ಜಿಲ್ಲಾ ಸುದ್ದಿಗಳು
ಮಸ್ಕಿ:
ತಾಲೂಕಿನ ನಾಗರಬೆಂಚಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾಕ್ಟರ. ಬಿ. ಆರ್ ಅಂಬೇಡ್ಕರ್ ರವರ ನೂತನ ಪ್ರತಿಮೆ ಅನಾವರಣ ಹಾಗೂ ಅಂಬೇಡ್ಕರ್ ರರ 131 ನೇ ಹಾಗೂ 118 ನೇ ಬಾಬು ಜಗಜೀವನ ರಾಮ್ ರ ಜಯಂತ್ಯೋತ್ಸವ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಮೊದಲಿಗೆ ಕ್ಷೇತ್ರದ ಶಾಸಕರಾದ ಆರ್. ಬಸನಗೌಡ ತುರುವಿಹಾಳ ಹಾಗೂ ಗಚ್ಚಿನ ಮಠದ ಶ್ರೀಗಳಾದ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಳ ಅಭಯಾಸ್ತದಿಂದ ಬಾಬಾ ಸಾಹೇಬ ಅಂಬೇಡ್ಕರ್ ರವರ ನೂತನ ಮೂರ್ತಿ ಯನ್ನು ಉದ್ಘಾಟಿಸುವ ಮೂಲಕ ಅನಾವರಣ ಮಾಡಲಾಯಿತು. ತತ್ ಕ್ಷಣವೇ ಶಾಸಕರೇ ಗ್ರಾಮದ ವಿವಿಧ ವೃತ್ತಗಳಾದ ಬಸವೇಶ್ವರ, ಕನಕದಾಸ, ವಾಲ್ಮೀಕಿ ವೃತ್ತಗಳಿಗೆ ಹೂವಿನ ಹಾರ ಹಾಕಿದರು.
ವೇದಿಕೆಗೆ ಗಣ್ಯರನ್ನು ಶಾಲೂ ಹೂವಿನ ಮಾಲೆ ಹಾಕುವ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲಿಗೆ ಪ್ರಾರ್ಥನಾ ನೃತ್ಯ ಮಾಡಲಾಯಿತು.
ಪ್ರಾಸ್ತಾವಿಕ ಭಾಷಣ ಮಾಡುತ್ತಾ ಡಾಕ್ಟರ ಬಾಬಾ ಸಾಹೇಬ ಅಂಬೇಡ್ಕರ್ ರವರು ಎಸ್ಸಿ ಎಸ್ಟಿ ಯವರಿಗೆ ಮಾತ್ರ ಸೀಮಿತವಾಗಿ ಅವರು ಸಂವಿಧಾನ ವನ್ನು ಬರಿಯಲಿಲ್ಲ, ಭಾರತ ದೇಶದ ತುಳಿತಕ್ಕೊಳಗಾದ ಕಟ್ಟ ಕಡೆಯ ವ್ಯಕ್ತಿಯು ಸದುಪಯೋಗ ಪಡೆದುಕೊಳ್ಳಲಿ ಎಂದು ಅಂಬೇಡ್ಕರ್ ರರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಹೆಚ್. ಬಿ ಮುರಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೇ, ಸಂವಿಧಾನವನ್ನು ಬರೆಯದೇ ಇದ್ದರೇ ಇಷ್ಟು ಸ್ವಾತಂತ್ಯ್ರ ವಾಗಿ ಜೀವನ ಮಾಡಲು ಸಾಧ್ಯವಾಗಿದೆ. ಬರೀ ಹೊಲೆಯ ಮಾದಿಗರು ಮಾತ್ರ ದಲಿತರಲ್ಲಾ, ಲಿಂಗಾಯತರಿಂದ ಹಿಡಿದು ಹೊಲೆಯರ ವರೆಗೂ ದಲಿತರೇ ಹಾಗೆಯೇ ಮನುವಾದಿಗಳಿಗೆ ಸೋತು, ನೊಂದು ,ಬೆಂದ ಎಲ್ಲಾ ವರ್ಗದವರೂ ಒಂದಾಗಿ ತಕ್ಕ ಪಾಠ ಕಲಿಸಬೇಕು ಎಂದು ಬಹಳ ಅಚ್ಚುಕಟ್ಟಾಗಿ ಬಿಡಿ ಬಿಡಿ ಯಾಗಿ ತಿಳಿ ಹೇಳಿದರು. ಹಾಗೆಯೇ ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವರಾಂ ರವರು ಬಡತನದ ದಿಂದ ನಲುಗುತ್ತಿದ್ದಂತಹ ಸಂದರ್ಭದಲ್ಲಿ
ಕೃಷಿ ನೀತಿ ಕಾಯ್ದೆ ಜಾರಿಗೆ ತರುವ ಮೂಲಕ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಯಿತು ಎಂದು ಸರ್ವರ ಮನಮುಟ್ಟುವಂತೆ ಬಾಲಸ್ವಾಮಿ ಕೊಡ್ಲಿ ತಿಳಿಸಿದರು.
