ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಆರ್ಥಿಕ ಪರಿಸ್ಥಿತಿಯ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳಿಗೆ ತೆರಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಕಳೆದ ಮೂರು ದಿನದಿಂದ ನರಕಯಾತನೆ ಅನುಭವಿಸಿದಂತಾಗುತ್ತಿದೆ.
ಹೌದು, ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿನ ಬಾಣಂತಿಯ ಕೊಠಡಿಯಲ್ಲಿ ನೀರಿರದ ಕಾರಣ ಮಲಮೂತ್ರ ವಿಸರ್ಜನೆ ಮಾಡಿದ ನಂತರ ನೀರು ಹಾಕಲು ಹನಿ ನೀರಿಲ್ಲದ ದುಸ್ಥಿತಿ ಎದುರಾಗಿದೆ. ಆದರೆ ಇದರ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಕೇಳಿದರೆ ಆಸ್ಪತ್ರೆಯಲ್ಲಿ ಯಾವುದೇ ನೀರಿನ ಕೊರತೆ ಇಲಾ. ಕೆಳವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಬೇಜವಾಬ್ದಾರಿತ ಉತ್ತರವನ್ನು ನೀಡುತ್ತಾರೆ.
ಹೈಟೇಕ್ ಆಸ್ಪತ್ರೆಯಲ್ಲಿನ ನರಕಯಾತನೆ:
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯು ಸುಮಾರು ೧೦೦ ಹಾಸಿಗೆ ಇರುವ ಹೈಟೇಕ್ ಆಸ್ಪತ್ರೆಯಾಗಿದೆ. ಅಲ್ಲದೇ ಹಿಂದೆ ಇದೇ ಆಸ್ಪತ್ರೆಯಲ್ಲ ಸಕಲ ಸೌಕರ್ಯಗಳಿದ್ದವು. ಆದರೆ ಅವುಗಳ ನಿರ್ವಹಣೆ ಇಲ್ಲದೇ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಮೂಲ ಸೌಕರ್ಯವಿಲ್ಲದಂತಾಗಿದೆ.
ಗಬ್ಬು ನಾರುತ್ತಿರುವ ಶೌಚಾಲಯಗಳು:
ತಾಲೂಕಾ ಆಸ್ಪತ್ರೆಯ ಸ್ವಚ್ಚತೆಗಾಗಿ ಸರಕಾರ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಪಡೆದುಕೊಂಡ ಗುತ್ತಿಗೆದಾರರು ಅಲ್ಲಿನ ಸ್ವಚ್ಚತೆ ಬಗ್ಗೆ ನಿತ್ಯವೂ ಗಮನಹರಿಸುವ ಕರ್ತವ್ಯವನ್ನು ಕೈಬಿಟ್ಟ ಕಾರಣ ಆಸ್ಪತ್ರೆಯ ಶೌಚಾಲಯಗಳು ಗಬ್ಬು ವಾಸನೆಯಿಂದಲೇ ಕೂಡಿರುತ್ತವೆ. ಅಲ್ಲದೇ ಇಂತಹ ಶೌಚಾಲಯದಲ್ಲಿಯೇ ಇಲ್ಲಿಗೆ ಬರುವ ಬಾಣಂತಿಯರು ಉಪಯೋಗಿಸುವ ಅನಿವಾರ್ಯ ಎದುರಾಗಿದೆ.
ಕತ್ತಲೆಯ ಕೊಠಡಿಯಲ್ಲಿಯೇ ಬಾಣಂತಿಯರು:
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಂತಹ ಬಾಣಂತಿಯರಿಗಾಗಿ ಪ್ರತ್ಯೇಕವಾದ ಕೊಠಡಿಯನ್ನು ಮಾಡಲಾಗಿದೆ. ಆದರೆ ಕೊಠಡಿಯಲ್ಲಿ ಯಾವುದೇ ವಿದ್ಯುತ್ ದೀಪ ಹತ್ತಲಾರದ ದುಸ್ಥಿತಿಯಲ್ಲಿವೆ. ಇದರಿಂದ ಬಾಣಂತಿಯರು ಹಾಗೂ ಅವರೊಂದಿಗೆ ಬಂದಂತಹ ಸಂಬಂಧಿಕರು ರಾತ್ರಿ ಪೂರ್ತಿ ಕತ್ತಲಲ್ಲೆ ಇರಬೇಕಾಗಿದೆ.
ವಿಜಯಪುರ ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯ ವೈದ್ಯರು ನೀಡುವ ಸೇವೆಯಿಂದ ಪ್ರಸಿದ್ಧ ಪಡೆದೆ. ಆದರೆ ಬಾಣಂತಿಯರ ಕೊಠಡಿಯಲ್ಲಿ ಹನಿ ನೀರು ಇಲ್ಲದಿರುವುದು ವಿಪರ್ಯಾಸವಾಗಿದೆ. ಬಾಣಂತಿಯರಿಗೆ ನೀರು ಬೇಕಾದರೆ ಪ್ರತಿ ೧ಲೀಟರ ಬಾಟಲಿಗೆ ೧೦ ರೂಪಾಯಿ ಕೊಟ್ಟು ತರಬೇಕು. ನಾವು ಹೊರಗಡೆ ಹೋಗಿ ಬರುತ್ತೇವೆ. ಆದರೆ ಬಾಣಂತಿಯರು ಹೊರಗಡೆ ಹೋಗಲು ಸಾದ್ಯವಾ..?
-ಗದ್ದೆಮ್ಮ ಬಿರಾದಾರ, ಬಾಣಂತಿಯೊಂದಿಗೆ ಬಂದ ವೃದ್ದೆ.ತಾಲೂಕಾ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಒದಗಿಸಬೇಕಾದ ಬಿಸಿ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
-ಡಾ.ಸತೀಶ ಬಾಗವಾನ, ತಾಲೂಕಾ ಆರೋಗ್ಯಾಧಿಕಾರಿಗಳು, ಮುದ್ದೇಬಿಹಾಳ.
Be the first to comment