ಡಿ. 22 ಬೆಳಗಾವಿ ಚಲೋ: ಜಿಲ್ಲೆಯಿಂದ ಸಹಸ್ತ್ರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣ ದಾರರು ಪಾಲ್ಗೊಳ್ಳುವಿಕೆ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಕುಮಟಾ

ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಬೆಳಗಾಂವ ಚಲೋ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಭಾಗವಹಿಸಲು ತೀರ್ಮಾನಿಸಲಾಯಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಇಂದು ಕುಮಟ ತಾಲೂಕಿನ ಮಹಾಸತಿ ಸಭಾಂಗಣದಲ್ಲಿ ಬೆಳಗಾಂವ ಚಲೋ ಕಾರ್ಯಕ್ರಮಕ್ಕೆ ಸಂಬoಧಿಸಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮೇಲಿನಂತೆ ತಿರ್ಮಾನಿಸಲಾಯಿತು.ಅರಣ್ಯವಾಸಿಗಳ ಸಮಸ್ಯೆ ತಾಂತ್ರಿಕ ಹೋರಾಟದ ಹಿನ್ನೆಲೆಯಲ್ಲಿ ಕಳೆದ ೩೦ ವರ್ಷದಿಂದ ನಿರಂತರ ಹೋರಾಟ ಜರುಗಿಸಿದರು ಕಾನೂನಾತ್ಮಕ ಯಶಸ್ಸು ಸಿಗದಿರುವುದು ವಿಷಾದಕರ. ಈ ದಿಶೆಯಲ್ಲಿ ಸರಕಾರಕ್ಕೆ ಹೆಚ್ಚಿನ ಒತ್ತಡ ಹೆರುವ ಹಿನ್ನೆಲೆಯಲ್ಲಿ ಬೆಳಗಾಂವ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅಲ್ಲದೇ, ಪ್ರಸಕ್ತ ಚಳಿಗಾಲದ ಅದಿವೇಶನದಲ್ಲಿ ಸರಕಾರ ಗಂಭೀರವಾಗಿ ಚರ್ಚಿಸಿ ಅರಣ್ಯವಾಸಿಗಳ ಪರ ನಿಲುವನ್ನು ತೆಗೆದುಕೊಳ್ಳಬೇಕೆಂದು ಅವರು ಅಗ್ರಹಿಸಿದರು.

CHETAN KENDULI

ಜಿಲ್ಲಾ ಪ್ರಧಾನ ಸಂಚಾಲಕರಾದ ಜಿ.ಎಮ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಾಂಘೀಕ ಹೋರಾಟ ಮಾಡಿದರೆ ಮಾತ್ರ ಹಕ್ಕು ಪಡೆಯಲು ಸಾಧ್ಯ, ಹೋರಾಟದಿಂದಲೇ ಮಾತ್ರ ನ್ಯಾಯ ಸಿಗಲು ಅವಕಾಶ. ಹೆಚ್ಚಿನಸಂಖ್ಯೆಯಲ್ಲಿ ಅತಿಕ್ರಮಣದಾರರು ಬೆಳಗಾಂ ಚಲೋಗೆ ಬರಲು ಕರೆನೀಡಿದರು.ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೊನ್ನಪ್ಪ ನಾಯ್ಕ ಮಾತನಾಡುತ್ತ ಹೊರಾಟಕ್ಕೆ ತಮ್ಮ ಸಹಕಾರವನ್ನು ಘೋಷಿಸಿದರು. ಸಭೆಯಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಪ್ರಾಸ್ತವಿಕ ಹಾಗೂ ಸ್ವಾಗತವನ್ನು ಮಾಡಿದರು. ವೇದಿಕೆ ಮೇಲೆ ಸೀತಾರಾಮ ನಾಯ್ಕ ಬೊಗ್ರಿಬೈಲ್ , ಸುರೇಶ ಪಟಗಾರ, ಸಾರಂಬಿ ಶೇಖ್, ಯಾಕೂಬ್ ಬೆಟ್ಕುಳಿ, ಗಜಾನನ ಪಟಗಾರ ಹೆಗಡೆ, ಮಹೇಂದ್ರ ನಾಯ್ಕ ಕತಗಾಲ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*