ನಗರ ಸಭೆ ಪೌಕಾರ್ಮಿಕರಿಗೆ ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯಗಳ ವಿಂಗಡನೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ

ವರದಿ:ಬಸವರಾಜ ಹೆಳವರ ಬಾಗಲಕೋಟ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಬಾಗಲಕೋಟ ನಗರದ ಸ್ವಚ ಸರ್ವೇಕ್ಷಣಾ -2022 ರ ಸ್ವಚ ಭಾರತ ಅಭಿಯಾನದಡಿ ನಗರ ಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುರಕ್ಷಿತ ಮಹಿಳಾ ಅಭವೃದ್ಧಿ ಸಂಘ ಬಾಗಲಕೋಟ ಇವರ ಆಶ್ರಯದಲ್ಲಿ ನಗರ ಸಭೆ ಪೌಕಾರ್ಮಿಕರಿಗೆ ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ವಿಂಗಡನೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ 11/11/2021 ರಂದು ನಗರ ಸಭೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ.ದ್ಯಾವಪ್ಪ ಇವರು ಮಾತನಾಡಿ ಮನುಷ್ಯರು ಆರೋಗ್ಯವಾಗಿರಬೇಕಾದರೆ ಆಹಾರ ನೀರು ಏಷ್ಟು ಮುಖ್ಯವೋ ಅದೇ ರೀತಿ ನಮ್ಮ ಪರಿಸರವು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇರಬೇಕೆಂದು ತಿಳಿಸಿದರು.ಈ ಕಾರ್ಯಕ್ರಮದ ಅತಿಥಿಗಳಾದ ಶ್ರೀ ರಾಜಶೇಖರ್ ಪುರಾಣಿಕರು ಮಾಲಿನ್ಯ ನಿಯಂತ್ರಣ ಮಂಡಳಿ ಬಾಗಲಕೋಟ ಇವರು ಹಿಂದಿನ ದಿನಗಳಿಗಿಂತ ಈಗ ಪರಿಸರವು ಬಹಳ ಮಾಲಿನ್ಯ ವಾಗುತಿದ್ದೆ ಇದನ್ನು ತಡೆಯದಿದ್ದರೆ ಮುಂದೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಅರಣ್ಯ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ ಪರಿಸರಕ್ಕೆ ಹಾನಿಯಾಗುವದನ್ನು ತಪ್ಪಿಸಲು ತಿಳಿಸಿದರು.

ನಂತರ ನಗರ ಸಭೆ ಬಾಗಲಕೋಟೆಯ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಖಜ್ಜಿಡೋಣಿಯವರು ಸ್ವಚ ಭಾರತ ಅಭಿಯಾನದಲ್ಲಿ ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು 2014 ಅಕ್ಟೋಬರ 02 ರಂದು ಈ ಯೋಜನೆಯನ್ನು ಜಾರಿಗೆ ತಂದರು ಇವರ ಮುಖ್ಯ ಉದ್ದೇಶವೆಂದರೆ ನಮ್ಮ ದೇಶವನ್ನು ಸ್ವಚ್ಛಗೊಳಿಸಲು ಪ್ಲಾಸ್ಟಿಕ್ ಮುಕ್ತವಾಗಲು ಹಾಗೂ ಎಲ್ಲರ ಮನೆಯಲ್ಲಿ ತ್ಯಾಜ್ಯಗಳಾದ ಹಸಿಕಸ ,ಒಣಕಸ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಬೇರ್ಪಡಿಸಲು ಜನರಿಗೆ ಅರಿವು ಮೂಡಿಸಲು ತಿಳಿಸಿದರು.

ನಂತರ ಮತ್ತೋರ್ವ ಅತಿಥಿಗಳಾದ ಶ್ರೀ ಮನೋಜ್ ಕುಮಾರ್ ಪ್ಯಾಕ್ಟರಿಯ ಅಧಿಕಾರಿಯು ಬೇರ್ಪಡಿಸಿದ ತ್ಯಾಜ್ಯಗಳಾದ ಪ್ಲಾಸ್ಟಿಕ್ ವಸ್ತುಳನ್ನು ಒಗ್ಗೂಡಿಸಿ ನಮ್ಮ ಪ್ಯಾಕ್ಟರಿಗೆ ತಲುಪಿಸಿದರೆ ನಾವು ಅದನ್ನು ವಿಂಗಡನೆ ಮಾಡುತ್ತೇವೆಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಸುರಕ್ಷಿತ ಮಹಿಳಾ ಅಭಿವೃದ್ಧಿ ಸಂಸ್ಥಯ ಅಧ್ಯಕ್ಷರಾದ ಶ್ರೀ ಮತಿ ದ್ರಾಕ್ಷಾಯಿಣಿ ಲೋಕಾಪುರ ಇವರು ಸುಮಾರು 60 ವರ್ಷಗಳ ಹಿಂದೆ ನಿತ್ಯವೂ ಇಷ್ಟೊಂದು ಮಾಲಿನ್ಯ ಇರಲಿಲ್ಲ ಸ್ವಚ್ಛತೆಯ ಬಗ್ಗೆ ಸ್ವಾತಂತ್ರ್ಯಾ ಪೂರ್ವದಲ್ಲಿಯೂ ಮಹಾತ್ಮ ಗಾಂಧೀಜಿಯವರು ಕನಸಾಗಿತ್ತು. ಈಗ ಈ ಯೋಜನೆಯು ಜಾರಿಗೆಯಾಗಿದ್ದು ನಾವೆಲ್ಲರೂ ಆರೋಗ್ಯ ವಾಗಿರಬೇಕಾದರೆ ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿತಿಳಿಸಿದರು.ಕಾರ್ಯಕ್ರಮವನ್ನು ಮಹದೇವ್ ತುಪ್ಪದ ನಿರೂಪಿಸಿದರು,ಶರಣು ಬಸನಗೌಡರ ವಂದಿಸಿದರು.

Be the first to comment

Leave a Reply

Your email address will not be published.


*