ಜಿಲ್ಲಾ ಸುದ್ದಿಗಳು
ಶಿರಸಿ:
ಲಕ್ಷಾಂತರ ಭಕ್ತರ ಆರಾಧ್ಯದೇವಿ, ಪ್ರಸಿದ್ಧ ಮಾರಿಕಾಂಬಾ ದೇವಿಯ ಸೇವೆಗೆ ದುಬಾರಿ ಶುಲ್ಕ ವಿಧಿಸಲು ಹೊರಟಿರುವ ಕ್ರಮಕ್ಕೆ ವ್ಯಾಪಕ ವಿರೋಧ ಕೇಳಿಬಂದ ಬೆನ್ನಲ್ಲೆ, ದೇವಸ್ಥಾನದ ಆಡಳಿಯ ಮಂಡಳಿ ತನ್ನ ನಿರ್ಧಾರದಿಂದ ವಾಪಸ್ ಸರಿಯುವ ಸೂಚನೆ ನೀಡಿದೆ.
ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಮಾಡಲಾಗಿತ್ತು. ಅಲ್ಲದೆ ಕೆಲವೊಂದು ಸೇವೆಗಳನ್ನು ಎರಡಮೂರು ಪಟ್ಟು ಹೆಚ್ಚಿಸಲಾಗಿತ್ತು. ಆದರೆ, ಇದಕ್ಕೆ ಭಕ್ತರಿಂದ ಭಾರೀ ವಿರೋಧ ಕೇಳಿಬಂದಿದ್ದು, ಹಲವರು ಪತ್ರ ಬರೆದು ಆಡಳಿತ ಮಂಡಳಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲ, ಶ್ರದ್ಧಾ ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ಹೊಂದಿಸುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತರ ವಲಯದಲ್ಲಿ ಕೇಳಿಬಂದಿತ್ತು. ಹೀಗಾಗಿ ದರ್ಮದರ್ಶಿ ಮಂಡಳಿ, ಬಾಬುದಾರ ಮುಖ್ಯಸ್ಥರು, ಮೇಲಾಧಕಾರಿಗಳು ಸಂಬoಧಪಟ್ಟವರೊoದಿಗೆ ಚರ್ಚಿಸಿ, ಭಕ್ತರಿಗೆ ಹೊರೆಯಾಗದಂತೆ ಸೇವಾದರ ಪರಿಷ್ಕರಿಸಲಾಗುವುದು. ಮುಂದಿನ ತೀರ್ಮಾನದವರೆಗೆ ಹಳೆಯ ಸೇವಾ ದರವನ್ನೇ ಮುಂದುವರಿಸಲಾಗುವುದು ಎಂದು ದೇವಸ್ಥಾನದ ಅಧ್ಯಕ್ಷರಾದ ರವೀಂದ್ರ ನಾಯ್ಕ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ವರದಿ: ಸ್ಪೂರ್ತಿ ಎನ್ ಶೇಟ್
Be the first to comment