ಶಿರಸಿ: ರಸ್ತೆ ಅತಿಕ್ರಮಿಸಿ ನಿರ್ಮಿಸಿದ ಕಾಂಪೌಂಡ್ ತೆರವು…!

ವರದಿ: ಗಣೇಶ್ ಆಚಾರಿ ಶಿರಸಿ

ಜಿಲ್ಲಾ ಸುದ್ದಿಗಳು

 ಶಿರಸಿ:

CHETAN KENDULI

ಗಣೇಶ ನಗರದ ಬೆನಕ ಕಾಲೋನಿಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ರಸ್ತೆ ಅತಿಕ್ರಮಿಸಿ ಕಾಂಪೌಂಡ್ ನಿರ್ಮಾಣ ಕಾರ್ಯ ಕೈಗೊಂಡಿದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ನಗರ ಸಭೆಯ ವಾರ್ಡ್ ನಂಬರ್ ಒಂದರ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ತೀವ್ರ ಇಕ್ಕಟ್ಟಾಗಿತ್ತು ಹಾಗೂ ತಿರುವಿನಿಂದ ಕೂಡಿದ ರಸ್ತೆಯನ್ನೆ ಅತಿಕ್ರಮಣ ನಡೆಸಿ ಕಾಂಪೌಂಡ್ ನಿರ್ಮಿಸುವುದನ್ನು ವಿರೋಧಿಸಿ 25 ಕ್ಕೂ ಹೆಚ್ಚಿನ ಮನೆಯವರು ನಗರ ಸಭಾ ಆಯುಕ್ತರಿಗೆ ಮನವಿ ನೀಡಿದ್ದರು.

 ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದ ನಗರ ಸಭಾ ಆಯುಕ್ತ ಕೇಶವ ಚೌಗುಲೆಯವರು ಇಂದು ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಅಕ್ರಮ ಕಾಂಪೌಂಡ್ ತೆರವುಗೊಳಿಸಿದ್ದಾರೆ.

Be the first to comment

Leave a Reply

Your email address will not be published.


*