ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಪಟ್ಟಣಕ್ಕೆ ಬುಧವಾರ ಆಗಮಿಸಿದ ಕರ್ನಾಟಕ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರು ತಾಲೂಕಿ ವಿವಿಧ ಇಲಾಖೆ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಅಭಿವೃದ್ಧಿಗಳತ್ತ ಕೈಗೊಂಡ ಕ್ರಮಗಳ ಮಾಹಿತಿಯನ್ನು ಪಡೆದುಕೊಂಡರು.
ತಾಲೂಕಿನಲ್ಲಾದಂತಹ ಕಾಲುವೆಗಳ ನಿರ್ವಹಣೆ, ರಸ್ತೆ, ಸರಕಾರಿ ಶಾಲಾ ಕಟ್ಟಡ, ಆರೋಗ್ಯ ಕೇಂದ್ರಗಳ ನಿರ್ವಹಣೆ ಸೇರಿದಂತೆ ವಿಶೇಷವಾಗಿ ಶೌಚಾಲಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದ ಅವರು ಸರಕಾರಿ ಅನುದಾನದಲ್ಲಿ ಅವ್ಯವಹಾರ ನಡೆಸಿದ ಅಧಿಕಾರಿಗಳ ಮತ್ತು ಫಲಾನುಭವಿಗಳ ವಿರುದ್ಧ ಕಾನೂನು ರೀತಿಯಾಗಿ ದಂಡ ಸಮೇತ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರಿಗಾಗಿ ಸರಕಾರ ಮಟ್ಟದಲ್ಲಿ ಸಾಕಷ್ಟು ಸೌಲಭ್ಯಗಳು ಹಾಗೂ ಅನುದಾನವನ್ನು ನೀಡಲಾಗಿದೆ. ಅದರ ಸಮರ್ಪಕ ನಿರ್ವಹಣೆಯನ್ನು ವಿವಿಧ ಇಲಾಖೆ ಅಧಿಕಾರಿಗಳು ಮಾಡಬೇಕು. ಸರಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾದರೆ ಅಥವಾ ಹಣದ ಆಮೀಷದ ಬೇಡಿಕೆಗೆ ಒಳಗಾದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷನ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಸುಖಾಸುಮ್ಮನೆ ಅಧಿಕಾರಿಗಳ ವಿರುದ್ಧ ದೂರು ನೀಡಿದ ಜನರಿಗೂ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೇಸ್ ಎನ್ನಿಸಿಕೊಂಡ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ:
ಮುದ್ದೇಬಿಹಾಳ ಪಟ್ಟಣದಲ್ಲಿ ಪುರಸಭೆ ಸಹಯೋಗದಲ್ಲಿ ಆಗದಂತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಉಪ ಲೋಕಾಯುಕ್ತರು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆಯವರ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೇ ಪಟ್ಟಣದಿಂದ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಪಡೆದು ಕಟ್ಟುನಿಟ್ಟಾಗಿ ನಡೆಸಿಕೊಂಡು ಹೋಗುವಂತೆ ಸೂಚಿಸಿದರು. ತಾಲೂಕಿನ ಪರಿಶೀಲನಾ ಸಭೆಯಲ್ಲಿ ಬೇಸ್ ಎನ್ನಿಸಿಕೊಂಡ ಪ್ರಥಮ ಅಧಿಕಾರಿ ಎಂಬ ಮಾತುಗಳು ಕೇಳಿಬಂದವು.
ರೈತರ ಜಮೀನಿಗೆ ಮೊದಲು ಪರಿಹಾರ ಒದಗಿಸಿ:
ಕೆಬಿಜೆಎನ್‌ಎಲ್ ಸೇರಿದಂತೆ ಇತರೆ ಇಲಾಖೆಯಿಂದ ನಿರ್ಮಿಸಲಾಗುವ ಕಾಲುವೆಗೆ ಸ್ವಾಧೀನ ಪಡೆದುಕೊಳ್ಳುವ ರೈತರ ಜಮೀನಿಗೆ ಮೊದಲು ಪರಿಹಾರವನ್ನು ಒದಗಿಸಿ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಹೊಸದಾಗಿ ಆದೇಶ ಹೊರಡಿಸಿದ್ದು ಆದೇಶವನ್ನು ಸ್ಥಳೀಯ ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಇದರಿಂದ ರೈತರು ಸರಕಾರದ ಪರಿಹಾರದಿಂದ ವಂಚಿತಗೊಳ್ಳುವುದಿಲ್ಲ ಎಂದು ಉಪ ಲೋಕಾಯಕ್ತರು ಅವರು ತಿಳಿಸಿದರು. ನಂತರ ಈಗಾಗಲೇ ನಿರ್ಮಾಣವಾಗಿರುವ ಕೆಲ ಕಾಲುವೆಗಳು ಗುಣಮಟ್ಟದಲ್ಲಿ ಕಳಪೆಯಾಗಿವೆ ಎಂಬ ದೂರುಗಳು ಬಂದಿದ್ದು ತಾಲೂಕಿನಲ್ಲಾದ ಸಮಗ್ರ ಕಾಲುವೆಗಳನ್ನು ಪರಿಶೀಲನೆ ನಡೆಸಿ ಅವುಗಳ ಸ್ಥೀತಿಗಳ ಬಗ್ಗೆ ವರದಿ ಮಾಡಬೇಕು. ಕಾಲುವೆಗಳು ಕಳಪೆ ಕಂಡು ಬಂದಲ್ಲಿ ಅದರ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅದನ್ನು ಸರಿಪಡಿಸಬೇಕು ಎಂದು ಉಪ ಲೋಕಾಯುಕ್ತು ಖಡಕ್ಕಾಗಿ ಸೂಚನೆ ನೀಡಿದರು.
