ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕೃಷಿಯ ಜೊತೆ ಹೆನುಗಾರಿಕೆ ಕೈಗೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಡದ ನಿರ್ದೇಶಕರಾದ ಎಸ್.ಜೆ.ಹಂಡಿ ಹೇಳಿದರು.
ಬಾದಾಮಿ ತಾಲೂಕಿನ ಕಾಡರಕೊಪ್ಪ ತೋಟದ ವಸತಿ ಮತ್ತು ಬಾಗಲಕೋಟೆ ತಾಲೂಕಿನ ತುಳಸಿಗೇರಿ ಸಹಕಾರಿ ಮಹಿಳಾ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಹಾಲು ಶೇಖರಣಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೈನುಗಾರಿಕೆ ಕೃಷಿಯ ಜೊತೆಗೆ ಪೂರಕ ಉದ್ಯೋಗವಾಗಿದೆ. ಪ್ರತಿ ಲೀಟರ್ ಹಾಲಿಕೆ ರಾಜ್ಯ ಸರಕಾರ 5 ರೂ.ಗಳ ಪ್ರೋತ್ಸಾಹಧನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಒಕ್ಕೂಟದಲ್ಲಿ ರಾಸುಗಳ ವಿಮಾ ಮತ್ತು ಗುಂಪು ವಿಮಾ ಯೋಜನೆ ಬಗ್ಗೆ ತಿಳಿಸಿದರು.
ತುಳಸಿಗೇರಿಯ ಮಹಿಳಾ ಸಹಕಾರಿ ಸಂಘದ ಹಾಲು ಶೇಖರಣೆಗೆ ಚಾಲನೆ ನೀಡಿ ಮಾತನಾಡಿದ ಅಶ್ವಿನಿ ಹಳ್ಳೂರ ಅವರು ಹೈನುಗಾರಿಕೆ ಮಹಿಳೆಯರಿಗೆ ಸ್ವಾವಲಂಭನೆ ಜೀವನ ನಡೆಸಲು ಅನುಕೂಲವಾಗಲಿದೆ. ಇದರ ಲಾಭವನ್ನು ಮಹಿಳೆಯರು ಪಡೆದುಕೊಳ್ಳಲು ತಿಳಿಸಿದರು. ನಮ್ಮದೇಯಾದ ಪಾರ್ಮನಲ್ಲಿ 15 ಹಸು, 3 ಎಮ್ಮೆಗಳಿದ್ದು, ಪ್ರತಿದಿನ ಹಸು 15 ರಿಂದ 20 ಲೀಟರ್ ಹಾಲು ನೀಡುತ್ತಿವೆ. ಒಕ್ಕೂಟದಿಂದ ತಾಂತ್ರಿಕ ಸೌಲಭ್ಯ ಅಡಿಯಲ್ಲಿ ಪಶು ಆಹಾರ ಲವಣ ಮಿಶ್ರಿಣ ಗೋಧಾರ ಶಕ್ತಿ ಪೌಡರ ಹಾಗೂ ವೈದ್ಯಕೀಯ ಸೇವೆ ಪಡೆಯುತ್ತಿರುವುದಾಗಿ ತಿಳಿಸಿದರು.
ಅವಳಿ ಜಿಲ್ಲೆ ಹಾಲು ಒಕ್ಕೂಟದ ನಿರ್ದೇಶಕ ಐ.ಎಸ್.ಕರಿಗೌಡರ ಮಾತನಾಡಿ ಹಾಲು ಶೇಖರಣೆ ಪ್ರಾರಂಭಿಸಿದ್ದರಿಂದ ಈ ಭಾಗದ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯವಸಾಯದ ಜೊತೆ ಹೈನು ಉದ್ಯೋಗ ಕೈಗೊಳ್ಳುವದರಿಂದ ಆರ್ಥಿಕ ಮಟ್ಟ ಹೆಚ್ಚಲಿದೆ. ಹೈನುಗಾರಿಕೆ ಕೈಗೊಳ್ಳುವವರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಡಿ.ದಿಕ್ಷೀತ ಮಾತನಾಡಿ ಆಧುನಿಕ ರೀತಿಯಲ್ಲಿ ಹೈನುಗಾರಿಕೆ ಕೃಷಿ ಕೈಗೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧಿಕಾರಿ ಡಾ.ಬಿ.ಕೆ.ಮಠ, ಉಪವ್ಯವಸ್ಥಾಪಕ ಪವಾರ್, ಧರ್ಮಸ್ಥಳ ಕೃಷಿ ಸಮಾಲೋಚಕ ಸುರೇಶ, ವಿಸ್ತರಣಾಧಿಕಾರಿ ಪಿ.ಆರ್.ಜಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment