ಜಮೀನು ಕಬಳಿಸಲು ಯತ್ನ: ಸಿಕ್ಕಿಬಿದ್ದ ಭರತ್ ಶೆಟ್ಟಿ

ವರದಿ ಅಂಬಿಗ ನ್ಯೂಸ್

ರಾಜ್ಯ ಸುದ್ದಿ 

CHETAN KENDULI

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಮಾಡಲು ಯತ್ನಿಸಿದ ಘಟನೆ ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ. ಭರತ್ ಶೆಟ್ಟಿ ಎಂಬಾತ ಶ್ರೀನಿವಾಸ ಮೂರ್ತಿ ಅವರ ಜಮೀನಿನ ನಕಲಿ ಖಾತೆ ಸೃಷ್ಠಿಸಿ ಜಮೀನು ತನ್ನದೆಂದು ಬೋರ್ಡ್ ಹಾಕಿಕೊಂಡು ಶ್ರೀನಿವಾಸ ಮೂರ್ತಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಎಲ್ಲಾ ದಾಖಲಾತಿಗಳು ಇದ್ದರೂ ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಸಲು ಹೋಗಿ ಈಗ ಭರತ್‌ಶೆಟ್ಟಿ ಸಿಕ್ಕಿ ಬಿದಿದ್ದಾನೆ.

ಘಟನೆ ವಿವರ: ಶ್ರೀನಿವಾಸ್ ಮೂರ್ತಿ ಅವರು ಚಿಕ್ಕಬೊಮ್ಮಸಂದ್ರ ಗ್ರಾಮ ಸರ್ವೆ ನಂಬರ್ 16/1 ರಲ್ಲಿ 0.10 ಗುಂಟೆ ಜಮೀನನ್ನು ಪಿರ್ಯಾದುದಾರರ ಹೆಸರಿಗೆ ದಿನಾಂಕ:20/08/1991 ರಂದು ಸೇಲ್ ಅಗ್ರಿಮೆಂಟ್ ಮಾಡಿ ಕೊಟ್ಟಿರುತ್ತಾರೆ. ಜೊತೆಗೆ ದಿನಾಂಕ:10/12/1991 ರಂದು ಜಿಪಿಎ ಮತ್ತು ಪ್ರಮಾಣ ಪತ್ರ ಸಹ ಮಾಡಿಕೊಟ್ಟಿರುತ್ತಾರೆ.

ಹೀಗಿರುವಾಗ ಶ್ರೀನಿವಾಸ್ ಮೂರ್ತಿ ಅವರ ಜಮೀನನ್ನು ದುರುದ್ದೇಶದಿಂದ ಕಬಳಿಸಲು ಯಲಹಂಕ ಉಪನಗರದ ವಾಸಿಯಾದ ಭರತ್ ಶೆಟ್ಟಿ, ಎಂಬುವರು ಈಗಾಗಲೇ 2013 ರಲ್ಲಿ ಮುನಿತಾಯಮ್ಮ ರವರು ತೀರಿಕೊಂಡಿದ್ದರೂ ಸಹಾ ಮುನಿತಾಯಮ್ಮ ರವರು ಬದುಕಿರುತ್ತಾರೆಂದು ದಿನಾಂಕ:27/04/2021ರAದು ನಕಲಿ ಮುನಿತಾಯಮ್ಮರವರನ್ನು ಬ್ಯಾಟರಾಯನಪುರ ಸಬ್ ರಿಜಿಸ್ಟçರ್ ಕಛೇರಿಗೆ ಕರೆದುಕೊಂಡು ಹೋಗಿ ಭರತ್ ಶೆಟ್ಟಿ, ತನ್ನ ಹೆಸರಿಗೆ ಸೇಲೆ ಅಗ್ರೀಮೆಂಟ್ ಮಾಡಿಕೊಂಡು ಸದರಿ ಜಮೀನು ತನ್ನದೆಂದು ಬೋರ್ಡ್ ಹಾಕಿರುತ್ತಾರೆ.

ವಿಚಾರ ತಿಳಿದು ಪಿರ್ಯದುದಾರರು ದಿನಾಂಕ:31/05/2021 ರಂದು ಮಧ್ಯಾಹ್ನ 02.00 ಗಂಟೆ ಜಮೀನಿನ ಬಳಿ ಬಂದು ಬೋರ್ಡ್ನ್ನು ತೆಗೆಸಿ ಹಾಕಿದ್ದರಿಂದ, ಭರತ್ ಶೆಟ್ಟಿರ ಜಮೀನು ತನ್ನದೆಂದು ತಕರಾರು ತೆಗೆದು ಶ್ರೀನಿವಾಸ್ ಮೂರ್ತಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಇನ್ನೊಂದು ಬಾರಿ ಈ ಜಮೀನಿನ ಕಡೆ ಬಂದರೆ ನಿನ್ನನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.

ಇನ್ನು ಈ ಕುರಿತಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಭರತ್ ಶೆಟ್ಟಿ ವಿರುದ್ಧ ಐಪಿಸಿ ಸೆಕ್ಷನ್ 1860 (506, 34, 504, 419, 420)ರಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*