45 ವರ್ಷ ಮೇಲ್ಪಟ್ಟ ಎರಡನೇ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳುವ ನಾಗರಿಕರು ಬೇಗನೇ ಲಸಿಕೆಯನ್ನು ಹಾಕಿಸಿಕೊಳ್ಳಿರಿ…!!! ಹಿಂದೆ ಕೊರೊನಾ ಲಸಿಕೆಗೆ ಅಪಪ್ರಚಾರ ಮಾಡಿದವರೇ ಇಂದು ಲಸಿಕಾ ಉತ್ಪಾದನೆಗೆ ದೇಣಿಗೆ ಹಣ ನೀಡುತ್ತಿದ್ದಾರೆ: ಬಿಜೆಪಿ ತಾಲೂಕಾಧ್ಯಕ್ಷ ಪರಶುರಾಮ ಪವಾರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಪಟ್ಟಣದ ಕೆಬಿಎಂಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡಿರುವ ಕೊವಿಶೀಲ್ಟ್ ಲಸಿಕಾ ಅಭಿಯಾನಕ್ಕೆ ಬೆಳಿಗ್ಗೆ 10 ಗಂಟೆಯಿಂದಲೇ ಕೊವಿಶೀಲ್ಡ್ ಎರಡನೇ ಲಸಿಕೆ ಹಾಕಿಸಿಕೊಳ್ಳಲು 45 ವರ್ಷ ಮೇಲ್ಪಟ್ಟ ನಾಗರಿಕರು ಆಗಮಿಸಿ ಲಸಿಕೆಯನ್ನು ಹಾಕಿಸಿಕೊಂಡರು. ಲಸಿಕಾ ಅಭಿಯಾನಕ್ಕೆ ಯಾವುದೇ ಗದ್ದಲಾಗಬಾರದು ಎಂದು ಆರೋಗ್ಯ ಹಾಗೂ ಪುರಸಭೆ ಅಧಿಕಾರಿಗಳಿಂದ ನಾಗರಿಕರಿಗೆ ಕುಳಿತುಕೊಳ್ಳಲು ಸಾಮಾಜಿಕ ಅಂತರದಲ್ಲಿ ಶಾಲಾ ಬೆಂಚಗಳನ್ನು ಹಾಕಲಾಗಿದ್ದು ಯಾವುದೇ ಗದ್ದಲವಾಗದೇ ಶಾಂತರೀತಿಯಲ್ಲಿ ಲಸಿಕಾ ಅಭಿಯಾನ ಪ್ರಾರಂಬವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುದ್ದೇಬಿಹಾಳ ಮಂಡಲ ಬಿಜೆಪಿ ಅಧ್ಯಕ್ಷ ಪರಶುರಾಮ ಪವಾರ, ಕೊರೊನಾ ವೈರಾನಿಗೆ ವಿಶ್ವವೇ ತತ್ತರಿಸಿದಾಗ ಕೇಂದ್ರ ಸರಕಾರದ ಸಹಕಾರದಿಂದ ಅದಕ್ಕೆ ಲಸಿಕೆ ಕಂಡುಹಿಡಿಲಾಯಿತು. ಅಲ್ಲದೇ ಪ್ರಧಾನಿ ಮೋದಿಯವರು ಭಾರತದಲ್ಲಿ ಕಂಡುಕೊಂಡಂತಹ ಲಸಿಕೆಯನ್ನು ಹೊರ ದೇಶಗಳಿಗೂ ಉಚಿತವಾಗಿ ನೀಡಿದ್ದರು. ಇದಕ್ಕೆ ಪ್ರತಿಫಲವಾಗಿ ಎರಡನೇ ಕೊರೊನಾ ಅಲೆಗೆ ಹೊರ ದೇಶದಿಂದ ಭಾರತಕ್ಕೆ ಆಮ್ಲಜನಕ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ಉಡುಗೊರೆಯಾಗಿ ಬಂದಿವೆ. ಇಂತಹ ಏಳಿಗೆಯನ್ನು ಸಹಿಸದ ಕೆಲವರು ಲಸಿಕೆ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸಿದ್ದರು. ಆತಂಕದಿಂದ ಕೆಲ ನಾಗರಿಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿ ನಿರ್ಲಕ್ಷ ಮಾಡಿದರು. ಆದರೆ ಈಗ ಹಿಂದೆ ವಿರೋಧಿಸಿದವರೇ ಲಸಿಕೆ ಉತ್ಪಾದನೆಗಾಗಿ ಹಣ ದೇಣಿಗೆಯನ್ನು ನೀಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಲೇವಡಿ ಮಾಡಿದರು.



