ಲಾಕ್ ಡೌನ್ ಎಫೆಕ್ಟ:ಅಲೆಮಾರಿ ಜೋಗಿ ಸಮುದಾಯದ ಸ್ಥಿತಿಗತಿ ಚಿಂತಾಜನಕ:ನಮಗೆ ತಾತ್ಕಾಲಿಕ ಪ್ಯಾಕೇಜ್ ಬೇಡ ,ಸಮಗ್ರ ಅಭಿವೃದ್ಧಿಗಾಗಿ ಪ್ಯಾಕೇಜ್ ಘೋಷಣೆಗೆ ಒತ್ತಾಯ:ಅಶೋಕ ಬಾಬ್ನಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೊಟೆ:ಅಲೆಮಾರಿ ಜನಾಂಗಕ್ಕೆ ಸೇರಿದ ಜೋಗಿ ಸಮಾಜದವರು ಹಳ್ಳಿ-ಹಳ್ಳಿಗೆ ಸಂಚರಿಸಿ ಕೊಡೆ ರಿಪೇರಿ, ಬೀಗ ರಿಪೇರಿ ಮತ್ತು ಕಿನ್ನೂರಿ ರಿಪೇರಿ,ಆಟಿಗೆ ಸಾಮಾನುಗಳು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಜಾತ್ರೆ,ಸಂತೆ ಮತ್ತು ತಳ್ಳುವ ಗಾಡಿಯ ಮೂಲಕ ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸುತ್ತಿದ್ದರು.

ಹಲವಾರು ದಶಕಗಳಿಂದ ಕಡುಬಡತನದಲ್ಲೇ ಬದುಕು ಸಾಗಿಸುತ್ತಿರುವ ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ಜೋಗಿ ಜನಾಂಗದ ಕುಟುಂಬಗಳು ಯಾವುದೇ ರೀತಿಯ ಗುರುತಿನ ಚೀಟಿ ಇಲ್ಲದ ಕಾರಣ ಉದ್ಯೋಗ ಖಾತ್ರಿ ಸೇರಿ ಸರ್ಕಾರದ ಯಾವುದೇ ಯೋಜನೆಗೂ ಅರ್ಹರಾಗದೆ ಸಮಾಜದ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಶೆಡ್‌ಗಳ ಸುತ್ತಮುತ್ತ ಇವರ ಇಡೀ ಬದುಕು ಸಾಗುತ್ತದೆ.ಎಲ್ಲ ಸೌಲಭ್ಯಗಳಿಂದ ವಂಚಿತವಾಗಿರುವ ಇವರು ಸರ್ಕಾರದ ವಸತಿ ಸೌಲಭ್ಯ ದೊರೆತಿಲ್ಲವಾದ್ದರಿಂದ ತಾತ್ಕಾಲಿಕ ಶೆಡ್‌ಗಳಲ್ಲಿ ಇವರ ಜೀವನ. ಇವರಿಗೆ ಸೂಕ್ತ ದಾಖಲೆಗಳಿಲ್ಲವಾದ್ದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶೌಚಾಲಯ ಇಲ್ಲವಾದ್ದರಿಂದ ಬಯಲು ಶೌಚವೇ ಇವರ ಪಾಲಿಗೆ ಇರುವುದು. ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ವಿಫಲ ಎಂಬುದು ಈ ಜನರನ್ನು ನೋಡಿ ತಿಳಿಯಬಹುದು.

ಪ್ರತಿದಿನ ನಾವು ಬೀದಿಗಳಲ್ಲಿ,ಜಾತ್ರೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ಮಾಡುತ್ತ ಜಿವನ ಸಾಗಿಸುತ್ತಿದ್ದೇವು ಆದರೆ ಕೊರೊನಾ ಎರಡನೆ ಅಲೆಯಿಂದ ಉಂಟಾಗಿರುವ ಲಾಕ್ ಡೌನ್ ನಮಗೆ ಶಾಪವಾಗಿ ಪರಿಣಮಿಸಿದೆ ವ್ಯಾಪಾರಕ್ಕೆ ಅವಕಾಶ ಇಲ್ಲದೆ ಜೀವನ ನಡೆಸುವುದು ಬಹಳ ಕಷ್ಟದಾಯಕವಾಗಿದೆ.ಸರ್ಕಾರ ಈಗಾಗಲೆ ಪ್ಯಾಕೇಜ್ ಘೋಷಣೆ ಮಾಡಿದ್ದು ಸಂತಸದ ಸುದ್ದಿ,ಆದರೆ ಇದು ಅಲೆಮಾರಿ ಸಮುದಾಯಕ್ಕೆ ಫಲಕಾರಿಯಾಗಲಿಲ್ಲ. ನಮಗೆ ಪ್ಯಾಕೇಜ್ ನೀಡಿದರು ಅದು ಒಪ್ಪತ್ತಿನ ಊಟಕ್ಕಾದಿತು ಅದರಿಂದ ಶಾಶ್ವತ ಪರಿಹಾರ ಇಲ್ಲ.ಹಾಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಅಲೆಮಾರಿ ಜನಾಂಗದವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಲು ಒತ್ತಾಯಿಸುತ್ತೇನೆ.

ಅಶೋಕ ಬಾಬ್ನಿ ಜೋಗಿ ಸಮಾಜದ ಜಿಲ್ಲಾ ಅಧ್ಯಕ್ಷರು

Be the first to comment

Leave a Reply

Your email address will not be published.


*