ನಂತರ ಗ್ರಾಮದ ಹಾಗೂ ಸಂತ ಜಾನರ ಶಾಲೆ ಮಸ್ಕಿ ವಿಧ್ಯಾರ್ಥಿನಿಯರು ಮಹಾನಾಯಕ ನೃತ್ಯವನ್ನೂ ಮಾಡಿದರು.
ಬಾಬಾ ಸಾಹೇಬ ಅಂಬೇಡ್ಕರ್ ರವರು ಬಾಬು ಜಗಜೀವನರಾಂ ರವರಿಗಿಂತಲೂ 13 ವರ್ಷ ದೊಡ್ಡವರು ಅಂಬೇಡ್ಕರ್ ಬುದ್ಧಿಯಲ್ಲಿ ದೊಡ್ಡವರು, ಜಗಜೀವನರಾಮ್ ರಾಜಕೀಯ ಅನುಭವದಲ್ಲಿ ದೊಡ್ಡವರು, ಯಾರು ಹದಿನಾಲ್ಕನೇ ಮಗನಾಗಿ ಹುಟ್ಟಿರುವರೋ ಅವ್ರು ಜ್ಞಾನದಲ್ಲಿ ಪ್ರವೀಣರಾಗಿರುತ್ತಾರೆ.ಯಾರಾದರೂ ಎಂಟನೇ ಮಗನಾಗಿ ಹುಟ್ಟಿದರೆ ಅವ್ರು ಬಾಬು ಜಗಜೀವನರಾಂ ರಂತೆ ಭಾರತ ದೇಶದ ಗಣ್ಯ ವ್ಯಕ್ತಿಗಳು ಆಗಿ ಬೆಳೆಯುವರು. ಬ್ರಾಹ್ಮಣರು ಮೀಸಲಾತಿ ವಿಚಾರದಲ್ಲಿ ಎಲ್ಲರಿಗೂ ಮೀಸಲಾತಿ ಸಮನಾಗಿರಲಿ ಎನ್ನುವುದು ಮುಖ್ಯವಲ್ಲ, ನೀವೂ ಕೂಡಾ ಹೊಲೆ ಮಾದಿಗ ಜನಾಂಗದವರನ್ನು ಮದುವೆ ಆದಾಗ ಮಾತ್ರ ಎಲ್ಲಾರೂ ಎಲ್ಲಾ ವಿಧದಲ್ಲೂ ಸಮಾನರು ಎಂಬುದನ್ನೂ ಜನತೆಯ ಮನ ಮುಟ್ಟುವಂತೆ ಭಾಷಣಕಾರರಾದ ಧಾರವಾಡ ವಿವಿಯ ನಿವೃತ್ತ ಕುಲಸಚಿವರು ಆದ ಡಾ. ಜಿ.ಬಿ ನಂದನ್ ರವರು ತಿಳಿಸಿದರು.
