ರಾಜ್ಯ ಸುದ್ದಿಗಳು
ಬೈಂದೂರು
ಕೇವಲ 50 ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಬರೋಬ್ಬರಿ ಸರಿ ಸುಮಾರು ಒಂದು ಲಕ್ಷ ಪಾವತಿಸಿ ಕಛೇರಿಯ ಹಣ ಗುಳು೦ ಮಾಡ ಹೊರಟು ಇದೀಗ ಪ್ರಕರಣ ಬಯಲಿಗೆ ಬರುತ್ತದೆಂದು ವಾಟರ್ ಪ್ಯೂರಿ ಫಯರ್ ಅನ್ನೇ ಮಂಗಮಾಯ ಮಾಡಿದ ಘಟನೆ ಬೈಂದೂರು BEO ಕಛೇರಿಯಲ್ಲಿ ನಡೆದಿದೆ. ಬೈ೦ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಸರಕಾರಿ ಹಣ ದುರುಪಯೋಗ ಮಾಡ ಹೊರಟ ಕ್ರಿಮಿನಲ್ ಕಥೆ ಇದು. ಜಿ.ಎ೦.ಮುಂದಿನಮನಿ ಕಳೆದ ಒಂದು ವರ್ಷದ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಒಕ್ಕರಿಸಿದ ಈತ ವರ್ಗಾವಣೆಯಿ೦ದ ಬಿಡುಗಡೆಗೊಳ್ಳಲಿರುವ ಶಿಕ್ಷಕರಿ೦ದ ಹಣ ವಸೂಲಿ ಮಾಡಿ ಕ್ಷೇತ್ರದ ಶಾಸಕರಿಂದಲೂ, ಬೋಜೇಗೌಡರಿ೦ದಲೂ ಉಗಿಸಿಕೊ೦ಡು ತೆಗೆದುಕೊಂಡ ಹಣ ವಾಪಾಸು ಮಾಡಿದ್ದಾನೆ ಎಂದು ಬೈ೦ದೂರು ವಲಯದ ಶಿಕ್ಷಕರು ಆಡಿಕೊ೦ಡು ನಗುತ್ತಿದ್ದಾರೆ. ಹಸೀನಾಬಾನು ಎ೦ಬ ಶಿಕ್ಷಕಿಯನ್ನು ಸಕಾಲದಲ್ಲಿ ಬಿಡುಗಡೆ ಮಾಡದೇ ಸತಾಯಿಸಿ ಕೊನೆಗೆ ಆಕೆ ಈತನ ಅಸಲಿಯತ್ತನ್ನು ವಾಟ್ಸಪ್ ಮೂಲಕ ಜಗಜ್ಜಾಹೀರು ಮಾಡಿದಾಗ ಉಪನಿರ್ದೇಶಕರು (ಉಡುಪಿ)ಕರೆದು ಝಾಢಿಸಿ ಬಿಡುಗಡೆಮಾಡಿದ್ದು ಇತಿಹಾಸ.ಇನ್ನು ಶಿಕ್ಷಕರಿ೦ದ KGID,GPF,ನಿಯೋಜನೆ,ಶಾಲಾಭೇಟಿ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಭರ್ಜರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಶಿಕ್ಷಕ ಸಮೂಹ ಹಿಡಿಶಾಪ ಹಾಕುತ್ತಿದೆ. ಶಿಕ್ಷಕರ ಅಳಲನ್ನು ಕೇಳಲು ಬೈಂದೂರಿನಲ್ಲಿ ಯಾರೂ ಇಲ್ಲ. ಪಾಠ ಮಾಡದ ಶಾಲೆಗೆ ಹೋಗದ ಕೆಲವು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಗುಂಪು ಸ೦ಜೆ ಆದೊಡನೆ ಕಛೇರಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ರಕ್ಷಣೆ ಮಾಡುವ ಕುತಂತ್ರದಲ್ಲಿ ತೊಡಗುತ್ತಾರೆ ಎಂದು ಶಿಕ್ಷಣದ ಬಗ್ಗೆ ಕಾಳಜಿ ಇರುವಶಿಕ್ಷಕರುಗೊಣಗುತ್ತಿದ್ದಾರೆ. ನಿವೃತ್ತ ಶಿಕ್ಷಕರ ಜೀವ ಹಿಂಡಿ ಲಂಚದ ರೂಪದಲ್ಲಿ ಹಣ ನೀಡಿದರೆ ಮಾತ್ರ ಪೆನ್ಷನ್ ಸೆಟಲ್ ಮೆಂಟ್ ಗೆ ಕಡತ ಮೂವ್ ಮಾಡುತ್ತಾನೆ. ಇಲ್ಲದಿದ್ದರೆ ಕಡತ ಯಾರಿಗೂ ಸಿಗದಂತೆ ಅಡಗಿಸಿಡುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾನೆ. ಈತನ ಲಂಚಬಾಕತನದ ಗುಣಗಳ ಬಗ್ಗೆ ಗೊತ್ತಿರುವ ಸಾ.ಶಿ.ಇ.ಉಪನಿರ್ದೇಶಕರು ಉಡುಪಿ, ಶಾಸಕರು ಬೈಂದೂರು ಕ್ಷೇತ್ರ ಇವರೆಲ್ಲಾ ಮೌನವಾಗಿರುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲ.ಪ್ರಾಥಮಿಕ ಶಾಲೆಗಳ ಬಲವರ್ಧನೆಗಾಗಿ ಮಂಜೂರಾದ ಹಣ ದಿಂದ ತನ್ನ ಕಚೇರಿಗೆ ಏರ್ ಕಂಡೀಶನ್ ಅಳವಡಿಸಿಕೊಂಡು ಆಧುನಿಕ ಕುರ್ಚಿ ಇತ್ಯಾದಿಗಳನ್ನು ತರಿಸಿಕೊಂಡು ಭೋಗದ ಜೀವನ ನಡೆಸುತ್ತಿದ್ದಾನೆ.ಯಾವುದಕ್ಕೂ ಸರಿಯಾದ ಲೆಕ್ಕಾಚಾರ ಪತ್ರಗಳು ಇರುವುದಿಲ್ಲ ಎಂದು ದಾವಣಗೆರೆಯಿಂದ ಬಂದ ತಪಾಸಣಾ ತಂಡ ಹೇಳಿರುವುದರ ಬಗ್ಗೆ ಶಿಕ್ಷಕರು ಆಡಿಕೊಂಡು ನಗಾಡುತ್ತಿದ್ದಾರೆ. ಇದನ್ನೆಲ್ಲ ತಪಾಸಣೆ ಮಾಡಿಸಬೇಕಾಗಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಮೌನವಾಗಿದ್ದಾರೆ. ಹೀಗೆ ಆದರೆ ಬೈ೦ದೂರು ಎಕ್ಕುಟ್ಟಿ ಹೋಗಲು ಹೆಚ್ಚು ಸಮಯವಿಲ್ಲ.
ತನ್ನ ಮನಸೋ ಇಚ್ಛೆ ಕಛೇರಿಗೆ ಗೈರು ಹಾಜರಾಗುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರು ಕರ್ತವ್ಯಕ್ಕೆ ಹಾಜರಾದ ದಿನ ಹಾಜರಾತಿ ರಿಜಿಸ್ಟರ್ ನಿಯಮಬಾಹಿರವಾಗಿ ಹಿಂದಿನ ಎಲ್ಲಾ ದಿನಗಳ ಹಾಜರಿ ಹಾಕಿ ಅಕ್ರಮವನ್ನು ಸಕ್ರಮಗೊಳಿಸಿಕೊಳ್ಳುತ್ತಾರೆ. ತಾವು ಸ್ವತಃ ಲಂಚಗುಳಿತನ ಭೃಷ್ಟಾಚಾರದಲ್ಲಿ ಭಾಗಿಯಾಗುತ್ತಾ ತನ್ನನ್ನು ಪ್ರಶ್ನಿಸುವವರನ್ನೇ ಲಂಚಕೋರರು ಭೃಷ್ಟಾಚಾರಿಗಳೆಂದು ಬಿಂಬಿಸುವಲ್ಲಿ ಪ್ರಯತ್ನಿಸುತ್ತಿರುವುದು ನಮ್ಮ ವ್ಯವಸ್ಥೆಯ ದುರಂತ. ಶಾಲೆಯಲ್ಲಿ ಕರ್ತವ್ಯದಲ್ಲಿ ತೊಡಗದೇ ಮನಸೋ ಇಚ್ಛೆ ವರ್ತಿಸುವ ಒಂದಿಷ್ಟು ಶಿಕ್ಷಕರ ಪಟಾಲಂ ಇವರ ಜೊತೆಯಲ್ಲೇ ಇದ್ದು ಕ್ಷೇತ್ರ ಶಿಕ್ಷಣಾಧಿಕಾರಿಯವರ ಪಾಪದ ಕೊಡ ತುಂಬಲು ಸಹಕರಿಸುತ್ತಿದ್ದಾರೆ. ಸರಕಾರ ಮಹಿಳಾ ಶಿಕ್ಷಕರಿಗೆ ಇತ್ತೀಚಿನಿಂದ ಒದಗಿಸಿರುವ ಶಿಶುಪಾಲನಾ ರಜಾ ಸೌಲಭ್ಯ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಂಚ ಪಡೆಯಲು ರಹದಾರಿ ಮಾಡಿಕೊಟ್ಟಿದೆ. ಲಂಚದ ಹಣ ಸಂಗ್ರಹಿಸಲು ತನ್ನೊಂದಿಗೆ ಪಟಾಲಂನಲ್ಲಿರುವ ಶಿಕ್ಷಕರಿಗೆ ಜವಾಬ್ದಾರಿ ವಹಿಸಿರುವುದು ಈ ಮಹಾಶಯರ ಇನ್ನೊಂದು ಕೀರ್ತಿ.
ಗೌರವಯುತವಾದ ಶಿಕ್ಷಣ ಇಲಾಖೆಯ ಹಿರಿಯ ಶಿಕ್ಷರನ್ನು, ಮಹಿಳಾ ಶಿಕ್ಷಕರನ್ನು ಏಕವಚನದಲ್ಲೆ ಸಂಬೋಧಿಸುತ್ತಾ ತನ್ನ ಸಂಸ್ಕಾರ ಇಷ್ಟೇ ಎಂಬುದನ್ನೂ ತೋರಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿರುವ ಒಂದಿಬ್ಬರು ಪ್ರ.ದ.ಸ., ದ್ವಿ.ದ.ಸ ರವರ ಮೂಗಿಗೂ ಲಂಚದ ಹಣದ ದುರ್ವಾಸನೆಯನ್ನು ಮುಟ್ಟಿಸುತ್ತಾ ಅವರೂ ಕಮಕ್ ಕಿಮಕ್ ಅನ್ನದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅತಿಥಿ ಶಿಕ್ಷಕರ ನೇಮಕಾತಿಗೂ ಲಂಚ ಪಡೆಯುತ್ತಾರೆ ಎಂಬ ವಿಷಯ ಶಿಕ್ಷಕ ವಲಯದಲ್ಲಿ ಗುಟ್ಟಾಗಿ ಚರ್ಚೆ ಆಗುತ್ತಿದೆ. ಇವರ ಆಡಳಿತದ ಶಿಥಿಲತೆ ಎಷ್ಟಿದೆಯೆಂದರೆ ನವೆಂಬರ್ 2021 ರಿಂದ ಅತಿಥಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ್ದರೂ ಡಿಸೆಂಬರ್ 2021 ರ ಗೌರವ ಧನಕ್ಕೆ ಮಾತ್ರ ಬಿಲ್ ಮಾಡಿ ನವೆಂಬರ್ ತಿಂಗಳ ಗೌರವ ಧನದ ಅನುದಾನ ಲ್ಯಾಪ್ಸ್ ಆಗುವಂತೆ ಮಾಡಿ ಅತಿಥಿ ಶಿಕ್ಷಕರ ಜೀವನೋಪಾಯಕ್ಕೆ ಇದ್ದ ಸಣ್ಣ ಅವಕಾಶವನ್ನೂ ಕಸಿದುಕೊಂಡಿದ್ದಾರೆ. ಲಂಚದ ಹಣ ಪಡೆಯುವುದೇ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿಯವರ ಅತಿ ಪ್ರಮುಖ ಅಕ್ರಮ ಅಜೆಂಡಾ ಆಗಿರುವುದು ಬೈಂದೂರು ಶೈಕ್ಷಣಿಕ ವಲಯದ ದೌರ್ಭಾಗ್ಯ. ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಹುದ್ದೆಯ ಕೇಡರ್ ನಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಭಡ್ತಿ ಪಡೆದು ಕೇವಲ 1 ವರ್ಷ 3 ತಿಂಗಳಾಗಿರುವ ಈ ವ್ಯಕ್ತಿ ಇನ್ನೂ ಇಲಾಖೆಯಲ್ಲಿ ತನಗೆ ಅಫಿಶಿಯೇಟಿಂಗ್ ಆಗಿಲ್ಲ ಎಂಬುದನ್ನೂ ಮರೆತಿರುವಂತಿದೆ. ಕೆಲವೇ ಸಮಯದ ಹಿಂದೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಮೀಪವೇ ಇರುವ ಸರಕಾರಿ ಶಾಲೆಗೆ ಲೋಕಾಯುಕ್ತ ಸಿಬ್ಬಂದಿ ಓರ್ವರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿಯವರನ್ನು ಕೇಳಿಕೊಂಡು ಬಂದಾಗ ಕ್ಷೇತ್ರ ಶಿಕ್ಷಣಾಧಿಕಾರಿಯವರು ತಮ್ಮ ಕಛೇರಿಯಿಂದ ಅದೃಶ್ಯರಾಗಿ ಸೋಮೇಶ್ವರ ಬೀಚ್ ಸಮೀಪದ ಗೂಡಂಗಡಿ ಒಂದರಲ್ಲಿ ಅಡಗಿ ಕುಳಿತಿದ್ದನ್ನು BEO ಕಛೇರಿಯ ಸಿಬ್ಬಂದಿಯವರೇ ಹೇಳಿಕೊಂಡು ನಗುವಷ್ಟು ತನ್ನ ಹುದ್ದೆಯ ಗೌರವವನ್ನು ಕೀಳುಮಟ್ಟಕ್ಕೆ ತಂದು ಮುಟ್ಟಿಸಿದ ಹಿರಿಮೆ ಜಿ.ಎಂ ಮುಂದಿನಮನಿಯವರದ್ದು ಎನ್ನದೆ ವಿಧಿಯಿಲ್ಲ.
ಜಿ.ಎಂ ಮುಂದಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಭೃಷ್ಟಾಚಾರಕ್ಕೆ ಮತ್ತು ಲಂಚಗುಳಿತನಕ್ಕೆ ಅದೆಷ್ಟು ಶರಣಾಗಿದ್ದಾರೆ ಅಂದರೆ ಇತ್ತೀಚಿಗೆ ಪೀಠೋಪಕರಣ ಟೆಂಡರ್ ಕರೆದು ಲಕ್ಷಾಂತರ ರೂಪಾಯಿ ಕಮಿಷನ್ ಪೀಕುವ ಇರಾದೆಯಿಂದ ಶಿಕ್ಷಕ ಸಂಘಟನೆಯ ಓರ್ವ ಪ್ರಭಾವಿಯ ಜೊತೆ ಸೇರಿ ಹೆಬ್ರಿಯ ಫರ್ನಿಚರ್ ಅಂಗಡಿಯೋರ್ವರಿಗೆ ಪೀಠೋಪಕರಣ ಸರಬರಾಜಿಗೆ ಆದೇಶ ನೀಡಿದ್ದಾರೆ. ಈ ವಿಷಯದಲ್ಲಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರೋರ್ವರು BEO ರನ್ನು BEO ಕಛೇರಿಯಲ್ಲೇ ಲೆಫ್ಟ್ ರೈಟ್ ತಕೊಂಡು ಮಾತುಗಳಲ್ಲೇ ಹಿಗ್ಗಾಮುಗ್ಗಾ ತಳಿಸಿ ಲಂಚಾವತಾರದ ಮುಖವನ್ನು ಕಳಚಲು ಪ್ರಯತ್ನಿಸಿರುವುದು ಲೇಟೆಸ್ಟ್ ಸುದ್ಧಿ. ಜಿ.