ಜಿಲ್ಲಾ ಸುದ್ದಿಗಳು
ಹೊನ್ನಾವರ
ತಾಲೂಕಿನ ಕಾಸರಕೋಡ್ ಇಕೋ ಪಾರ್ಕ್ ಅಂತಾರಾಷ್ಟ್ರೀಯ ಮನ್ನಣೆ ಪಡೆದು ಪ್ರವಾಸಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಪ್ರತಿ ದಿನವು ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿ ನಿರ್ವಹಣೆ ಮಾಡಬೇಕಾದವರ ಅಸರ್ಮಪಕ ನಿರ್ವಹಣೆಯಿಂದ ಪಾರ್ಕ ಸೊಬಗು ಕುಂದುತ್ತಿದೆ.
ಬ್ಯೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಸನಿಹದಲ್ಲೆ ಇರುವ ಇಕೋ ಪಾರ್ಕನ ಸೌಂದರ್ಯ ವಿಕ್ಷಿಸಲು ದೇಶದ ವಿವಿಧಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ. ಪಾಳು ಬಿದ್ದ ಕಲಾಕೃತಿಗಳು ಅಲ್ಲಿಯ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಪ್ರವಾಸಿಗರು ಕುಳಿತುಕೊಂಡು ಪ್ರಕೃತಿ ಸೌಂದರ್ಯ ಆಸ್ವಾಧಿಸಲು ಮಾಡಲಾದ ಬೆಂಚುಗಳು ಅಪಾಯ ಸ್ಥಿತಿ ಇದ್ದರೂ ಮೇಲ್ಬಾವಣೆ ಈಗಲೋ ಆಗಲೋ ಮುರಿದು ಬೀಳುವಂತಿದೆ. ಕೆಳಗೆ ಕುಳಿತವರ ಮೇಲೆ ಬಿದ್ದು ಅವಘಡ ವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೆಲವು ಕಡೆ ಮೇಲ್ಬಾವಣೆಯ ತಗಡು ತುಕ್ಕು ಹಿಡಿದಿದೆ. ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಬಿದ್ದು, ಸ್ವಚ್ಚತೆ ಮರಿಚೀಕೆಯಾಗಿದೆ. ಪಾರ್ಕ ಪಕ್ಕದಲ್ಲಿ ಒಂದು ಹೊಂಡದಲ್ಲಿ ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ತುಂಬಲಾಗಿದ್ದು ನಿರ್ವಹಣೆಯಾಗುತ್ತಿಲ್ಲ. ಶೌಚಾಲಯದ ಸ್ಥಿತಿ ಹೇಳತೀರದಾಗಿದ್ದು, ಗಬ್ಬೆದ್ದು ನಾರುತ್ತಿದೆ. ಶೌಚಾಲಯ ಒಳಗೆ ಹೋದರೆ ಆರೋಗ್ಯ ಕೆಡುವಂತಿದೆ. ಇಲ್ಲಿ ನೀರಿನ ವ್ಯವಸ್ಥೆಯು ಇಲ್ಲ. ಬಾಗಿಲು ಸರಿಯಾಗಿಲ್ಲ. ಮೇಲ್ಬಾವಣೆಯ ತಗಡು ಮುರಿದು ಬಿದ್ದು, ಈಗಲೋ ಆಗಲೋ ಬೀಳುವಂತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದು ಹೊನ್ನಾವರದ ಕೀರ್ತಿಯನ್ನು ಎತ್ತರಕ್ಕೆ ಎತ್ತಿದ ಕೀರ್ತಿ ಕಾಸರಕೋಡ ಇಕೋ ಬೀಚ್ ಗೆ ಸಲ್ಲುತ್ತದೆ. ಈ ಕೀರ್ತಿಯನ್ನು ಉಳಿಸಿಕೊಳ್ಳಬೇಕಾಗಿದೆ. ಸಂಬOಧ ಪಟ್ಟ ಹಿರಿಯ ಅಧಿಕಾರಿಗಳು ಇಂತಹ ಪ್ರವಾಸಿಸ್ಥಳದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿದೆ
Be the first to comment