮ ಪಮ್ಮಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ
ಸಂಘವು ಈಗಾಗಲೇ ನೌಕರರ ಕುಂದು ಕೊರತೆಗಳ ಬಗ್ಗೆ ಸದಾ ಮುಂಚೂಣಿಯಲ್ಲಿದ್ದು ಕಾರ್ಯ ಮಾಡುತ್ತಿದ್ದು,ಇಳಕಲ್ ತಾಲ್ಲೂಕು ಮಾದರಿಯಾಗಿ ಮಾಡುವಲ್ಲಿ ಪ್ರತಿಯೊಬ್ಬ ಸರಕಾರಿ ನೌಕರರು ಪ್ರಾಮಾಣಿಕ ಸೇವೆ ಮಾಡೋಣ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ತು ಸದಸ್ಯರಾದ ಶ್ರೀ ಈಶ್ವರ ಗಡ್ಡಿ,ಖಜಾಂಚಿ ಶ್ರೀ ಎಂ ಎಚ್ ಗೌಡರ, ಗೌರವಾಧ್ಯಕ್ಷರಾದ ಶ್ರೀ ಎಸ್ ಎನ್ ಗಡೇದ,ಕಾರ್ಯದರ್ಶಿಗಳಾದ ಶ್ರೀ ಗುಂಡಣ್ಣ ಕುರಿ,ಉಪಾಧ್ಯಕ್ಷರಾದ ಶ್ರೀ ಪ್ರವೀಣ ಮ್ಯಾಗೇರಿ ರವರು ಹಾಗೂ ಎಲ್ಲಾ ಇಲಾಖೆಗಳ ಪದಾಧಿಕಾರಿಗಳು ಹಾಜರಿದ್ದರು.
Be the first to comment