ಎಂ ಮುಂದಿನಮನಿ ಅಂದರೆ ಲಂಚದ ಮನಿ (ಹಣ) ತೆಗೆದುಕೊಳ್ಳುವುದರಲ್ಲಿ ನಿಸ್ಸೀಮ ಎಂದು ಶಿಕ್ಷಕ ವೃಂದದವರು ಆಡಿಕೊಳ್ಳುತ್ತಿದ್ದಾರೆ. ಜಿ.ಎಂ ಮುಂದಿನಮನಿಯವರ ಕಮಿಷನ್ ದಂಧೆಯ ಕಬಂಧ ಬಾಹುಗಳು ಕ್ಯಾನ್ಸರ್ (ಅರ್ಬುದ) ರೋಗದಂತೆ ವಿಶಾಲವಾಗಿ ವ್ಯಾಪಕವಾಗಿ ಹರಡಿಕೊಂಡಿದೆ. ತನ್ನ ಅಧೀನ ಸಿಬ್ಬಂದಿಗಳಿಗೆ ಪುಕ್ಕಟೆ ರೂಲ್ ಬೋಧಿಸುವ ಇವರು ತಮಗಾಗುವಾಗ ನಿಯಮಗಳನ್ನು ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಗೋಸುಂಬೆಯಂತವರು. ಇದಕ್ಕೆ ಒಂದು ಉತ್ತಮ ನಿದರ್ಶನ ಎಂದರೆ ತನ್ನ ಅಧೀನ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಆರೋಪಗಳನ್ನು ಹೊರಿಸುವ ಪ್ರಯತ್ನ ಮಾಡುತ್ತಾ ಷಡ್ಯಂತ್ರ, ಪಿತೂರಿಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇದಕ್ಕೊಂದು ಉತ್ತಮ ನಿದರ್ಶನ ಎಂದರೆ “ಹಿಂದಿನ BEO ಅರವತ್ತು ಲಕ್ಷ ರೂಪಾಯಿಗಳನ್ನು ಗುಳುಂ ಮಾಡ್ಯಾರ್ರಿ” ಎಂದು ಲೂಸ್ ಟಾಕ್ ಮಾತಾಡುತ್ತಾ ತಾನು ಸುಭಗ ಎಂದು ತೋರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ತನ್ನದೇ ಅಧೀನ ಅಧಿಕಾರಿಗಳ ಹಾಗೂ ಕಛೇರಿ ಸಿಬ್ಬಂದಿಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳುವಂತೆ ಮಾಡುತ್ತಾ ಭೃಷ್ಟ ಅಧಿಕಾರಿಯಾಗಿ ನೀಚತನವನ್ನು ಪ್ರದರ್ಶಿಸುತ್ತಿದ್ದಾರೆ. ಇತ್ತೀಚಿಗೆ ತನ್ನ ಅಧೀನ ಸಿಬ್ಬಂಧಿಗಳಿಗೆ ಚಾರ್ಜ್ ಅಲವೆನ್ಸ್ ಮಂಜೂರು ಮಾಡಿ ಪ್ರತಿಯೊಬ್ಬರಿಂದ ರೂ 600 ರಿಂದ 2000 ದ ವರೆಗೂ ಲಂಚದ ಹಣವನ್ನು ಗುಡ್ಡೆಹಾಕಿರುತ್ತಾನೆ.ಇತ್ತೀಚಿನಖಾಸಗೀ ಶಾಲೆಗಳ ಮಾನ್ಯತೆ ನವೀಕರಣದ ಕಡತಗಳಲ್ಲಿ CBSE ಶಾಲೆಯ ಮಾನ್ಯತೆ ನವೀಕರಣದ ಫೈಲ್ ನಲ್ಲಿ ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ಖಾಸಗೀ ಶಾಲೆಯೊಂದರ ಸಿ.ಸಿ.ಟಿ.ವಿ ಫೂಟೇಜ್ ನಲ್ಲಿ ದಾಖಲಾಗಿದೆ ಎಂಬ ವಿಚಾರ ಅವರದೇ ಕಛೇರಿಯಲ್ಲಿ ಆಡುತ್ತಿರುವ ಗುಸು ಗುಸು ಪಿಸು ಪಿಸು ಮಾತುಗಳು.