ಬಾಬು ಜಗಜೀವನರಾಂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಾನಪ್ಪ ನಿಲೋಗಲ್ ರನ್ನು ಸನ್ಮಾನಿಸಲಾಯಿತು.
ಸ್ವತಃ ಸಾಹಿತಿ ದಾನಪ್ಪ ರವರೇ ಬರೆದಿರುವಂತಹ ಅಂಬೇಡ್ಕರ ಹೇಳಿದ ಮಾತು ಮರೆಯಬೇಡಿ ಮರೆತು ಮಲಗಾಬೇಡಿ ಎಂಬ ಕ್ರಾಂತಿ ಗೀತೆಯನ್ನು ದಲಿತ ಸಂಗಡಿಗರಿಂದ ಹಾಡಿದರು.
ಕಾರ್ಯಕ್ರಮದ ಕೊನೆಯ ಗಟ್ಟ ಅಧ್ಯಕ್ಷೀಯ ಭಾಷಣವನ್ನು ಶಾಸಕರಾದ ಶ್ರೀ ಆರ್ ಬಸನಗೌಡ ತುರುವಿಹಾಳ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಪ್ಪ ಮಾನ್ವಿ ಹಾಗೂ ಜಯಪ್ಪ ಮಾಸ್ತರ ಮೆದಿಕಿನಾಳ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ವರರುದ್ರಮುನಿ ಶಿವಾಚಾರ್ಯರು ಗಚ್ಚಿನಮಠ, ಆರ್. ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ,ಡಾ. ಜಿ. ಬಿ ನಂದನ್ ನಿವೃತ್ತ ಕುಲ ಸಚಿವರು ಧಾರವಾಡ ವಿವಿ, ಮಾದೇವಪ್ಪ ಗೌಡ ಪೊಲೀಸ್ ಪಾಟೀಲ್ ಮಾಜಿ ಜಿ. ಪಂ ಸದಸ್ಯರು, ಹೆಚ್. ಬಿ ಮುರಾರಿ ಮಾಜಿ ಕೆಪಿಸಿಸಿ ಸದಸ್ಯರು,ದೊಡ್ಡಪ್ಪ ಮುರಾರಿ ಮಾಜಿ ಜಿ. ಪಂ ಸದಸ್ಯರು, ಬಾಲಸ್ವಾಮಿ ಕೊಡ್ಲಿ,ಗೋವಿಂದ ರಾಜ್ ಚಲನ ಚಿತ್ರ ನಟರು,ಗೋವಿಂದ ರಾಠೋಡ, ಸಿದ್ದನಗೌಡ ಮಾಜಿ ತಾ.ಪಂ ಸದಸ್ಯರು,ಮಂಜುಳಾ ಗಂಡ ಅಮರೇಶ್ ಮಾಜಿ ತಾ.ಪಂ ಸದಸ್ಯರು, ಹನುಮಂತಪ್ಪ ವೆಂಕಟಾಪುರ ಡಿ. ಎಸ್. ಎಸ್ ಜಿಲ್ಲಾ ಸಂಚಾಲಕರು, ಮಲ್ಲಯ್ಯ ಬಳ್ಳಾ ಎಮ್. ಆರ್ ಎಚ್. ಎಸ್ ಜಿಲ್ಲಾ ಉಪಾಧ್ಯಕ್ಷರು,ವಿವಿಧ ರಂಗದ ಗಣ್ಯರು, ವಿವಿಧ ಸಂಘಟನೆಗಳ ದಲಿತ ಮುಖಂಡರು ಸೇರಿದಂತೆ ಗ್ರಾಮದ ಯುವಕರಾದ ಅಶೋಕ ಕುಮಾರ್,ಗ್ಯಾನಪ್ಪ, ಅನಿಲ್ ಕುಮಾರ, ಸುರೇಶ ಸೇರಿದಂತೆ ನಾಗರಬೆಂಚಿ ಗ್ರಾಮದ ಸರ್ವ ಜನತೆಯು ಭಾಗಿಯಾಗಿದ್ದರು.
Be the first to comment