ವಿಭಿನ್ನ ರೀತಿಯಲ್ಲಿ ಶಾಲಾರಂಭೋತ್ಸವಕ್ಕೆ ಚಾಲನೆ…! ಮಕ್ಕಳು ಕೊರೊನಾ ನಿರ್ಲಕ್ಷ್ಯ ಮಾಡಬೇಡಿ: ಗ್ರಾಪಂ ಮಾಜಿ ಅಧ್ಯಕ್ಷ ಎನ್.ರವಿ

ವರದಿ: ಹೈದರ್‌ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ಮಕ್ಕಳು ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯಿಂದ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯಿರಿ ಯಾವುದೇ ನಿರ್ಲಕ್ಷ್ಯ ಭಾವನೆ ಬೇಡ ಎಂದು ಕಾರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎನ್.ರವಿ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ 9ನೇ & 10ನೇ ತರಗತಿ ಮಕ್ಕಳ ಶಾಲಾ ಪ್ರಾರಂಭೋತ್ಸವಕ್ಕೆ ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಿದ್ದವು. ಇದೀಗ ಶಾಲೆಗಳು ತೆರೆದಿದ್ದು, 9 ಮತ್ತು 10ನೇ ತರಗತಿ ಮಕ್ಕಳಿಗೆ ಆಫ್‌ಲೈನ್ ತರಗತಿಗಳು ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸಿದೆ. ಸರಕಾರದ ಆದೇಶದಂತೆ ಕೊರೊನಾ ನಿಯಮಗಳನ್ನು ಛಾಚು ತಪ್ಪದೆ ಎಲ್ಲರೂ ಪಾಲಿಸುವಂತಾಗಬೇಕು. ಕೋವಿಡ್ ಹೆಮ್ಮಾರಿಯನ್ನು ಇಡೀ ದೇಶದಿಂದ ಓಡಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಗ್ರಾಪಂ ಸದಸ್ಯ ಎನ್.ಚಂದ್ರಶೇಖರ್ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಕಾಡುತ್ತಿದೆ. ಮಕ್ಕಳಿಗೆ ಯಾವುದೇ ಲಸಿಕೆ ಇನ್ನೂ ಬಂದಿಲ್ಲ. ಅಲ್ಲಿಯವರೆಗೆ ಶಾಲೆಗೆ ಹಾಜರಾಗುವಾಗ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಇಟ್ಟುಕೊಳ್ಳಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಯೇ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಮಾತನಾಡಬೇಕು ಎಂದು ಸಲಹೆ ಮಾಡಿದರು.

ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾವರಣದಲ್ಲಿ ಗಾಳಿಪಟ, ಪ್ಯಾರಚೂಟ್ ಮತ್ತು ಬಲೂನ್‌ಗಳನ್ನು ಆಗಸಕ್ಕೆ ಹಾರಿಸುವುದರ ಮೂಲಕ ಮಕ್ಕಳನ್ನು ಶಾಲೆಗೆ ಶಾಲಾ ಆಡಳಿತ ಮಂಡಳಿ, ಎಸ್‌ಡಿಎಂಸಿ ಮತ್ತು ಗ್ರಾಪಂ ವತಿಯಿಂದ ಸ್ವಾಗತಿಸಲಾಯಿತು. ೯ ಮತ್ತು ೧೦ನೇ ತರಗತಿ ಮಕ್ಕಳಿಗೆ ಸ್ಯಾನಿಟೈಸರ್ ಮತ್ತು ಹೂ ನೀಡಿ ಶಾಲೆಯೊಳಗೆ ಬರಮಾಡಿಕೊಳ್ಳಲಾಯಿತು. 

ಈ ವೇಳೆಯಲ್ಲಿ ಗ್ರಾಪಂ ಪಿಡಿಒ ಎಸ್.ಕವಿತಾ, ಸದಸ್ಯರಾದ ಕಾರಹಳ್ಳಿ ಕೆಂಪಣ್ಣ, ಕೇಶವ ಮೂರ್ತಿ, ಮುಖಂಡ ಜನಕಮಣಿ, ಶಾಲಾ ಮುಖ್ಯ ಶಿಕ್ಷಕಿ ವೇದಾವತಿ, ಎಸ್‌ಡಿಎಂಸಿ ಸದಸ್ಯ ಮಂಜುನಾಥ್, ಶಾಲಾ ಶಿಕ್ಷಕವೃಂದ, ಮಕ್ಕಳು ಇದ್ದರು.

Be the first to comment

Leave a Reply

Your email address will not be published.


*