ಕಛೇರಿ ಪೀಠೋಪಕರಣ ಖರೀದಿ ಪ್ರಕ್ರಿಯೆಯಲ್ಲಿ ಮಾಜಿ ಜಿ.ಪ೦. ಸದಸ್ಯರೂ ನೇರ ಭಾಗಿಯಾಗಿದ್ದಾರೆ ಎಂದು ಎಲ್ಲಾ ಶಿಕ್ಷಕರು ಬಹಿರಂಗವಾಗಿ ಮಾತನಾಡುತ್ತಿರುವುದು ಈತನ ಭೃಷ್ಟಾಚಾರಕ್ಕೆ ಮತ್ತು ಲಂಚಗುಳಿತನಕ್ಕೆ ಪ್ರಬಲ ಸಾಕ್ಷಿಯಾಗಬಲ್ಲುದು. ಖಾಸಗೀ ಶಾಲೆಗಳ ಮಾನ್ಯತೆ ನವೀಕರಣ ಕಡತ ಇವರ ಪಾಲಿಗೆ ಲಂಚ ಪಡೆಯಲು ಜಾಕ್ ಪಾಟ್ ಆಗಿ ಪರಿಣಮಿಸಿದೆ. ಶಾಲೆಗಳಿಗೆ ವಿಸಿಟ್ ಹೋದಲ್ಲಿ ತನಗೆ ಬೇಕಾದ ಶಿಕ್ಷಕರು ಬೇಕಾದ ಹಾಗೆ ಅನಧಿಕೃತ ಗೈರಾಗಲು ಈ ಮಹಾಶಯರೇ ಅನುಮತಿ ನೀಡುತ್ತಾರೆ. ನಂತರ ಗೈರಾದ ಶಿಕ್ಷಕರಿಗೆ ಫೋನಾಯಿಸಿ ಅವರಿಂದ ಲಂಚದ ಹಣ ಪಡೆದು ತನ್ನ ಲಂಚದ ಬೊಕ್ಕಸವನ್ನು ಶ್ರೀಮಂತಗೊಳಿಸಿಕೊಳ್ಳುವುದು ಈತನ ಚಾಳಿ. ವಿಪರ್ಯಾಸವೆಂದರೆ ಇವರ ಭೃಷ್ಟಾಚಾರವನ್ನು ಲಂಚಗುಳಿತನವನ್ನು ಇದುವರೆಗೆ ಯಾರೂ ಪ್ರತಿಭಟಿಸದೆ ಸುಮ್ಮನೆ ಇರುವುದರಿಂದ ಜಿ.ಎಂ ಮುಂದಿನಮನಿ ಇವರು ರಕ್ತಬೀಜಾಸುರನಂತೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಶೈಕ್ಷಣಿಕವಾಗಿ ಒಂದಿಷ್ಟು ಜ್ಞಾನವಾಗಲಿ, ದೂರಾಲೋಚನೆಯಾಗಲಿ ಈ ಅಧಿಕಾರಿಯಲ್ಲಿ ಇಲ್ಲ. ಅಕಾಡೆಮಿಕ್ ಜ್ಞಾನದ ಕೊರತೆಯಿಂದ ಬಳಲುತ್ತಿರುವುದನ್ನೂ ಶಿಕ್ಷಕ ವೃಂದದವರು ತಮ್ಮ ತಮ್ಮಲ್ಲೇ ಆಡಿಕೊಂಡು ನಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇವರ ಈ ಎಲ್ಲಾ ಕುಖ್ಯಾತಿ ಉಡುಪಿ ಜಿಲ್ಲೆಯಲ್ಲೇ ಪ್ರಚಾರದಲ್ಲಿದ್ದರೂ ಬುದ್ಧಿವಂತ ಜಿಲ್ಲೆಯ ಬುದ್ಧಿವಂತ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡರಾಗಿರುವುದು ನೌಕರರ ಪಾಲಿಗೆ, ಯಾಕೆ ಹೀಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಹಾಗಿದ್ದರೆ ಅಪ್ಟಟ ಭೃಷ್ಟ ಅಧಿಕಾರಿಯನ್ನು ಇನ್ನಷ್ಟು ಕಾಲ ಇಲಾಖೆ ಸಹಿಸಿಕೊಳ್ಳುತ್ತದೋ? ಅಥವಾ ಈತನ ಹೆಡೆಮುರಿ ಕಟ್ಟುತ್ತದೋ? ಕಾದು ನೋಡಬೇಕಷ್ಟೆ.
Be the first to comment