ರಾಜ್ಯ ಸುದ್ದಿ
ಯಲ್ಲಾಪುರ: ದೇಶದಲ್ಲೇ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಸಾಲಿನಲ್ಲಿ ಒಂದಾಗಿದ್ದ ನಮ್ಮ ಜಿಲ್ಲೆಯು ಇಂದು ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೈಗೊಂಡ ದಿಟ್ಟ ಕ್ರಮಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸೋಂಕಿತರ ಪ್ರಮಾಣ ಅತಿ ಕಡಿಮೆಯಾಗುವುದರ ಮೂಲಕವಾಗಿ ಲಾಕ್ ಡೌನ್ ಸಡಲಿಕೆ ಹಂತಕ್ಕೆ ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯ ಪಟ್ಟರು.
ಜಿಲ್ಲೆಯಲ್ಲಿ ಸೋಂಕನ್ನು ನಿಯಂತ್ರಿಸುವುದಕ್ಕೆ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸಿದ ವೈದ್ಯಕೀಯ ಸಿಬ್ಬಂದಿಗಳು, ಪೆÇೀಲಿಸ್ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಎಲ್ಲಾ ಕರೋನಾ ವಾರಿಯರ್ಸಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆ ತಿಳಿಸಿದರು.
ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ಕೋರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದವರನ್ನು ಅಭಿನಂದಿಸುತ್ತಾ, ನಮ್ಮ ರಾಜ್ಯದಿಂದ ಸಂಪೂರ್ಣ ಕರೋನಾ ಮುಕ್ತವಾಗುವವರೆಗೆ ಜಿಲ್ಲಾಡಳಿತದ ಎಲ್ಲ ನಿರ್ದೇಶನವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ವಿನಂತಿಸಿದರು.
Be the first to comment