ಸಾಧನೆ ಮಾಡಿರುವ ಮಹಿಳೆಯರೇ ನಮಗೆ ಸ್ಫೂರ್ತಿ- ಶಶಿಕಲಾ ನಾಗರಾಜ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಜೋಗಾಹಳ್ಳಿ ಗ್ರಾಮಪಂಚಾಯಿತಿ ಹಾಗೂ ವಿಜಯಲಕ್ಷ್ಮಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನುಆಚರಿಸಲಾಯಿತುಕಾರ್ಯಕ್ರಮವನ್ನು ನಾಡಗೀತೆ ಹಾಡಿ ದೀಪಹಚ್ಚುವುದರ ಮೂಲಕ ಉದ್ಘಾಟಿಸಲಾಯಿತು ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರಿಗಾಗಿ ಮನೋರಂಜನಾ ಕಾರ್ಯಕ್ರಮದ ಜೊತೆಗೆ ವಿವಿಧ ರೀತಿಯ ಕ್ರೀಡಾಕೂಟವನ್ನು ಸಹ ಆಯೋಜಿಸಲಾಗಿತ್ತು .

CHETAN KENDULI

ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಜಯಗಳಿಸಿದ ಮಹಿಳೆಯರಿಗೆ ಬಹುಮಾನ ನೀಡುವ ಮೂಲಕ ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ನಮ್ಮಲ್ಲಿ ಹಲವಾರು ಮಹಿಳೆಯರು ಸಾಧನೆಮಾಡಿರುವ ಸಾಕಷ್ಟು ಉದಾಹರಣೆಗಳಿವೆ ಅವರನ್ನು ಸ್ಫೂರ್ತಿಯಾಗಿಸಿಕೊಂಡು ಇಂದಿನ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕಿದೆ..ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಕಾರ್ಯಕ್ರಮದ ಆಯೋಜಕರಾದ ಎಂ ಬಿ ಕೆ ಸುಜಾತ ಮಾತನಾಡಿ ಕಾರ್ಯಕ್ರಮಕ್ಕೆ ಗ್ರಾಮಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹಾಗೂ ಸರ್ವ ಸದಸ್ಯರು ಸಹಕರಿಸಿದ್ದು ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಏರ್ಪಡಿಸುವ ಮೂಲಕ ಮಹಿಳೆಯರಲ್ಲಿ ಸ್ಪರ್ಧಾ ಸ್ಪೂರ್ತಿ ತುಂಬುವ ಕಾರ್ಯ ಸಾಗುತ್ತಿದೆ ಎಂದು ತಿಳಿಸಿದರು

 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನಾರಾಯಣಸ್ವಾಮಿ ಮಾತನಾಡಿ ಸರ್ಕಾರದಿಂದ ಮಹಿಳೆಯರ ಉನ್ನತೀಕರಣಕ್ಕಾಗಿ ಹಲವು ರೀತಿಯ ಯೋಜನೆಗಳಿವೆ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು .ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ನಾಗಭೂಷಣ್ , ಉಪಾಧ್ಯಕ್ಷರಾದ ಲಾವಣ್ಯ, ಖಜಾಂಚಿ ಗಳಾದ ಪ್ರಮೀಳಾ, ಸ್ತ್ರೀ ಶಕ್ತಿ ಸಂಘದ ಎಲ್ಲಾ ಸದಸ್ಯರು , ದಾರ್ಗಜೋಗಿಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ,

Be the first to comment

Leave a Reply

Your email address will not be published.


*