ಅಪಪ್ರಚಾರ ಮಾಡುವವರ ಮಾತಿಗೆ ಕಿವಿಗೊಟ್ಟು ನ್ಯಾಯಾಲಯವೂ ಕೇಂದ್ರ ಸರಕಾರಕ್ಕೆ ಕೂಡಲೇ ಎರಡನೇ ಲಸಿಕೆಯನ್ನು ಜನರಿಗೆ ಒದಗಿಸಬೇಕು ಎಂದು ಹೇಳಿತು. ಆದರೆ ಒಂದು ಲಸಿಕೆಯನ್ನು ಮಾಡಿದ ಸಂದರ್ಭದಲ್ಲಿ ಲಸಿಕೆಯನ್ನು ತಿಂಗಳು ಗಟ್ಟಲೇ ಇಟ್ಟುಕೊಳ್ಳಲು ಸಾದ್ಯವಾಗದ ಮಾತಾಗಿದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಕೇಂದ್ರ ಸರಕಾರ ಜನತೆ ಆರೋಗ್ಯದ ಹಿತ ದೃಷ್ಠಿಯಿಂದಲೇ ಲಸಿಕೆ ತಯ್ಯಾರಿಕೆಯನ್ನು ಮಾಡುತ್ತಿದೆ. ಆದರೆ ಮೊದಲನೇ ಲಸಿಕೆಗೆ ಕೆಲ ಅವಿವೇಕಿಗಳು ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಜನರು ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಆದರೆ ಎರಡನೇ ಲಸಿಕೆ ಹಾಕುವ ಸಂದರ್ಭದಲ್ಲಿ ಮೊದಲನೇ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಯವರು ಈಗಾಗಲೇ ಪ್ರಥಮವಾಗಿ ಎರಡನೇ ಲಸಿಕೆಯನ್ನು ಹಾಕಲು ಆದೇಶ ಹೊರಡಿಸಿದ್ದು ಕೂಡಲೇ 45 ವರ್ಷದ ಮೇಲ್ಪಟ್ಟ ಮೊದಲನೇ ಲಸಿಕೆ ಹಾಕಿಸಿಕೊಂಡ ಎಲ್ಲ ನಾಗರಿಕರೂ ಎರಡನೇ ಲಸಿಕೆಯನ್ನು ಹಾಕಿಕೊಂಡು ಮುಂದಿನ ಮೊದಲನೇ ಲಸಿಕೆ ಹಾಕಿಸಿಕೊಳ್ಳುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಪ್ರೋ.ಎಸ್.ಎಸ್.ಹೂಗಾರ ಮಾತನಾಡಿ, ಕೊರೊನಾ ಹೆಮ್ಮಾರಿಯಿಂದ ಹೆಚ್ಚಿನ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವ ಕೊವಿಶೀಲ್ಡ್ ಎರಡನೇ ಲಸಿಕಾ ಅಭಿಯಾನವನ್ನು ಯಾವುದೇ ಗದ್ದಲವಿಲ್ಲದೇ ನಡೆಸುವಂತ ಸೂಕ್ತ ಸ್ಥಳಾವಕಾಶವನ್ನು ಸ್ಥಳೀಯ ಶಾಸಕರು ಮಾಡಿದ್ದು ತಾಲೂಕಿನಲ್ಲಿ ಎರಡನೇ ಲಸಿಕೆ ಹಾಕಿಕೊಳ್ಳುವ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರೂ ಮುದ್ದೇಬಿಹಾಳ ಪಟ್ಟಣದ ಕೆಬಿಎಂಪಿಎಸ್ ಶಾಲೆಗೆ ಆಗಮಿಸಿ ಲಸಿಕೆಯನ್ನು ಹಾಕಿಕೊಂಡು ಕೊರೊನಾದಿಂದ ಮುಕ್ತರಾಗಬೇಕು. ಅಲ್ಲದೇ ಲಸಿಕೆ ಹಾಕಿಸಿಕೊಂಡ ಪ್ರತಿಯೊಬ್ಬರೂ ಸರಕಾರದ ನಿಯಮವಾಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೂಕ್ತವಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆಯಲ್ಲಿ ಕೊರೊನಾ ಫ್ರೆಂಟಲೈನ್ ವಾರಿಯರ್ಸ್ ಆಗಿರುವ ಮಾದ್ಯಮದವರಿಗೆ ಸರಕಾರದ ಆದೇಶದಂತೆ ಮೊದಲ ಹಂತದ ಲಸಿಕೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಪುರಸಭ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ, ನಗರ ಕೋವಿಡ್ 19 ತಂಡದ ಮೇಲ್ವಿಚಾರಕ ಎಂ.ಎಸ್.ಗೌಡರ, ಶುಶ್ರೂಷಣಾದಿಕಾರಿ ಎಸ್.ಎಸ್.ಮಾಗಿ, ರೇಷ್ಮಾ ಚವ್ಹಾಣ, ಪ್ರಕಾಶ್ ತೊಳಲದಿನ್ನಿ, ಪ್ರಭು ಮಸೂತಿ, ಗಂಗಾಧರ ಅಚ್ಯಾಳ, ಆಶಾ ಕಾರ್ಯಕರ್ತೆ ಶಿವಕಾಂತಮ್ಮ ಮೇಟಿ, ಸಮಾಜ ಸೇವಕ ಬಸಯ್ಯ ನಂದಿಕೇಶ್ವರಮಠ, ವಿಜಯಕುಮಾರ ಬಡಿಗೇರ ಇದ್ದರು.

 

Be the first to comment

Leave a Reply

Your email address will not be published.


*