ಮಣ್ಣು ಪರಿಶೀಲೆನೆಗೆ ಹೆಚ್ಚಿನ ಗಮನ ಹರಿಸಲಲು ಸೂಚನೆ:
ರೈತರು ತಮ್ಮ ಜಮೀನುಗಳಿಗೆ ಯಾವುದೇ ರೀತಿಯ ಪರಿಶೀಲನೆ ನಡೆಸದೇ ಬೆಳೆಗಳ ಇಳುವರಿಗಾಗಿ ವಿವಿಧ ರೀತಿಯ ರಸಗೊಬ್ಬರಗಳನ್ನು ಹಾಕುತ್ತಾರೆ. ಇದರಿಂದ ಮಣ್ಣಿ ಫಲವತ್ತತೆಯಲ್ಲಿ ಇಳಿತಗೊಳ್ಳುತ್ತದೆ. ಆದ್ದರಿಂದ ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಯಾವ ರೈತನ ಜಮೀನಿಗೆ ಬೇಟಿ ನೀಡಿ ಮಣ್ಣಿನ ಪರೀಕ್ಷೆ ಮಾಡಲಾಗಿದೆ ಎನ್ನುವುದರ ಬಗ್ಗೆ ಲೋಕಾಯುಕ್ತ ಕಛೇರಿಯ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ರೇವಣಪ್ಪ ಮನಗೂಳಿ ಅವರಿಗೆ ಸೂಚನೆ ನೀಡಿದರು.
ಅಹವಾಲು ಪಡೆದ ಉಪ ಲೋಕಾಯುಕ್ತರು:
ಸಭೆಯ ನಂತರ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಹವಾಳುಗನ್ನು ಪಡೆದಿದ್ದು ಸ್ವೀಕರಿಸಿದ ಅಹವಾಳುಗಳನ್ನು ಕಾನೂನು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಇಲಾಖೆಯಲ್ಲಿ ದೂರು ದಾಖಲಾಗದಬೇಕೆನ್ನುವ ಅಹವಾಳಿಗೆ ಅಹವಾಳುದಾರರಿಗೆ ನೊಟಿಸ್ ನೀಡಲಾಗುವುದು ಅವರು ಲೋಕಾಯುಕ್ತ ಕಛೇರಿಯ ನಿಯಮಾನುಸಾರವಾಗಿ ದೂರು ದಾಖಲಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಉಪ ಲೋಕಾಯುಕ್ತ ಗೆಜೆಟೆಡ್ ಸಹಾಯಕಿ ಯಶೋದಾ ಒಂಟಗೂಡಿ, ಎಸಿ ರಾಮಚಂದ್ರ ಗಡಾದೆ, ಡಿವಾಯ್‌ಎಸ್‌ಪಿ ಬಸವರಾಜ ಯಳಿಗಾರ, ಪಿಎಸ್‌ಐಗಳಾದ ರಮೇಶ ಅವಜಿ, ಗುರುನಾಥ ಚವ್ಹಾಣ ಇದ್ದರು.
ಈ ಸಂದರ್ಭದಲ್ಲಿ ತಾಪಂ ಇಓ ಶಶಿಕಾಂತ ಶಿವಪುರೆ, ಕೆಬಿಜೆಎನ್‌ಎಲ್ ಅಧಿಕಾರಿ ಜಿ.ಎಸ್.ಪಾಟೀಲ, ತಹಸೀಲ್ದಾರ ಅನೀಲಕುಮಾರ ಢವಳಗಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.
Be the first to comment