ಜಿಲ್ಲಾ ಸುದ್ದಿಗಳು
ಕಾರವಾರ
ಜಿಲ್ಲೆಯ ಸಮಗ್ರ ಅಭಿವೃದ್ಧಿ ಎಂದರೆ ಅದಕ್ಕೆ ವಿವಿಧ ಇಲಾಖೆ ಅಧಿಕಾರಿಗಳ ಶ್ರಮ ಮುಖ್ಯವಾಗಿರುತ್ತದೆ. ಅಲ್ಲಿ ಅವರದ್ದೇ ಆಡಳಿತ ನಡೆಸದೆ ಜಿಲ್ಲಾಭಿವೃದ್ಧಿ ಬಗ್ಗೆ ಯೋಜನೆ ಮಾಡಬೇಕು. ಅದನ್ನು ಬಿಟ್ಟು ತಮ್ಮದೇ ನಡೆಸುವುದಾದರೆ ಪ್ರಮೋಷನ್ ಪಡೆದು ಬೇರೆಜಾಗಕ್ಕೆ ತೆರಳಬಹುದು ಎಂದು ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಮನೆ, ಕಟ್ಟಡ, ರಸ್ತೆ, ಸೇತುವೆ ಸೇರಿದಂತೆಅಭಿವೃದ್ಧಿ ಕಾರ್ಯಗಳಿಗೆ ಮರಳು, ಚೀರೆಕಲ್ಲಿನಅಗತ್ಯವಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾ, ಜೂಜು, ಅಪಹರಣ, ಅಕ್ರಮಗಾಂಜಾ, ದರೋಡೆ, ಕಾನೂನು ಸುವ್ಯವಸ್ಥೆಯ ವಿಷಯ ಬಂದಾಗಯುವಕರ ಹಿತದೃಷ್ಟಿಯಿಂದ ಸೂಕ್ತ ರೀತಿಯ ಕ್ರಮಕೈಗೊಳ್ಳಿ. ಆದರೆ, ಜೀವನದ ವಿಷಯ ಬಂದಾಗ ಮನಸ್ಸಿಗೆ ಬಂದಂತೆ ಆಡಳಿತ ಬೇಡ. ಕಲ್ಲು, ಮರಳಿನ ವಿಚಾರವಾಗಿ ಮನಸ್ಸಿಗೆ ಬಂದಂತೆಕ್ರಮಕೈಗೊಂಡರೆ ಸರಕಾರ ಸುಮ್ಮನಿರಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಚೀರೆಕಲ್ಲುಕೊರತೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಏಳೂವರೆ ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಇನ್ನು ಉಳಿದಿರುವುದು ನಾಲ್ಕೇ ತಿಂಗಳು. ಈ ನಾಲ್ಕು ತಿಂಗಳ ಅವಧಿಯಲ್ಲಿ ಮನೆ, ರಸ್ತೆ ಸೇರಿದಂತೆಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಅನ್ಯತಾ ಭಾವಿಸಿದೆ ಅಭಿವೃದ್ಧಿಯ ಪರವಾಗಿರಬೇಕು. ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರ ಜನರಿಗೆ ಉತ್ತರದಾಯಿತ್ವವಾಗಿರುತ್ತದೆ. ಅಧಿಕಾರಿಗಳಾರೂ ಉತ್ತರ ನೀಡಲು ಬರುವುದಿಲ್ಲ ಎಂದರು.
Be the first to comment