ಅರಣ್ಯ ಇಲಾಖೆಯ ವನ್ಯ ಜೀವಿ ಸಪ್ತಾಹ-2021 ರ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲಾ ವಿದ್ಯಾರ್ಥಿನಿ ಸಂಜನಾ ಕಟ್ಟಿ ಪ್ರಥಮ ಸ್ಥಾನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : 67ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ ಕುರಿತು ತಾಲೂಕಾ ಮಟ್ಟದ ಚಿತ್ರಕಲೆ, ಸ್ಪರ್ಧೆಯನ್ನು ಮಹಾತ್ಮಾ ಗಾಂಧಿ ಪ್ರೌಢಶಾಲೆ ಗುಡೂರನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆಯವತಿಯಿಂದ ಹಮ್ಮಿಕೊಂಡ ಈ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವನ್ಯಜೀವಿಗಳ ರಕ್ಷಣೆಯ ಕುರಿತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನ 9 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಂಜನಾ ಕಟ್ಟಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ವಿಸಿದ್ದಾಳೆ.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಅರಣ್ಯ ಇಲಾಖೆಯವರಿಂದ ಪ್ರಮಾಣಪತ್ರ ಹಾಗೂ ಸಾಮಾನ್ಯ ಜ್ಞಾನ ಪುಸ್ತಕವನ್ನು ಬಹುಮಾನವಾಗಿ ನೀಡಿದ್ದಾರೆ.ಸದರಿ ಬಹುಮಾನವನ್ನು ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಯಮನಪ್ಪ ತಳವಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ಶಿಕ್ಷಕರಾದ ಬಸವರಾಜ ಕಮತರ,ಎಸ್.ಬಿ.ಹೆಳವರ ಉಪಸ್ಥಿತರಿದ್ದು,ಗ್ರಾಮದ ಎಲ್ಲರನ್ನೊಳಗೊಂಡು, ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ, ಶಿಕ್ಷಕರಾದ ಸಿದ್ದರಾಜ ಕೆಂಧೂಳಿ, ಎಸ್.ಬಿ. ಯಾವಗಲ್ಲಮಠ, ವಾಯ್.ಎಸ್.ವಾಲಿಕಾರ, ಬಿ.ಹೆಚ್.ನಾಲತವಾಡ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*